Tuesday, September 9, 2025
HomeUncategorizedದರ್ಶನಕ್ಕೂ ಮುನ್ನ ಕಸ ಗುಡಿಸಿದ ʻದ್ರೌಪದಿ ಮುರ್ಮುʼ

ದರ್ಶನಕ್ಕೂ ಮುನ್ನ ಕಸ ಗುಡಿಸಿದ ʻದ್ರೌಪದಿ ಮುರ್ಮುʼ

ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಇಂದು ತಮ್ಮ ತವರು ರಾಜ್ಯವಾದ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರಾಯರಂಗ್‌ಪುರದಲ್ಲಿರುವ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದು, ಅಲ್ಲಿ ದೇವಾಲಯ ಮುಂಭಾಗದಲ್ಲಿ ಕಸ ಗುಡಿಸಿ ಅಚ್ಚರಿ ಮೂಡಿಸಿದ್ದಾರೆ.

ಒಡಿಶಾದ ಬುಡಕಟ್ಟು ನಾಯಕಿ ಮುರ್ಮು ಅವರನ್ನು ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಮಾಡಲಾಗಿದೆ. 64 ವರ್ಷದ ಜಾರ್ಖಂಡ್‌ನ ಮಾಜಿ ಗವರ್ನರ್ ಮುರ್ಮು ಅವರು ಆಯ್ಕೆಯಾದರೆ, ಭಾರತದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆಯಾಗಲಿದ್ದಾರೆ.ಮುರ್ಮು ಅವರ ನೀತಿ ವಿಷಯಗಳ ತಿಳುವಳಿಕೆ ಮತ್ತು ಸಹಾನುಭೂತಿಯ ಸ್ವಭಾವವು ದೇಶಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments