Tuesday, August 26, 2025
Google search engine
HomeUncategorizedಸಿಎಂ ಬೊಮ್ಮಾಯಿ ಸ್ಥಾನ ಬದಲಾವಣೆ ಕುರಿತು ಸ್ಪಷ್ಟನೆ ನೀಡಿದ ಯಡಿಯೂರಪ್ಪ

ಸಿಎಂ ಬೊಮ್ಮಾಯಿ ಸ್ಥಾನ ಬದಲಾವಣೆ ಕುರಿತು ಸ್ಪಷ್ಟನೆ ನೀಡಿದ ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಸ್ಥಾನ ಬದಲಾವಣೆ ವಿಚಾರವಾಗಿ ಇಂದು ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ಯಾವುದೇ ಸತ್ಯಾಂಶ ಇಲ್ಲ. ವಿಧಾನಸಭೆ ಚುನಾವಣೆ ಏಳೆಂಟು ತಿಂಗಳು ಇರುವಾಗ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದೇ ನಮ್ಮ ಉದ್ದೇಶ. ನಾನು ಈಗಾಗಲೇ ವಿಧಾನಸಭೆ ಯಲ್ಲಿ ಈ ಕುರಿತು ಹೇಳಿದ್ದೇನೆ. ಯಾರೋ ಒಂದು ಇಬ್ಬರು ತಾವು ಮುಂದೆ ಮುಖ್ಯಮಂತ್ರಿ ಆಗುತ್ತೇವೆ ಎನ್ನೋ ಭ್ರಮೆಯಲ್ಲಿದ್ದಾರೆ
ಆದರೆ ಅವರಿಗೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಬಿಎಸ್​ವೈ ಹೇಳಿದ್ದಾರೆ.

ನಿಶ್ಚಿತವಾಗಿ 2023 ರಾಜ್ಯದಲ್ಲಿ ಬಿಜೆಪಿಯವರೇ ಮುಂದಿನ ಮುಖ್ಯಮಂತ್ರಿ ಗಳಾಗ್ತಾರೆ. ನಾವೆಲ್ಲರೂ ಸಾಮೂಹಿಕವಾಗಿ ಪ್ರವಾಸ ಮಾಡಿ, ಅಧಿಕಾರಕ್ಕೆ ಬರಲು 135 ಸ್ಥಾನ ಗೆಲ್ಲುತ್ತೇವೆ. ನಮಗೆ ನರೇಂದ್ರ ಮೋದಿಯಂತ ನಾಯಕ ಇರೋದ್ರಿಂದ ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ ನಮಗೆ ಇದೆ ಎಂದು ಯಡಿಯೂರಪ್ಪ ಅವರು ಸಿಎಂ ಬದಲಾವಣೆ ಕುರಿತು ಮಾತನಾಡಿದರು.

RELATED ARTICLES
- Advertisment -
Google search engine

Most Popular

Recent Comments