Saturday, August 30, 2025
HomeUncategorizedಕೈ ಮಗ್ಗದಿಂದ ತಯಾರಾಗುತ್ತಿದೆ ರೇಷ್ಮೆ ಖಣಗಳು

ಕೈ ಮಗ್ಗದಿಂದ ತಯಾರಾಗುತ್ತಿದೆ ರೇಷ್ಮೆ ಖಣಗಳು

ಬಾಗಲಕೋಟೆ : ಸಾಮಾನ್ಯವಾಗಿ ಆಧುನಿಕತೆಯ ನಾಗಾಲೋಟದಲ್ಲಿ ಕೈಮಗ್ಗಗಳಿಂದ ತಯಾರಾಗುವ ಗುಳೇದಗುಡ್ಡ ಖಣಗಳಿಗೆ ಬೇಡಿಕೆ ವಿರಳವಾಗಿ ವ್ಯಾಪಾರ ಇಲ್ಲದೆ ಖಣಗಳನ್ನ ನೇಯುವ ನೇಕಾರರು ತೀವ್ರ ಸಂಕಷ್ಟ ಎದುರಿಸುವಂತಾಗಿತ್ತು. ಆದರೆ ಹೆಂಗಳೆಯರು ಧರಿಸೋ ಕೈಮಗ್ಗಗಳಲ್ಲಿ ನಿರ್ಮಾಣವಾಗೋ ಗುಳೇದಗುಡ್ಡದ ಖಣಗಳನ್ನು ಇದೀಗ ನೋಟ್ ಬುಕ್ ಮತ್ತು ಡೈರಿ ಪುಸ್ತಕಗಳಿಗೆ ಮೇಲು ಹೊದಕೆಯಾಗಿ ಅಂದರೆ ಕವರ್ ಆಗಿ ಗಮನ ಸೆಳೆಯುತ್ತಿದೆ.

ಗುಳೇದಗುಡ್ಡ ಖಣಗಳನ್ನು ನೇಯುವ ನೇಕಾರರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಹೌದು, ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಕೈ ಮಗ್ಗದಿಂದ ತಯಾರಾಗುವ ರೇಷ್ಮೆ ಖಣಗಳು ಅಂದರೆ ಬಹಳ ಫೇಮಸ್. ಮಾರುಕಟ್ಟೆಯಲ್ಲಿಯೂ ಗುಳೇದಗುಡ್ಡ ಖಣಗಳು ಅಂದರೆ ಸಾಕು ಅದಕ್ಕೆ ತನ್ನದೇ ಆದ ಬೇಡಿಕೆ ಇತ್ತು. ಆದರೆ ಇಂದಿನ ಕಾಲದಲ್ಲಿ ಬೇರೆ ಉತ್ಪನ್ನಗಳ ಕಡಿಮೆ ದರ ಹಾಗೂ ತೀವ್ರ ಪೈಪೋಟಿ ಯಿಂದಾಗಿ ಕೈಮಗ್ಗ ದಿಂದ ತಯಾರಾಗುವ ಈ ಖಣಕ್ಕೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಸ್ಥಳೀಯ ಯುವಕ ರಮೇಶ ಎಂಬುವವ ಹೊಸದಾಗಿ ಯೋಚನೆ ಮಾಡಿಕೊಂಡು ಬುಕ್ ಗಳಿಗೆ ಕವರ್ ಹಾಕುವ ಮೂಲಕ ಖಣಗಳನ್ನು ನೇಯುವ ನೇಕಾರರ ಉತ್ಪನ್ನಗಳಿಗೆ ಉತ್ತೇಜನ ನೀಡುವ ಕೆಲಸ ನಡೆಯುತ್ತಿದೆ.

RELATED ARTICLES
- Advertisment -
Google search engine

Most Popular

Recent Comments