Saturday, August 30, 2025
HomeUncategorizedಅಕ್ರಮ ಚಟುವಟಿಕೆಗಳ ತಾಣವಾದ ಮತ್ಸ್ಯಾಲಯ..!

ಅಕ್ರಮ ಚಟುವಟಿಕೆಗಳ ತಾಣವಾದ ಮತ್ಸ್ಯಾಲಯ..!

ಕಾರವಾರ : ಕಡಲತೀರದಲ್ಲಿ ಈ ಹಿಂದೆ ನವೀಕೃತ ಕಟ್ಟಡದಲ್ಲಿ ಆರಂಭಗೊಂಡ ಸಾಗರ ಮತ್ಸ್ಯಾಲಯ ಪ್ರವಾಸಿಗರಿಗೆ ಕಡಲಾಳದ ಅಪರೂಪದ ಜೀವಿಗಳನ್ನು ಪರಿಚಯಿಸುವ ಕಾರ್ಯ ಮಾಡುತ್ತಿತ್ತು. ಜೊತೆಗೆ ಜಿಲ್ಲಾಡಳಿತಕ್ಕೂ ಆದಾಯದ ಮೂಲವಾಗಿತ್ತು.ಆದ್ರೆ, ಸಾಗರ ಮತ್ಸ್ಯಾಲಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಕಟ್ಟಡ ನವೀಕರಣಗೊಂಡ ಕೇವಲ‌ 10 ವರ್ಷಗಳಲ್ಲಿಯೇ ಕಟ್ಟಡದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.‌ ಸದ್ಯ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಅದನ್ನು ಶಾಶ್ವತವಾಗಿ ಮುಚ್ಚಲಾಗಿದೆ. ಮತ್ಸ್ಯಾಲಯದ ಅಕ್ವೇರಿಯಂಗಳನ್ನು ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಮತ್ಸ್ಯಾಲಯದಲ್ಲಿನ ಪಾನಿಸ್ ಕೋಯ್, ಸ್ಮಾಲ್ ಕೋಯ್, ಗೋಲ್ಡನ್ ರೋಸಿ, ಡೈಮಂಡ್ ಆ್ಯಂಗಲ್, ಗೋಲ್ಡ್ ಫಿಶ್ ಹೀಗೆ 30ಕ್ಕೂ ಅಧಿಕ ವಿಧದ ಮೀನುಗಳು ಹಾಗೂ ಆಮೆಯ ಮರಿಗಳು ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡುವವರನ್ನು ಮನಸೂರೆಗೊಳಿಸುತ್ತಿವೆ.

ಇನ್ನು ಹಲವು ವರ್ಷಗಳ ಹಿಂದಿನ ತಿಮಿಂಗಿಲದ ಅಸ್ತಿಪಂಜರವನ್ನು ಸಹ ವಿಜ್ಞಾನ ಕೇಂದ್ರದಲ್ಲಿ ಸಂರಕ್ಷಿಸಿಡಲಾಗಿದ್ದು, ಇದು ಕೂಡ ಪ್ರವಾಸಿಗರ ಕೌತುಕ ಹೆಚ್ಚಿಸಿದೆ. ಎನ್ನುತ್ತಾರೆ ಅಧಿಕಾರಿಗಳು. ಇನ್ನು ಸಾಗರ ಮತ್ಸ್ಯಾಲಯದ ಕಟ್ಟಡ ಸದ್ಯ ಕುಡುಕರ ಅಡ್ಡೆಯಾಗಿದ್ದು, ಪಾಳುಬಿದ್ದ ಕಟ್ಟಡವನ್ನು ಮದ್ಯವ್ಯಸನಿಗಳು ರಾತ್ರಿ ಅಡ್ಡೆ ಮಾಡಿಕೊಂಡಿದ್ದಾರೆ. ಕೂಡಲೇ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸೇರಿ ಈಗಿರುವಂತೆಯೇ ಸಾಗರ ಮತ್ಸ್ಯಾಲಯವನ್ನು ಪ್ರತ್ಯೇಕವಾಗಿ ಸ್ಥಾಪಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ‌.

ಒಟ್ಟಿನಲ್ಲಿ ಪ್ರವಾಸಿಗರನ್ನು ಆಕರ್ಷಿಸಬೇಕಾಗಿದ್ದ ತಾಣ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದ್ದು, ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಅಕ್ರಮ ಚಟುವಟಿಕೆಗಳನ್ನು ತಡೆಯಬೇಕಿದೆ.

ಉದಯ ಬರ್ಗಿ ಪವರ್ ಟಿವಿ ಕಾರವಾರ

RELATED ARTICLES
- Advertisment -
Google search engine

Most Popular

Recent Comments