Saturday, August 30, 2025
HomeUncategorized2024 ಚುನಾವಣೆ: ಕೇಜ್ರಿವಾಲ್, ಮೋದಿ ನಡುವಿನ ಯುದ್ದ- ಉಪಮುಖ್ಯಮಂತ್ರಿ ಸಿಸೋಡಿಯಾ

2024 ಚುನಾವಣೆ: ಕೇಜ್ರಿವಾಲ್, ಮೋದಿ ನಡುವಿನ ಯುದ್ದ- ಉಪಮುಖ್ಯಮಂತ್ರಿ ಸಿಸೋಡಿಯಾ

ನವದೆಹಲಿ: ಮುಂಬರುವ 2024ರ ಲೋಕಸಭೆ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವಿನ ಚುನಾವಣೆ ಯುದ್ದವಾಗಿ ಮಾರ್ಪಡಲಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಆಡಳಿತದ ಕೇಂದ್ರ ಸರ್ಕಾರವು ಯಾವುದೇ ಅಬಕಾರಿ ವಂಚನೆಯ ಬಗ್ಗೆ ಚಿಂತಿಸುತ್ತಿಲ್ಲ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಬಲ ಪೈಪೋಟಿಯಾಗಿ ಅರವಿಂದ್ ಕೇಜ್ರಿವಾಲ್ ಆಗಿದ್ದಾರೆ. ಹೀಗಾಗಿ ಈ ರೀತಿಯ ಸಿಬಿಐ ದಾಳಿಗಳು ನಡೆಯುತ್ತಿವೆ. 2024 ರ ಚುನಾವಣೆ ಎಎಪಿ ಮತ್ತು ಬಿಜೆಪಿ ನಡುವೆ ಹೋರಾಟ ನಡೆಯಲಿದೆ ಎಂದರು.

ಅರವಿಂದ್​ ಕೇಜ್ರೀವಾಲ್‌ ಅವರನ್ನು ಭಯಗೊಳಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮೋದಿ ಮಾಡುತ್ತಿದ್ದಾರೆ. ಸಿಬಿಐ ಇನ್ನು ಮೂರ್‍ನಾಲ್ಕು ದಿನಗಳಲ್ಲಿ ನನ್ನನ್ನು ಬಂಧಿಸಲೂಬಹುದು. ಆದರೆ ಇದಕ್ಕೆ ಹೆಸರುವುದಿಲ್ಲ. ನಮ್ಮನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ಲೋಕಸಭಾ ಚುನಾವಣೆ ಕೇಜ್ರೀವಾಲ್ ಮತ್ತು ಮೋದಿ ನಡುವಿನ ಯುದ್ದ ಎಂದು ದೆಹಲಿ ಉಪಮುಖ್ಯಮಂತ್ರಿ ತಿಳಿಸಿದರು.

ನನ್ನ ನಿವಾಸ ಮಾತ್ರವಲ್ಲದೇ ಶಿಕ್ಷಣ ಇಲಾಖೆ, ಕಚೇರಿ ಮೇಲೂ ಸಿಬಿಐ ದಾಳಿಯಾಗಿದೆ. ಸಿಬಿಐ ಅಧಿಕಾರಿಗಳು ಒಳ್ಳೆಯವರು. ಆದರೆ ಅವರು ಕೇಂದ್ರ ಸರ್ಕಾರದ ಆದೇಶ ಪಾಲಿಸುವುದು ಅವರಿಗೆ ಅನಿವಾರ್ಯವಾಗಿದೆ. ನನಗೆ ಯಾವುದೇ ಹಾನಿಯುಂಟು ಮಾಡದ್ದಕ್ಕೆ ಮತ್ತು ಉತ್ತಮ ವರ್ತನೆ ತೋರಿದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದವರು ಈ ವೇಳೆ ತಿಳಿಸಿದರು.

RELATED ARTICLES
- Advertisment -
Google search engine

Most Popular

Recent Comments