Monday, September 1, 2025
HomeUncategorizedಬಹುಭಾಷಾ ನಟಿ ಮೀನಾ ಪತಿ ವಿದ್ಯಾ ಸಾಗರ್ ನಿಧನ

ಬಹುಭಾಷಾ ನಟಿ ಮೀನಾ ಪತಿ ವಿದ್ಯಾ ಸಾಗರ್ ನಿಧನ

ಚೆನ್ನೈ: ಕನ್ನಡಿಗನನ್ನ ಕೈಹಿಡಿದಿದ್ದ ಬಹುಭಾಷಾ ನಟಿ ಮೀನಾ ಪತಿ ಇನ್ನು ನೆನಪು ಮಾತ್ರ.

ಮೀನಾ ಮದ್ರಾಸ್ ಮೂಲದ ಈ ಚೆಲುವೆ 90ರ ದಶಕದ ಮೋಸ್ಟ್ ಡಿಮ್ಯಾಂಡಿಂಗ್ ನಟೀಮಣಿ. ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ ಇಂದಿಗೂ ಅದೇ ವರ್ಚಸ್ಸು ಉಳಿಸಿಕೊಂಡಿದ್ದಾರೆ ಹಿರಿಯ ನಟಿ ಮೀನಾ. ಬೆಂಗಳೂರು ಮೂಲದ ವಿದ್ಯಾಸಾಗರ್​ರನ್ನ ವಿವಾಹವಾಗಿದ್ದ ಮೀನಾಗೆ ಒಂದು ಹೆಣ್ಣು ಮಗಳು ಕೂಡ ಇದ್ದಾರೆ.

ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ವಿದ್ಯಾಸಾಗರ್, ಚಿಕಿತ್ಸೆ ಫಲಕಾರಿಯಾಗದೆ ಚೆನ್ನೈನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವ್ರ ನಿಧನಕ್ಕೆ ಇಡೀ ಚಿತ್ರರಂಗ ಸಂತಾಪ ಸೂಚಿಸಿದ್ದು, ನಟ ಶರತ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಅಂದಹಾಗೆ ಕನ್ನಡದ ಪುಟ್ನಂಜ, ಮೊಮ್ಮಗ, ಚೆಲುವ, ಸಿಂಹಾದ್ರಿಯ ಸಿಂಹ, ಗೌಡ್ರು ಸೇರಿದಂತೆ ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ನಟಿಸಿರೋ ಮೀನಾ ಸದ್ಯ ಒಂಟಿಯಾಗಿದ್ದು, ಆ ದುಃಖ ಭರಿಸೋ ಶಕ್ತಿಯನ್ನು ಆಕೆಗೆ ದೇವರು ಕರುಣಿಸಲಿ.

RELATED ARTICLES
- Advertisment -
Google search engine

Most Popular

Recent Comments