Wednesday, September 10, 2025
HomeUncategorizedಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳಿಗೆ ಶಾಕ್ ನೀಡಿದ BBMP

ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳಿಗೆ ಶಾಕ್ ನೀಡಿದ BBMP

ಬೆಂಗಳೂರು : ಬೀದಿ ಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಶಾಖ್​ ನೀಡಿದ್ದಾರೆ.

ಇನ್ಮುಂದೆ ರಾಜಧಾನಿಯ ಮುಖ್ಯ ರಸ್ತೆಗಳ ಫುಟ್ ಫಾತ್ ನಲ್ಲಿ ಬೀದಿ ವ್ಯಾಪಾರಕ್ಕೆ ಬ್ರೇಕ್ ನೀಡಲಾಗಿದ್ದು, ಮುಖ್ಯ ರಸ್ತೆ & ಆರ್ಟಿರಿಯಲ್ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಪಾಲಿಕೆ ಮುಂದಾಗಿದೆ. ಪ್ರಮುಖ ರಸ್ತೆಗಳ ಫುಟ್ ಪಾತ್ ಮೇಲೆ ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡ್ತಿರೋದ್ರಿಂದ ಜನರಿಗೆ ಸಮಸ್ಯೆ ಉಂಡಾಗಿದ್ದು, ಇದರಿಂದ ಜನರು ರಸ್ತೆ ಮೇಲೆ ವಾಕಿಂಗ್ ಮಾಡ್ತಿದ್ದು, ಅಪಘಾತಗಳು ಸಂಭವಿಸುತ್ತಿದೆ. ಹಾಗಾಗಿ ಅಪಘಾತಗಳನ್ನು ತಪ್ಪಿಸಲು ಮುಖ್ಯ ರಸ್ತೆಗಳ ಬದಿಗಳಲ್ಲಿ ವ್ಯಾಪಾರಕ್ಕೆ ಪಾಲಿಕೆ ಕೋಕ್ ನೀಡಿದೆ.

ನಗರ ಪೊಲೀಸ್ ಇಲಾಖೆಯ ಜೊತೆ ನಡೆದ ಸಭೆಯಲ್ಲಿ ಬಿಬಿಎಂಪಿಯಿಂದ ಈ ನಿರ್ಧಾರ ಮಾಡಲಾಗಿದ್ದು, ಟ್ರಾಫಿಕ್ ಪೊಲೀಸರ ಸಲಹೆ, ಸೂಚನೆ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದೆ. ಸ್ಥಳೀಯ ಶಾಸಕರು ಹಾಗೂ ಜಂಟಿ ಆಯುಕ್ತರು ಸೂಚಿಸಿದ ಸ್ಥಳದಲ್ಲಿ ಮಾತ್ರ ಇನ್ಮೇಲೆ ವ್ಯಾಪಾರ ಮಾಡಬೇಕು. ಎಲ್ಲಂದರಲ್ಲಿ ವ್ಯಾಪಾರ ಮಾಡಿದ್ರೆ ಫೈನ್ ಬೀಳಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿಯನ್ನು ನೀಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments