Friday, August 29, 2025
HomeUncategorizedನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು!

ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು!

ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಭಾರತದ ನೂತನ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ್ಧಾರೆ. ದ್ರೌಪದಿ ಮುರ್ಮು ಅವರು 5,77,777 ಮೌಲ್ಯದ 2161 ಮತಗಳನ್ನು ಪಡೆದ್ರೆ. ಯಶವಂತ್ ಸಿನ್ಹಾ 2,61,062 ಮೌಲ್ಯದ 1058 ಮತಗಳನ್ನು ಪಡೆದಿದ್ದರು. 64 ವರ್ಷದ ಮುರ್ಮು ಪ್ರತಿಪಕ್ಷ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಮುರ್ಮು ರಾಷ್ಟ್ರಪತಿ ಹುದ್ದೆ ಅಲಂಕರಿಸುತ್ತಿರುವ ಬುಡಕಟ್ಟು ಸಮುದಾಯದ ಮೊದಲನೇಯವರಾಗಿದ್ದಾರೆ ಹಾಗೂ ದೇಶದ ಎರಡನೇ ಮಹಿಳೆಯಾಗಿದ್ದಾರೆ.

ದ್ರೌಪದಿ ಮುರ್ಮು ಅವರ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

ಬುಡಕಟ್ಟು ಸಮುದಾಯದ ಮಹಿಳೆ :

ಒಡಿಶಾ ಮೂಲದ ದ್ರೌಪದಿ ಮುರ್ಮು ತಂದೆ ಬಿರಂಚಿ ನಾರಾಯಣ್ ಟುಡು. ಕಳೆದ ಎರಡು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ದ್ರೌಪದಿ ಅವರು ಒಡಿಶಾದ ಮಾಜಿ ಸಚಿವೆ, ಜಾರ್ಖಂಡ್ ರಾಜ್ಯದ ಮಾಜಿ ರಾಜ್ಯಪಾಲರಾಗಿ, ಕೇಂದ್ರ ಸಚಿವೆಯಾಗಿದ್ದವರು. ಉತ್ತಮ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಪ್ರತಿಭಾ ಪಾಟೀಲ್ ನಂತರ ಎರಡನೇ ಮಹಿಳಾ ರಾಷ್ಟ್ರಪತಿಯಾಗಿದ್ದಾರೆ. ಬುಡಕಟ್ಟು ಜನಾಂಗದ ಮಹಿಳೆ, ಒಡಿಶಾ/ಜಾರ್ಖಂಡ್ ಮೂಲದಿಂದ ಉನ್ನತ ಹುದ್ದೆಗೆ ಅಲಂಕರಿಸುವ ಮೊದಲ ಮಹಿಳೆ ದ್ರೌಪದಿ ಮುರ್ಮು .

ದ್ರೌಪದಿ ಮುರ್ಮು ಕುಟುಂಬ ಹಿನ್ನಲೆ:

ದ್ರೌಪದಿ ಮುರ್ಮು ಅವರು 1958 ಜೂನ್ 20 ರಂದು ಒಡಿಶಾ ರಾಜ್ಯದ ಮಯೂರ್ ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದ ಸಂತಾಲಿ ಎಂಬ ಬುಡಕಟ್ಟು ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಮತ್ತು ಅಜ್ಜ ಪಂಚಾಯಾತ್ ರಾಜ್‌ ಯೋಜನೆಯಡಿಯಲ್ಲಿ ಗ್ರಾಮದ ಮುಖ್ಯಸ್ಥರಾಗಿದ್ದರು. ದ್ರೌಪದಿ ಮುರ್ಮು ಅವರು ಶ್ಯಾಮ್ ಚರಣ್‌ ಮುರ್ಮು ಅವರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳು ಇದ್ದರು. ಇದರಲ್ಲಿ ಇಬ್ಬರು ಗಂಡು ಮಕ್ಕಳು ಮರಣ ಹೊಂದಿದ್ದಾರೆ. ಪತಿಯು ಸಹ ಸಾವನ್ನಪ್ಪಿದ್ದಾರೆ.

ದ್ರೌಪದಿ ಶಿಕ್ಷಣ : 

ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ದ್ರೌಪದಿ ಮುರ್ಮು ಅವರು ಬಿಎ ಪದವಿ ಪಡೆದಿದ್ದಾರೆ. ಇವರು ಪದವಿ ನಂತರ ಸಹಾಯಕ ಪ್ರೊಫೆಸರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದಲ್ಲದೇ ಒಡಿಶಾ ರಾಜ್ಯದ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕಿಯಾಗಿಯೂ ಸೇವೆ ಸಲ್ಲಿಸಿದ್ಧಾರೆ. ಬಿ.ಎ ಪದವೀಧರರಾದ ದ್ರೌಪದಿ, ರಾಯ್ ರಂಗಪುರ್ ದಲ್ಲಿರುವ ಶ್ರೀ ಅರಬಿಂದೋ ಕಾಲೇಜಿನಲ್ಲಿ ಗೌರವಾನ್ವಿತ ಸಹಾಯಕ ಪ್ರಾಧ್ಯಾಪಕಿಯಾಗಿದ್ದರು. ಒಡಿಶಾದ ನೀರಾವರಿ ಇಲಾಖೆಯಲ್ಲಿ ಜ್ಯೂನಿಯರ್ ಸಹಾಯಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದರು. 1997ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

ದ್ರೌಪದಿ ರಾಜಕೀಯ ವೃತ್ತಿ:

1997ರಲ್ಲಿ ರಾಯ್ ರಂಗಪುರ್ ಜಿಲ್ಲೆಯ ಕೌನ್ಸಿಲರ್ ಆಗಿ ಆಯ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ಅದೇ ವರ್ಷ ಅಯ್ಕೆ 2000ರ ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿ ಸಾರಿಗೆ ಹಾಗೂ ವಾಣಿಜ್ಯ ಖಾತೆ ಸಚಿವೆಯಾಗಿದ್ದರು ಒಡಿಶಾದ ಮೀನುಗಾರಿಕೆ ಸಚಿವೆಯಾಗಿ 2004ರ ತನಕ ಕಾರ್ಯ ನಿರ್ವಹಿಸಿದರು ಮಯೂರ್ ಭಂಜ್ ಜಿಲ್ಲಾ ಬಿಜೆಪಿ ಅಧ್ಯಕ್ಷೆಯಾಗಿ 2002ರಿಂದ 2009ರ ತನಕ ಹುದ್ದೆ ನಿಭಾಯಿಸಿದರು. 2004 ರಿಂದ 2009 ರ ತನಕ ರಾಯ್ ರಂಗಪುರ್ ಶಾಸಕಿಯಾಗಿದ್ದರು. 2006ರಿಂದ 2009 ತನಕ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷೆಯಾಗಿದ್ದರು. 2015ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ನಿಯುಕ್ತಿಗೊಂಡರು. 2017ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಹೆಸರು ಪರಿಗಣಿಸಲಾಗಿತ್ತು.

ಒಡಿಶಾದಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಬಿಜು ಜನತಾ ದಳದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಲವು ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಮಾದರಿ ಶಾಸಕಿಯಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಒಡಿಶಾ ಅಸೆಂಬ್ಲಿ ಪಂಡಿತ್ ನೀಲಕಂಠ ಪ್ರಶಸ್ತಿ ನೀಡಿದೆ.

ಲೀನಾಶ್ರೀ, ಪವರ್​​ ಟಿವಿ

RELATED ARTICLES
- Advertisment -
Google search engine

Most Popular

Recent Comments