Thursday, September 18, 2025
HomeUncategorizedಮೂಲಭೂತ ಸೌಕರ್ಯ ವಂಚಿತ ಪ್ರವಾಸಿ ತಾಣ

ಮೂಲಭೂತ ಸೌಕರ್ಯ ವಂಚಿತ ಪ್ರವಾಸಿ ತಾಣ

ವಿಜಯಪುರ : ಅದು ಆದಿಲ್ ಶಾಹಿ ಅರಸರ ಕಾಲದಲ್ಲಿ ನಿರ್ಮಾಣಗೊಂಡಿರೋ ಬೇಸಿಗೆ ಅರಮನೆ. ಹೇಳಿಕೇಳಿ ವಿಜಯಪುರ ಜಿಲ್ಲೆ ಬಿಸಿಲು ನಾಡು. ಬೇಸಿಗೆ ಬಿಸಿಲಿನಿಂದ ಬಚಾವ್ ಆಗಲು ಆದಿಲ್ ಶಾಹಿ ಅರಸರು ಪ್ರತ್ಯೇಕವಾದ ಬೇಸಿಗೆ ಅರಮನೆ ನಿರ್ಮಿಸಿಕೊಂಡಿದ್ದರು. ಅದೀಗ ಅಭಿವೃದ್ಧಿಯಾಗದೇ ಪ್ರವಾಸಿಗರು ಹೋಗದಂತಹ ದು:ಸ್ಥಿತಿಯಿದೆ. ಅಲ್ಲಿ ಮೂಲಸೌಕರ್ಯ ಇಲ್ಲದೇ ಇರೋದಕ್ಕೆ ಪ್ರವಾಸಿಗರು ಹೋಗುತ್ತಿಲ್ಲ.

ಗುಮ್ಮಟ ನಗರಿ ವಿಜಯಪುರದಲ್ಲಿ ಕೇವಲ ಗೋಲ್ ಗುಂಬಜ್ ಮಾತ್ರವಿಲ್ಲ. ಇಲ್ಲಿ ಹಲವಾರು ಸ್ಮಾರಕಗಳಿವೆ. ವಿಜಯಪುರದಿಂದ ಸಿಂದಗಿ ಹೋಗುವ ರಸ್ತೆಯ ಕುಮಟಗಿ ಗ್ರಾಮದ ಬಳಿ ಬೇಸಿಗೆ ಅರಮನೆಯಿದೆ. ಅರೇ ಬೇಸಿಗೆ ಅರಮನೇನಾ ಅಂದ್ಕೊಳ್ಳಬಹುದು. ಇದು ಸಮ್ಮರ್ ಪ್ಯಾಲೇಸ್ ಅಂತ ಕರೆಯಲ್ಪಡುತ್ತದೆ. ಬೇಸಿಗೆ ಕಾಲದಲ್ಲಿ ಬಿಸಿಲು ತಾಪ ತಣಿಸಿಕೊಳ್ಳಲು ಆದಿಲ್ ಶಾಹಿ ಅರಸರು ಬೇಸಿಗೆ ಅರಮನೆ ನಿರ್ಮಿಸಿದ್ದಾರೆ. ವಿಶಾಲವಾದ ಕೆರೆ ಪಕ್ಷವೊಂದು ಅರಮನೆ ನಿರ್ಮಿಸಿದ್ದು, ಅದರ ಸುತ್ತಲೂ ನೀರು ನಿಲ್ಲುವಂತೆ ಮಾಡಿದ್ದಾರೆ. ತಂಪಾದ ಗಾಳಿ ಬಿಸಿ, ಅರಮನೆ ತಂಪಾಗಿ, ಅರಸರು ವಿಶ್ರಾಂತಿ ಪಡೆಯುತ್ತಿದ್ದರು. ಅಂತಹ ಸ್ಮಾರಕಕ್ಕೆ ಹೋಗಿ ನೋಡಲು ಸೂಕ್ತವಾದ ಬಸ್ ಸಂಚಾರ ವ್ಯವಸ್ಥೆ ಇಲ್ಲ. ಪ್ರವಾಸಿಗರು ಬಂದ್ರೆ ಮೂಲಸೌಕರ್ಯ ಇಲ್ಲ. ಹೀಗಾಗಿ ಈ ಬೇಸಿಗೆ ಅರಮನೆ ಬಗ್ಗೆ ಅದೇಷ್ಟೋ ಪ್ರವಾಸಿಗರಿಗೆ ಗೊತ್ತಿಲ್ಲ. ವೀಕೆಂಡ್ ಪ್ರವಾಸಕ್ಕೆ ಬರುವರು ಬಾಡಿಗೆ ವಾಹನ ತಗೊಂಡು ಊಟೋಪಚಾರ ಕಟ್ಟಿಕೊಂಡು ಬರ್ತಾರೆ. ಪ್ರವಾಸಿಗರು ಮೂಲಸೌಕರ್ಯ ಒದಗಿಸಿ ಅಂತ ಆಗ್ರಹಿಸಿದ್ದಾರೆ.

ಇನ್ನು ವಿಜಯಪುರದಿಂದ ಕುಮಟಗಿ ಗ್ರಾಮ 15 ಕಿಲೋ ಮೀಟರ್ ದೂರವಿದೆ. ವಿಜಯಪುರದಿಂದ ಸಿಂದಗಿ ಕಡೆಗೆ ಹೋಗುವಾಗ ಕುಮಟಗಿ ಗ್ರಾಮದ ಬಳಿ ಬಲಗಡೆ ಹೋದ್ರೆ ಸಿಗೋದು ಬೇಸಿಗೆ ಅರಮನೆ. ಬೇಸಿಗೆ ಅರಮನೆಯಲ್ಲಿ ಪ್ರವಾಸಿಗರಿಗೆ ಕುಡಿಯೋ ನೀರಿನ ವ್ಯವಸ್ಥೆ ಇಲ್ಲ. ಬರುವ ಪ್ರವಾಸಿಗರಿಗೆ ಮಾಹಿತಿ ನೀಡುವ ಮಾರ್ಗದರ್ಶಕರಿಲ್ಲ. ಕೇವಲ ಸೆಕ್ಯೂರಿಟಿ ಗಾರ್ಡ್ ಇರ್ತಾರೆ. ಬರುವ ಕೆಲವು ಪ್ರವಾಸಿಗರು ಹಾಗೇ ಸುತ್ತಾಡಿ ಹೋಗ್ತಾರೆ. ಆದ್ರೆ ಬೇಸಿಗೆ ಅರಮನೆ ಇತಿಹಾಸ ತಿಳಿದುಕೊಳ್ಳಲ್ಲ. ಮೂಲಸೌಕರ್ಯ ಒದಗಿಸಿದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಬಹುದು ಈ ನಿಟ್ಟಿನಲ್ಲಿ ಸರ್ಕಾರ ಪ್ರವಾಸೋದ್ಯಮ ಇಲಾಖೆ ಗಮನಹರಿಸಿ ಸೂಕ್ತ ಸೌಲಭ್ಯ ಒದಗಿ‌ಸಬೇಕು.
ಒಟ್ಟಿನಲ್ಲಿ ವಿಜಯಪುರ ಐತಿಹಾಸಿಕ ತಾಣದಲ್ಲಿ ಒಂದಿಲ್ಲೊಂದು ವಿಶೇಷ ಸ್ಮಾರಕಗಳಿವೆ. ಅವುಗಳ ಸಂರಕ್ಷಣೆ ಜೊತೆಗೆ ಪ್ರವಾಸಿಗರಿಗೆ ಇತಿಹಾಸ ತಿಳಿಸುವ ಅಗತ್ಯತೆಯಿದೆ. ಬೇಸಿಗೆ ಅರಮನೆಯಲ್ಲಿ ಮೂಲ ಸೌಕರ್ಯ ಒದಗಿಸುವತ್ತ ಗಮನ ಹರಿಸಬೇಕಿದೆ.

ಸುನೀಲ್ ಭಾಸ್ಕರ ಪವರ ಟಿವಿ ವಿಜಯಪುರ

RELATED ARTICLES
- Advertisment -
Google search engine

Most Popular

Recent Comments