Tuesday, September 9, 2025
HomeUncategorizedನಾಳೆಯಿಂದಲೇ ಬಿಗ್​ಬಾಸ್​ ಆರಂಭ

ನಾಳೆಯಿಂದಲೇ ಬಿಗ್​ಬಾಸ್​ ಆರಂಭ

ಹೌದು ಸ್ವಾಮಿ, ನಾಳೆಯಿಂದ ಅಸಲಿ ಆಟ ಶುರುವಾಗಲಿದೆ. ಕನ್ನಡ ಬಿಗ್ ಬಾಸ್ OTT ನಾಳೆಯಿಂದ ಪ್ರಾರಂಭವಾಗಲಿದೆ. ವೂಟ್‌ ಆ್ಯಪ್‌ನಲ್ಲಿ ನಾಳೆಯಿಂದ ಬಿಗ್ ಬಾಸ್ OTT ಸ್ಟ್ರೀಮಿಂಗ್ ಆಗಲಿದೆ. ಬಿಗ್ ಬಾಸ್ ಕನ್ನಡದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಕಿಚ್ಚ ಸುದೀಪ್ ಅವರೇ ಇದನ್ನು ನಡೆಸಿಕೊಡಲಿದ್ದಾರೆ.

ಈ ಬಾರಿ ಇಲ್ಲಿಯೂ 16 ಸ್ಪರ್ಧಿಗಳು ಇರಲಿದ್ದಾರೆ. ಸ್ಪರ್ಧಿಗಳ ಸಂಖ್ಯೆ 17 ಆಗಬಹುದು ಅಥವಾ 15 ಆಗಬಹುದು ಎಂದು ಕಲರ್ಸ್ ಕನ್ನಡ ಬಿಸ್‌ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ. ಈ ಮೊದಲೇ ಹೇಳಿದಂತೆ ಸಿನಿಮಾ, ಕಿರುತೆರೆಯಲ್ಲಿ ಖ್ಯಾತರಾದವರು, ಟಿವಿ ಪತ್ರಕರ್ತರ ಜೊತೆ ಸೋಶಿಯಲ್ ಮೀಡಿಯಾ ಸ್ಟಾರ್‌ಗಳಿಗೂ ಬಿಗ್ ಬಾಸ್ OTTಯಲ್ಲಿ ಮಣೆ ಹಾಕಲಾಗಿದೆ. ಹೀಗಾಗಿ ಒಂದಷ್ಟು ಖ್ಯಾತನಾಮರ ಜೊತೆಗೆ ಸೋಶಿಯಲ್ ಮೀಡಿಯಾಗಳಲ್ಲೂ ಹವಾ ಎಬ್ಬಿಸುತ್ತಿರುವವರಿಗೂ ಚಾನ್ಸ್ ನೀಡಲಾಗಿದೆ.

ರೀಲ್ಸ್ ಇತ್ಯಾದಿ ಮಾಡಿಕೊಂಡು ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು OTTಯಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗ್ತಿದೆ.

RELATED ARTICLES
- Advertisment -
Google search engine

Most Popular

Recent Comments