Monday, August 25, 2025
Google search engine
HomeUncategorizedಭರಚುಕ್ಕಿ, ಹೊಗೆನಕಲ್ ಜಲಪಾತ ಪ್ರವಾಸಿಗರಿಗೆ ಗುಡ್​ ನ್ಯೂಸ್​

ಭರಚುಕ್ಕಿ, ಹೊಗೆನಕಲ್ ಜಲಪಾತ ಪ್ರವಾಸಿಗರಿಗೆ ಗುಡ್​ ನ್ಯೂಸ್​

ಚಾಮರಾಜನಗರ : ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ, ವೆಸ್ಲಿ ಸೇತುವೆ ಹಾಗೂ ಹನೂರು ತಾಲೂಕಿನ ಹೊಗೇನಕಲ್ ಜಲಪಾತಗಳಿಗೆ ಪ್ರವೇಶ ನಿರ್ಬಂಧ ತೆರವುಗೊಳಿಸಲಾಗಿದೆ.

ಪ್ರವಾಸಿಗರಿಗೆ ಗುಡ್ ನ್ಯೂಸ್ ಭರಚುಕ್ಕಿ, ಹೊಗೆನಕಲ್ ಜಲಪಾತ ಪ್ರವಾಸಿಗರಿಗೆ ಮುಕ್ತ ಪ್ರವೇಶ ನೀಡಲಾಗಿದ್ದು, ಚಾಮರಾಜನಗರ ಡಿಸಿ ಚಾರುಲತಾ ಸೋಮಲ್ ನಿರ್ಬಂಧ ಆದೇಶ ಹಿಂಪಡೆದಿದ್ದಾರೆ. ಕೇರಳದ ವೈನಾಡು ಮತ್ತು ಕಾವೇರಿ ಸೀಮೆಯಲ್ಲಿ ಹೆಚ್ಚಿನ ಮಳೆ ಪರಿಣಾಮ ಕಾವೇರಿ ನದಿ ಹರಿವು ಹೆಚ್ಚಾಗಿತ್ತು.

ಇನ್ನು, ಭರಚುಕ್ಕಿ ಜಲಪಾತ ಹಾಗೂ ಹೊಗೆನಕಲ್ ಜಲಪಾತ ಅಪಾಯಕಾರಿಯಾಗಿ ಭೋರ್ಗರೆಯುತ್ತಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿತ್ತು. ಈಗ ಮಳೆ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿರುವುದರಿಂದ ನಿರ್ಬಂಧ ತೆರವುಗೊಳಿಸಿದ್ದಾರೆ.

ಕಾವೇರಿ ಹಾಗೂ ಕಬಿನಿ ನದಿಗಳಲ್ಲಿ ನೀರಿನ ಹರಿವು ಇಳಿದಿರುವುದರಿಂದ ಪ್ರವಾಸಿಗರಿಗಿದ್ದ ನಿರ್ಬಂಧವನ್ನು ವಾಪಾಸ್ ಪಡೆದ ಡಿಸಿ. ವಾರಾಂತ್ಯದಲ್ಲಿ ಭರಚುಕ್ಕಿ ಜಲಪಾತಕ್ಕೆ ಜನಸಾಗರವೇ ಹರಿದುಬರುತ್ತಿತ್ತು. ನಿರ್ಬಂಧ ಹೇರಿದ ಬಳಿಕ ನೂರಾರು ಮಂದಿ ನಿರಾಸೆ ಮೊಗ ಹೊತ್ತು ಹಿಂತಿರುಗುತ್ತಿದ್ದರು. ಆದರೆ ನಿರ್ಬಂಧ ತೆರವಾದ ಹಿನ್ನೆಲೆಯಲ್ಲಿ ಮತ್ತೇ ಪ್ರವಾಸಿತಾಣಗಳು ಗಿಜಿಗುಡಲಿದೆ.

RELATED ARTICLES
- Advertisment -
Google search engine

Most Popular

Recent Comments