Saturday, August 30, 2025
HomeUncategorizedಬಿಜೆಪಿ ಸರಕಾರದ ಅಧಿಕಾರದಲ್ಲಿ ಯಾರೂ ಸುರಕ್ಷಿತರಿಲ್ಲ : ಬಿಕೆ ಹರಿಪ್ರಸಾದ್

ಬಿಜೆಪಿ ಸರಕಾರದ ಅಧಿಕಾರದಲ್ಲಿ ಯಾರೂ ಸುರಕ್ಷಿತರಿಲ್ಲ : ಬಿಕೆ ಹರಿಪ್ರಸಾದ್

ಮಂಗಳೂರು : ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ರಮಾನಾಥ ರೈ, ಅಭಯಚಂದ್ರ ಜೈನ್, ಶಕುಂತಲಾ ಶೆಟ್ಟಿ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ ಬಳಿಕ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಪ್ರಕರಣದಲ್ಲಿ ಇಂಟಲಿಜೆನ್ಸ್ ವಿಂಗ್ ಸಂಪೂರ್ಣ ವಿಫಲವಾಗಿದೆ. ಇದಕ್ಕಾಗಿಯೇ ಪ್ರಕರಣದ ತನಿಖೆಯನ್ನು ಎನ್ಐಎಗೆ ನೀಡಿರುವುದು. ಉದಯಪುರದಲ್ಲಿ ನಡೆದ ಪ್ರಕರಣವನ್ನು ಎರಡು ದಿನದಲ್ಲಿ ಭೇದಿಸಲಾಗಿತ್ತು. ಪ್ರವೀಣ್ ಕೊಲೆ ಪ್ರಕರಣದಲ್ಲಿ 15 ದಿನದಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇನ್ನು, ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ನೀಡಲಾಗದ ಸರಕಾರ ಬೇರೆಯವರಿಗೆ ರಕ್ಷಣೆ ನೀಡಲು ಸಾಧ್ಯವೇ ? ಬಿಜೆಪಿ ನಾಯಕರು ಈಗ ಮೊಸಳೆ ಕಣ್ಣಿರು ಹಾಕುತ್ತಿದ್ದಾರೆ. ಬಿಜೆಪಿ ಸರಕಾರದ ಅಧಿಕಾರದಲ್ಲಿ ಯಾರೂ ಸುರಕ್ಷಿತರಿಲ್ಲ. ರಾಜ್ಯ ಸರಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ಸಂಸದನಾಗಿ ತೇಜಸ್ವಿ ಸೂರ್ಯನದ್ದು ಬೇಜವಾಬ್ದಾರಿ ಹೇಳಿಕೆ, ಚೈಲ್ಡಿಷ್, ಇದು ಮಕ್ಕಳಾಟಿಕೆ ವಿಷಯವಲ್ಲ. ಎಲ್ಲವನ್ನೂ ಇವರೇ ಮಾಡಿಸುವಂತಹದು. ಧರ್ಮವನ್ನು ಕಾಪಾಡಲು ಅಧಿಕಾರದಲ್ಲಿದ್ದವರು ತಮ್ಮ ಮಕ್ಕಳಿಗೆ ಗನ್ನು ಪಿಸ್ತೂಲು ನೀಡಲಿ ಎಂದು ವ್ಯಂಗ್ಯವಾಡಿದರು.

ಅದಲ್ಲದೇ, ಅಮಾಯಕರು, ಶೂದ್ರರನ್ನು ಯಾಕೆ ಇವರು ಬಲಿ ಕೊಡುತ್ತಿದ್ದಾರೆ. ಪ್ರಚೋದನಕಾರಿ ಹೇಳಿಕೆಗಳೇ ಇಂತಹ ಘಟನೆಗಳಿಗೆ ಕಾರಣ, ಈಶ್ವರಪ್ಪ ಮತ್ತು ಗೃಹ ಸಚಿವರು ಪ್ರಚೋದನೆ ನೀಡುತ್ತಿದ್ದಾರೆ. ಪ್ರಚೋದನೆ ಹೇಳಿಕೆ ನೀಡುವ ಮಂತ್ರಿಗಳ ವಿರುದ್ಧ ಯುಎಪಿಎ ಆಕ್ಟ್ ಅಡಿ ಕೇಸು ಹಾಕಬೇಕು. ಎಂದು ನೆಟ್ಟಾರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments