Saturday, August 23, 2025
Google search engine
HomeUncategorized75ನೇ ಸ್ವಾತಂತ್ರೋತ್ಸವ ಸಂಭ್ರಮ; ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ಸಾರಥ್ಯದಲ್ಲಿ 10 ಸಾವಿರ ಲಾಡು...

75ನೇ ಸ್ವಾತಂತ್ರೋತ್ಸವ ಸಂಭ್ರಮ; ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ಸಾರಥ್ಯದಲ್ಲಿ 10 ಸಾವಿರ ಲಾಡು ವಿತರಣೆ

ಬೆಂಗಳೂರು: ದೇಶದಲ್ಲಿ 75ನೇ ಸ್ವಾತಂತ್ರೋತ್ಸವದ ಸಂಭ್ರಮ ಹಿನ್ನೆಲೆ ಬೆಂಗಳೂರಿನ ಯಶವಂತಪುರದಲ್ಲಿರುವ ಪವರ್ ಟಿವಿ ಕೇಂದ್ರ ಕಚೇರಿಯ ಮುಂಭಾಗ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು.

ಪವರ್ ಎಂಡಿ ಎಂಡಿ ರಾಕೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಆಯೋಜನೆ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪವರ್ ಟಿವಿ ಸಿಬ್ಬಂದಿಗಳ ಸಮ್ಮುಖದಲ್ಲಿ ರಾಕೇಶ್ ಶೆಟ್ಟಿ ಅವರು ಧ್ವಜಾರೋಹಣ ಮಾಡಿದರು.

ರಾಜರಾಜೇಶ್ವರಿ ಶಾಲೆ, ಬಿಬಿಎಂಪಿ ಶಾಲೆ ಮಕ್ಕಳು, ಪವರ್ ಟಿವಿ ಸಿಬ್ಬಂದಿಗಳಿಗೆ ಸಾಥ್ ನೀಡಿ ಈ ನಡಿಗೆಯಲ್ಲಿ ಪಾಲ್ಗೊಂಡರು. ವಾಕಥಾನ್​​ನಲ್ಲಿ ವಂದೇಮಾತರಂ, ಭಾರತ್ ಮಾತಾ ಕೀ ಜೈ ಜೈಕಾರ ಘೋಷಣೆ ಮೊಳಗಿತು.

ಪವರ್ ಟಿವಿ ಕಚೇರಿಯಿಂದ ಯಶವಂತಪುರ ಸರ್ಕಲ್​​, ತ್ರಿವೇಣಿ ರಸ್ತೆ, ಮತ್ತಿಕೆರೆ ರಸ್ತೆ ಮೂಲಕ ‘ಪವರ್’ ಟಿವಿ ಕಚೇರಿಗೆ ವಾಕಥಾನ್ ಮಾಡಲಾಯಿತು. ವಾಕಥಾನ್ ಉದ್ದಕ್ಕೂ ಪವರ್ ಟಿವಿ ವತಿಯಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಲಾಡು ಹಂಚಲಾಯಿತು. ಸ್ವಾತಂತ್ರ್ಯ ನಡಿಗೆಗೆ ಸಾರ್ವಜನಿಕರಿಂದ ಭಾರೀ ಬೆಂಬಲ ವ್ಯಕ್ತವಾಯಿತು.

RELATED ARTICLES
- Advertisment -
Google search engine

Most Popular

Recent Comments