Thursday, September 11, 2025
HomeUncategorizedಅಪರೂಪದ ಬಿಳಿ ಆಲ್ಬಿನ್ ಕೋಬ್ರಾ ಹಿಡಿದ ಸ್ನೇಕ್ ಕಿರಣ್

ಅಪರೂಪದ ಬಿಳಿ ಆಲ್ಬಿನ್ ಕೋಬ್ರಾ ಹಿಡಿದ ಸ್ನೇಕ್ ಕಿರಣ್

ಶಿವಮೊಗ್ಗ : ಇದು ಅಪರೂಪದಲ್ಲಿ ಅಪರೂಪದ ಹಾವು. ಬೇರೆ ಬೇರೆ ಜಾತಿಯ ಹಾವುಗಳನ್ನು ನಾವೆಲ್ಲರೂ ಸಹಜವಾಗಿಯೇ ನೋಡಿಯೇ ಇರ್ತಿವಿ. ಆದರೆ, ನಾಗರ ಹಾವಿನಲ್ಲಿಯೇ ಬಿಳಿ ನಾಗರ, ಬಹುಶಃ ನೋಡಿರಲು ಸಾಧ್ಯವಿಲ್ಲ. ನೋಡಿದರೂ ಅದು ಅಪರೂಪ. ಇಂತಹ ಅಪರೂಪದ ಹಾವೊಂದು ಶಿವಮೊಗ್ಗದ ಉರಗ ಪ್ರೇಮಿ ಸ್ನೇಕ್ ಕಿರಣ್ ಕೈ ವಶವಾಗಿದ್ದು, ಇದಕ್ಕೆ ಆಲ್ಬಿನ್ ಕೋಬ್ರಾ ಅಂತಲೂ ಕರೆಯುತ್ತಾರೆ. ಇದನ್ನ, ಕಾಡಿಗೆ ಬಿಡುವ ಮೂಲಕ ಕಿರಣ್, ಹಾವನ್ನು ಸಂರಕ್ಷಿಸಿದ್ದಾರೆ.

ಅಂದಹಾಗೆ, ನಗರದ ಹರಕೆರೆಯಲ್ಲಿರುವ ಎನ್.ಹೆಚ್. ಆಸ್ಪತ್ರೆ ಹಿಂಭಾಗದ ಮನೆಯೊಂದರಲ್ಲಿ ಅಪರೂಪದ ಬಿಳಿ ನಾಗರ ಕಂಡು ಬಂದಿದ್ದು, ತಕ್ಷಣವೇ, ಮನೆ ಮಾಲೀಕರಾದ ಡಾ. ಪ್ರೀತಂ ಅವರು, ಉರಗ ಪ್ರೇಮಿ ಸ್ನೇಕ್ ಕಿರಣ್ ಗೆ ಫೋನಾಯಿಸಿದ್ದಾರೆ. ತೋಟದ ಮನೆಯ ಕಟ್ಟಿಗೆಯ ರಾಶಿಯಲ್ಲಿ ಅವಿತುಕೊಂಡಿದ್ದ ಹಾವನ್ನು ಕಂಡ ಮನೆಯವರು, ಗಾಬರಿಗೊಂಡಿದ್ದು, ಸ್ಥಳಕ್ಕೆ ಧಾವಿಸಿದ ಸ್ನೇಕ್ ಕಿರಣ್ ಅಪರೂಪದ ಬಿಳಿ ನಾಗರಹಾವನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಇದುವರೆಗೂ ಸುಮಾರು 20 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿರುವ ಸ್ನೇಕ್ ಕಿರಣ್, ಇಂದು ವಿಶ್ವ ಉರಗ ದಿನವಾಗಿದ್ದು, ಇಂದೇ ವಿಶೇಷವಾದ ಅಪರೂಪದ ಬಿಳಿ ನಾಗರಹಾವನ್ನು ಹಿಡಿದಿರುವುದು ವಿಶೇವಾಗಿದೆ.

RELATED ARTICLES
- Advertisment -
Google search engine

Most Popular

Recent Comments