Wednesday, September 17, 2025
HomeUncategorizedದೆಹಲಿ ಮಾದರಿ ಸಿಲಿಕಾನ್​ ಸಿಟಿಯಲ್ಲೂ ಓಡಲಿದೆ ಚಾಲಕ ರಹಿತ ಮೆಟ್ರೋ

ದೆಹಲಿ ಮಾದರಿ ಸಿಲಿಕಾನ್​ ಸಿಟಿಯಲ್ಲೂ ಓಡಲಿದೆ ಚಾಲಕ ರಹಿತ ಮೆಟ್ರೋ

ಬೆಂಗಳೂರು: ಚಾಲಕ ರಹಿತ ಮೆಟ್ರೋ ಓಡಿಸೋಕೆ ಸಿಲಿಕಾನ್​ ಸಿಟಿ ಮೆಟ್ರೋ ನಿಗಮ ಸಜ್ಜು ಆಗ್ತಿದೆ.

ದೆಹಲಿ ಮಾದರಿ ಬೆಂಗಳೂರಿನಲ್ಲಿಯೂ ಓಡಲಿದೆ ಚಾಲಕ ರಹಿತ ಮೆಟ್ರೋ. ಚಾಲಕ ರಹಿತ ಮೆಟ್ರೋ ಓಡಿಸೋಕೆ ಕಮ್ಯುನಿಕೇಷನ್ ಬೇಸ್ಟ್ ಟ್ರೈನ್ ಕಂಟ್ರೋಲ್ ಸಿಗ್ನಲಿಂಗ್ ಸಿಸ್ಟಮ್ ತಂತ್ರಜ್ಞಾನ ಆಳವಡಿತ್ತಿರೋ BMRCL, ಚಾಲಕರು ಇಲ್ಲದೆ ನಿಯಂತ್ರಣ ಕೊಠಡಿ ಯಿಂದಲೇ ನಿರ್ವಹಣೆ ಮಾಡಲಾಗುತ್ತದೆ.

ಅದಲ್ಲದೇ, ಗೊಟ್ಟಿಗೆರೆ – ನಾಗವಾರ ಮೆಟ್ರೋ ಮಾರ್ಗದಲ್ಲಿ ಮೊದಲು ಸ್ವಯಂಚಾಲಿತ ಮೆಟ್ರೋ ಓಡಾಟ ಫ್ಲ್ಯಾನ್ ಮಾಡಲಾಗಿದ್ದು, ಚಾಲಕರ ತಪ್ಪುಗಳಿಂದ ಬೆಂಗಳೂರು ಮೆಟ್ರೋ ಆಗಾಗ ಸ್ಥಗಿತಗೊಂಡಿದೆ. ಹೀಗಾಗಿ ಎಲ್ಲಾ ಮಾರ್ಗಗಳಲ್ಲಿ ಚಾಲಕ ರಹಿತ ಮೆಟ್ರೋ ಓಡಿಸೋಕೆ BMRCL ಮುಂದಾಗಿದೆ.

ಆದರೆ ಚಾಲಕರ ರಹಿತ ಮೆಟ್ರೋ ಓಡಿದ್ರೆ ನಮ್ಮ ಮೆಟ್ರೋ ಚಾಲಕರ ಕಥೆಯೇನು..? ನಮ್ಮ ಮೆಟ್ರೋ ಚಾಲಕರ‌ ಕೆಲಸಕ್ಕೆ ಬರುತ್ತಾ ಕುತ್ತು..? ಈಗಾಗಲೇ ಬೆಂಗಳೂರು ಮೆಟ್ರೋದಲ್ಲಿ ಕಾರ್ಯನಿರ್ವಹಿಸುತ್ತಿರೋ 200 ಕ್ಕೂ ಹೆಚ್ಚು ಚಾಲಕರು ಸ್ವಯಂಚಾಲಿತ ಮೆಟ್ರೋ ಆರಂಭವಾದ್ರೆ ಚಾಲಕರಿಗೆ ಗೇಟ್ ಪಾಸ್ ಸಾಧ್ಯತೆ ಇದ್ದು, ಈಗಾಗಿ ನಮ್ಮ ಮೆಟ್ರೋ ಚಾಲಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments