Thursday, September 4, 2025
HomeUncategorizedಬೆಂಗಳೂರು ಅತಿವೇಗವಾಗಿ ಬೆಳೆಯುತ್ತಿರುವ ನಗರ : ರಾಮಲಿಂಗ ರೆಡ್ಡಿ

ಬೆಂಗಳೂರು ಅತಿವೇಗವಾಗಿ ಬೆಳೆಯುತ್ತಿರುವ ನಗರ : ರಾಮಲಿಂಗ ರೆಡ್ಡಿ

ಬೆಂಗಳೂರು : ಕುಡಿಯುವ ನೀರು,ರಸ್ತೆ,ಸ್ವಚ್ಚತೆ, ಪ್ಲೈ ಓವರ್ ಎಲ್ಲ ಕಾಂಗ್ರೆಸ್ ಸರ್ಕಾರ ಮಾಡಿತ್ತು ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗ ರೆಡ್ಡಿ, ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ಅತಿವೇಗವಾಗಿ ಬೆಳೆಯುತ್ತಿರುವ ನಗರ. ಇಲ್ಲಿ‌ ಮೂಲಭೂತ ಸೌಕರ್ಯಗಳನ್ನು ಕೊಡಬೇಕು. ಕಾಂಗ್ರೆಸ್ ಎಲ್ಲ ಸರ್ಕಾರಗಳು ಪ್ರಯತ್ನ ಮಾಡಿವೆ. ಎಸ್ ಎಂ ಕೃಷ್ಣ, ಸಿದ್ದರಾಮಯ್ಯ, ಧರಂಸಿಂಗ್ ಸರ್ಕಾರಗಳು‌ ಪ್ರಯತ್ನ ‌ಮಾಡಿವೆ. ೧೧೦ ಹಳ್ಳಿಗಳನ್ನು ಕಾಂಗ್ರೆಸ್ ಸರ್ಕಾರ ಬಿಬಿಎಂಪಿಗೆ ಸೇರಿಸಿತ್ತು. ಕುಡಿಯುವ ನೀರು,ರಸ್ತೆ,ಸ್ವಚ್ಚತೆ, ಪ್ಲೈ ಓವರ್ ಎಲ್ಲ ಕಾಂಗ್ರೆಸ್ ಸರ್ಕಾರ ಮಾಡಿತ್ತು ಎಂದರು.

ಇನ್ನು, ಎಜುಕೇಶನ್ ಕೂಡ ಬೆಂಗಳೂರಿನಲ್ಲಿ ಉತ್ತಮವಾಗಿತ್ತು. ಏಷ್ಯಾದಲ್ಲಿ ಬೆಳೆಯುತ್ತಿರುವ ನಗರ ಅಂತ ಬಿರುದು ಸಿಕ್ಕಿತ್ತು. ಆದ್ರೆ ಈಗ ಸರ್ವೆಯಲ್ಲಿ ನಗರವು ಕಳಪೆ ಸಾಧನೆ ಮಾಡಿದೆ. ೧೪೬ ಸ್ಥಾನವನ್ನು ಈ ನಗರ ಪಡೆದಿದೆ. ಕಳಪೆ ಸಾಧನೆ ಬೆಂಗಳೂರು ನಗರ ಪಡೆದಿದೆ. ಐದು ವಿಭಾಗದಲ್ಲಿ ಸರ್ವೆ ನಡೆದಿತ್ತು. ಎಲ್ಲ ವಿಭಾಗದಲ್ಲಿ ಕಡಿಮೆ ಅಂಕ ಪಡೆದಿದೆ ಎಂದರು. ಈಗಲೂ ಕಾಲ ಮಿಂಚಿಲ್ಲ, ಬೆಂಗಳೂರು ಅಭಿವೃದ್ಧಿ ಬಿಜೆಪಿ ಸರ್ಕಾರ ಮಾಡಬೇಕು ಎಂದು ರಾಮಲಿಂಗ ರೆಡ್ಡಿ ಒತ್ತಾಯ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments