Saturday, August 23, 2025
Google search engine
HomeUncategorizedಪಿಎಸ್​​ಐ ಅಕ್ರಮ; ಮಾಜಿ ಸಿಎಂ ಮಗ ಇದ್ದಾರೆ ಎಂದ್ರೆ ಯಾರು?: ಯತ್ನಾಳ್ ಪ್ರಶ್ನೆ

ಪಿಎಸ್​​ಐ ಅಕ್ರಮ; ಮಾಜಿ ಸಿಎಂ ಮಗ ಇದ್ದಾರೆ ಎಂದ್ರೆ ಯಾರು?: ಯತ್ನಾಳ್ ಪ್ರಶ್ನೆ

ವಿಜಯಪುರ : ಮಾಜಿ ಸಿಎಂ ಮಗ ಇದ್ದಾರೆ ಎಂದ್ರೇ ಯಾರು..? ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​​ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಪ್ರಶ್ನಿಸಿದ್ದಾರೆ.

ಪಿಎಸ್ಐ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಅಕ್ರಮದಲ್ಲಿ ಪಾಲು (ಪೌಲ್) ಎಲ್ಲರದ್ದು ಇದೆ. ಹಗರಣದಲ್ಲಿ ಯಾರು ಯಾರು ಇದ್ದಾರೆ ಎಂದು ಎಲ್ಲರೂ ವಿಷಯವನ್ನು ಬಿಚ್ಚಿ ಹೇಳಬೇಕು ಎಂದರು.

ಇನ್ನು ಮಾಜಿ ಸಿಎಂ ಮಗ ಸಹಿತ ಪಿಎಸ್ಐ ಹಗರದಲ್ಲಿ ಇದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಿಎಸ್ಐ ಅಕ್ರಮದಲ್ಲಿ ದೊಡ್ಡ ದೊಡ್ಡವರು ಇದ್ದಾರೆ ಹಾಗೂ ಮಾಜಿ ಸಿಎಂ ಮಗ ಇದ್ದಾರೆ ಎಂದ್ರೇ ಯಾರು..? ದೇವೇಗೌಡರ ಮಗ..? ಸಿದ್ದರಾಮಯ್ಯ ಮಗ ಬರ್ತಾರೆ..? ಅದಕ್ಕಾಗಿಯೇ ಯಾರ ಮಗ ಇದ್ದಾರೆ ಎನ್ನುವುದನ್ನು ಖಚಿತವಾಗಿ ಹೇಳಬೇಕು ಎಂದು ವಾಗ್ದಾಳಿ ನಡೆಸಿದರು.

ಅಷ್ಟೆ ಅಲ್ಲದೇ ಇದು ಒಂದು ದೊಡ್ಡ ಹಗರಣ ಇದೆ. ಇದನ್ನು ಮುಚ್ಚಿ ಹಾಕಲು ಯತ್ನ ಮಾಡಲಾಗುತ್ತಿದೆ. ಆದರೆ, ನ್ಯಾಯಾಧೀಶರು ಸ್ಟ್ರಾಂಗ್ ಇದ್ದಾರೆ. ಅದಕ್ಕಾಗಿ ಅವರನ್ನು ಸರ್ಕಾರ ವರ್ಗಾವಣೆ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

RELATED ARTICLES
- Advertisment -
Google search engine

Most Popular

Recent Comments