Monday, August 25, 2025
Google search engine
HomeUncategorizedಆರಗ ಜ್ಞಾನೇಂದ್ರ ತವರು ಶಿವಮೊಗ್ಗದಲ್ಲಿ ಉಗ್ರರ ಕರಿ ನೆರಳು..?

ಆರಗ ಜ್ಞಾನೇಂದ್ರ ತವರು ಶಿವಮೊಗ್ಗದಲ್ಲಿ ಉಗ್ರರ ಕರಿ ನೆರಳು..?

ಶಿವಮೊಗ್ಗ : ಗೃಹ ಮಂತ್ರಿ ತವರಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವುದು ಪತ್ತೆಯಾಗಿದ್ದು, ಸ್ಯಾಟಲೈಟ್ ಫೋನ್ ಸಿಗ್ನಲ್​ಗಳನ್ನು ISD ಅಧಿಕಾರಿಗಳ ತಂಡ ಪರಿಶೀಲನೆ ಮಾಡಿದ್ದಾರೆ.

ಸ್ಯಾಟಲೈಟ್ ಫೋನ್ ಸಿಗ್ನಲ್​ಗಳ ಪರಿಶೀಲನೆ ನಡೆಸಿದ ISD ಅಧಿಕಾರಿಗಳ ತಂಡ ಸಿಗಂದೂರು, ಶಿಕಾರಿಪುರ ಸಮೀಪದಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿದೆ. ಸಿಗಂದೂರು ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಬಳಸಿದ್ದರಾ..? ಶಿಕಾರಿಪುರ ಪಟ್ಟಣದ ಸಮೀಪದಲ್ಲಿಯೇ ಸ್ಯಾಟಲೈಟ್ ಫೋನ್ ಬಳಕೆ ಆಗಿತ್ತಾ..? ಗೃಹ ಸಚಿವರ ತವರನ್ನೇ ಸ್ಯಾಟಲೈಟ್ ಫೋನ್ ಬಳಕೆಗೆ ಆಯ್ಕೆ ಮಾಡಿಕೊಂಡಿದ್ಯಾಕೆ..? ಕಳೆದ 15 ದಿನಗಳ ಹಿಂದೆ ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆಯಾಗಿತ್ತಾ ಎಂದು ಪ್ರಶ್ನೆಯಾಗಿ ಉಳಿದಿದೆ.

ಅದಲ್ಲದೇ, ಆಂತರಿಕ ಭದ್ರತಾ ವಿಭಾಗದ ಪೊಲೀಸರ ನಿದ್ದೆಗೆಡಿಸಿದೆ ಸ್ಯಾಟಲೈಟ್ ಫೋನ್ ಬಳಕೆಯ ಬಗ್ಗೆ ಕೇಂದ್ರ ಹಾಗೂ ರಾಜ್ಯ ಪೊಲೀಸರ ಜಂಟಿ ತನಿಖೆ ಶುರುವಾಗಿದೆ. ನಿಷೇಧಿತ ಸ್ಯಾಟಲೈಟ್ ಸಿಗ್ನಲ್​ಗಳು ಅಕ್ರಮವಾಗಿ ಕಾರ್ಯಾಚರಣೆ ಪತ್ತೆಯಾಗಿದ್ದು, ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆಯನ್ನು ಗುಪ್ತಚರ ಇಲಾಖೆ ಪತ್ತೆ ಮಾಡಿದೆ.

ಇನ್ನು, ರಾಜ್ಯ ಆಂತರಿಕ ಭದ್ರತಾ ವಿಭಾಗದ ಪೋಲಿಸರಿಂದ ತನಿಖೆಯನ್ನು ಮಾಡಲಾಗಿದ್ದು, ನಿಷೇಧಿತ ಸ್ಯಾಟಲೈಟ್ ಫೋನ್ ಕಾರ್ಯಾಚರಣೆಯ ಹಿಂದಿನ ದುಷ್ಟರು ಯಾರು..? ಅನಿವಾಸಿ ಭಾರತೀಯರಿಂದ ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ ನಡೆದಿದೆಯಾ..? ಪ್ರವಾಸಿಗರ ಸೋಗಿನಲ್ಲಿ ಬಂದವರು ಬಳಕೆ ಮಾಡಿದರಾ..?ಬಳಕೆಯ ಹಿಂದಿನ ಉದ್ದೇಶವೇನು..? ನಡೆದಿರೋ ಹುನ್ನಾರವೇನು..? ಎಂದು ಇನ್ನು ತಿಳಿಯಬೇಕಿದೆ.

RELATED ARTICLES
- Advertisment -
Google search engine

Most Popular

Recent Comments