ಪ್ರಶಾಂತ್ ಹತ್ಯೆ ಕೇಸ್ : CIDಗೆ ಹಸ್ತಾಂತರಿಸುವಂತೆ ರೇವಣ್ಣ ಆಗ್ರಹ

ಹಾಸನ : ಹತ್ಯೆಯಾದ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಪ್ರಕರಣ ಸಿಐಡಿಗೆ ಹಸ್ತಾಂತರ ವಿಚಾರಕ್ಕೆ ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಹೆಚ್.ಡಿ.‌ರೇವಣ್ಣ, ಡಿವೈಎಸ್ಪಿ, ಸಿಪಿಐ ವಿರುದ್ದ ಗರಂ ಆಗಿದ್ದಾರೆ.

ನಾನು ಗೃಹ ಸಚಿವ, ಡಿಜಿ, ಮೈಸೂರು IG ಯವರಿಗೂ ಮನವಿ ಮಾಡುತ್ತೇನೆ.‌ ಮೊದಲು DySP ಉದಯಭಾಸ್ಕರ್, ಸಿಪಿಐ ರೇಣುಕಾಪ್ರಸಾದ್ ಅವರನ್ನು ಅರೆಸ್ಟ್ ಮಾಡಿ, ಕಸ್ಟಡಿಗೆ ತೆಗೆದುಕೊಳ್ಳಲಿ. ಅವರ ಫೋನ್ ಪರಿಶೀಲಿಸಿದರೆ ಎಲ್ಲಾ ವಿಷಯ ಬಯಲಾಗುತ್ತದೆ ಎಂದರು.

ಪ್ರಶಾಂತ್ ಪತ್ನಿ ನೀಡಿದ್ದ ಕಂಪ್ಲೇಟ್ ಅನ್ನು ಉದಯಭಾಸ್ಕರ್ ಹೇಗೆ ಬದಲಾಯಿಸಿದ, ಅವರ ಮೇಲೆ ಉನ್ನತ ಮಟ್ಟದ ತನಿಖೆ ನಡೆಸಿ ಅಂತಾ ಆಕ್ರೋಶ ವ್ಯಕ್ತಪಡಿಸಿದರು. ಹಾಸನ ಪೊಲೀಸ್ ಠಾಣೆಗಳು ರೌಡಿಗಳ ತಾಣವಾಗಿದೆ, ದುಡ್ಡಿಗಾಗಿ ಈ ಅಧಿಕಾರಿಗಳು ಯಾರನ್ನು ಬೇಕಾದರೂ ಕೊಲೆ ಮಾಡಿಸುತ್ತಾರೆ. ಜೂಜು, ಮರಳುದಂಧೆ, ಮಟ್ಕಾ ಆಡಿಸೋದೇ ಇವರ ಕೆಲಸ, ಜನರೇ ಹೇಳುತ್ತಿದ್ದಾರೆ.

ಮೊದಲು ಈ ಅಧಿಕಾರಿಗಳ ಮೇಲೆ FIR ಹಾಕಿ, ಈ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸಿಐಡಿಗೆ ಹಸ್ತಾಂತರ ಮಾಡಿ ಎಂದು ಒತ್ತಾಯಿಸಿದರು.

ಇನ್ನು ಧಾರವಾಡದಲ್ಲಿ ಯೋಗೀಶ್ ಹತ್ಯೆ ಪ್ರಕರಣದಲ್ಲಿ ರಾಜಕಾರಣಿ, ಪೊಲೀಸ್ ಬಂಧಿಸಿಲ್ವಾ, ಸರ್ಕಲ್ ಇನ್ಸ್​​ಪೆಕ್ಟರ್​​ಗಳ ವರ್ಗಾವಣೆ ಫಿಶ್ ಮಾರ್ಕೆಟ್ ಆಗಿದೆ, 40,50 ಲಕ್ಷ ಕೊಟ್ಟು ಬಂದಿದ್ದೇನೆ ಅಂತಾರೆ, ಈಗಿನ ಗೃಹಮಂತ್ರಿಗಳ ಬಗ್ಗೆ ಗೌರವವಿದೆ, ಸಣ್ಣತನದ ವ್ಯಕ್ತಿಯಲ್ಲ, ಅವರ ಬಗ್ಗೆ ಕಾಂಗ್ರೆಸ್ ಅವರ ತರ ಸಣ್ಣತನದ ಹೇಳಿಕೆ ಕೊಡಲ್ಲ ಅಂತಾ ಪೊಲೀಸ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

RELATED ARTICLES

Related Articles

TRENDING ARTICLES