Friday, September 12, 2025
HomeUncategorizedಆರದ ಚಾಮರಾಜಪೇಟೆ ಆಟದ ಮೈದಾನದ ಕಿಚ್ಚು..!

ಆರದ ಚಾಮರಾಜಪೇಟೆ ಆಟದ ಮೈದಾನದ ಕಿಚ್ಚು..!

ಚಾಮರಾಜಪೇಟೆ : ಕಳೆದೊಂದು ತಿಂಗಳಿನಿಂದ ಚಾಮರಾಜಪೇಟೆ ಆಟದ ಮೈದಾನ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಚಾಮರಾಜಪೇಟೆ ಆಟದ ಮೈದಾನ ಒಂದು ಸಮುದಾಯಕ್ಕೆ ಸೇರಿದ್ದಲ್ಲ. ಅದು ಸರ್ಕಾರಿ ಜಾಗ, ಎಲ್ಲಾ ಧರ್ಮದವರಿಗೂ ಹಬ್ಬಗಳ ಆಚರಣೆಗಳಿಗೆ ಅವಕಾಶಬೇಕು‌ ಎಂದು ಚಾಮರಾಜಪೇಟೆ ನಾಗರೀಕರ ಒಕ್ಕೂಟ ಬಿಬಿಎಂಪಿ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಹೊಸ ಪ್ಲ್ಯಾನ್ ಮಾಡಿದ್ದು, ಸ್ಥಳೀಯರ ಸಹಿ ಸಂಗ್ರಹ ಮಾಡಿ ಸರ್ಕಾರ, ಬಿಬಿಎಂಪಿಗೆ ಮತ್ತೆ ಹೋರಾಟದ ಬಿಸಿ ಮುಟ್ಟಿಸಲು ಮುಂದಾಗಿದೆ. ಈಗಾಗಲೇ ಜುಲೈ 31ರೊಳಗೆ ಸರ್ಕಾರದ ಸ್ವತ್ತೆಂದು ಘೋಷಿಸಬೇಕು ಎಂದು ಡೆಡ್​ಲೈನ್ ನೀಡಿರುವ ಒಕ್ಕೂಟ, ಹೋರಾಟದ ಮುಂದುವರೆದ ಭಾಗವಾಗಿ ಸ್ಥಳೀಯರ ಸಹಿ ಅಭಿಯಾನಕ್ಕೆ ಚಾಲನೆ ನೀಡಿದೆ.

ಇನ್ನೂ ಈ ಹೋರಾಟಕ್ಕೆ ಹಲವು ಕನ್ನಡ ಪರ ಸಂಘಟನೆಗಳು, ವಿಶ್ವ ಹಿಂದೂ ಪರಿಷತ್, ಹಿಂದೂ ಸನಾತನ ಪರಿಷತ್ ಸೇರಿದಂತೆ ಹಲವು ಸಂಘಟನೆಗಳು ಕೂಡ ಸಾಥ್ ನೀಡಿದ್ರು. ಅಭಿಯಾನದಲ್ಲಿ ಭಾಗಿಯಾಗಿ ಸಹಿ ಮಾಡುವ ಮೂಲಕ ಈ ಹೋರಾಟ ಇಷ್ಟಕ್ಕೆ ನಿಲ್ಲಲ್ಲ. ಈಗಾಗಲೇ ನಮ್ಮ ಒಕ್ಕೂಟ ಬಿಬಿಎಂಪಿಗೆ ನೀಡಿರುವ ಗಡುವಿನೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ದಿನಕ್ಕೊಂದು ಹೋರಾಟ, ದಿನಕ್ಕೊಂದು ಅಭಿಯಾನದ ಮೂಲಕ ಬಿಬಿಎಂಪಿ ಮೇಲೆ ಒತ್ತಡ ಹೆಚ್ಚಿಸುವ ಕೆಲಸವನ್ನೇನೋ ಒಕ್ಕೂಟ ಮಾಡುತ್ತಿದೆ. ಆದರೆ, ನಿಜಕ್ಕೂ ಬಿಬಿಎಂಪಿ ಒಕ್ಕೂಟ ಹಾಗೂ ಸಂಸದರು ನೀಡಿರುವ ಡೆಡ್​ಲೈನ್ ಒಳಗೆ ಸಮಸ್ಯೆ ಬಗೆಹರಿಸುತ್ತಾ ಇಲ್ಲ. ಅದೇ ರೀತಿ ಗೊಂದಲದ ವಾತಾವರಣ ಸೃಷ್ಟಿ ಮಾಡುತ್ತಾ ಅಂತ ಕಾದು ನೋಡಬೇಕಿದೆ‌.

ಮಲ್ಲಾಂಡಹಳ್ಳಿ ಶಶಿಧರ್, ಪವರ್ ಟಿವಿ, ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments