Saturday, September 13, 2025
HomeUncategorizedರಾಜ್ಯಸಭೆಗೆ ನಟ ಜಗ್ಗೇಶ್​ ಆಯ್ಕೆ ಹಿಂದಿರುವ ರಹಸ್ಯ..?

ರಾಜ್ಯಸಭೆಗೆ ನಟ ಜಗ್ಗೇಶ್​ ಆಯ್ಕೆ ಹಿಂದಿರುವ ರಹಸ್ಯ..?

ಬೆಂಗಳೂರು : ರಾಜ್ಯಸಭೆ ಚುನಾವಣೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ನಿರೀಕ್ಷೆಯಂತೆಯೇ ಮೊದಲ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವ ಬಿಜೆಪಿ, ಎರಡನೇ ಅಭ್ಯರ್ಥಿಯನ್ನಾಗಿ ಚಿತ್ರನಟ ಜಗ್ಗೇಶ್‌ ಅವರನ್ನು ಕಣಕ್ಕಿಳಿಸುವ ಅಚ್ಚರಿಯ ತೀರ್ಮಾನವನ್ನು ಭಾನುವಾರ ಪ್ರಕಟಿಸಿದೆ.

ಆದರೆ, ಸ್ವತಃ ಜಗ್ಗೇಶ್‌ ಅವರೇ ಇಂಥದೊಂದು ಸಿಹಿ ಸುದ್ದಿ ನಿರೀಕ್ಷಿಸಿರಲಿಲ್ಲ. ಮತ್ತೊಂದು ಬಾರಿಗೆ ಎಂಎಲ್​​ಸಿ ಅವಕಾಶ ಸಿಕ್ಕರೆ ಸಾಕು ಎಂದಿದ್ದ ಅವರಿಗೆ ರಾಜ್ಯಸಭೆ ಪ್ರವೇಶಿಸುವ ಅದೃಷ್ಟ ಹುಡುಕಿಕೊಂಡು ಬಂದಿದೆ.

ಇನ್ನು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಗೆ ಆಗದ ಹೆಸರನ್ನು, ಈಗ ಆಯ್ಕೆ ಮಾಡಿದ್ದಾರೆ. ಹಾಗಾದ್ರೆ, ರಾಜ್ಯಸಭೆಗೆ ಜಗ್ಗೇಶ್ ಅವರನ್ನು ಆಯ್ಕೆ ಮಾಡಿದ್ಯಾಕೆ..? ಎಂಬ ಪ್ರಶ್ನೆ ಕಾಡುವುದಂತು ಸತ್ಯ.

ಇದಕ್ಕೆ ಕಾರಣ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಳೆ ಮೈಸೂರು ಪ್ರಾಂತ್ಯವನ್ನು ಸವಾಲಾಗಿ ಸ್ವೀಕರಿಸಲು ಬಿಜೆಪಿ ಮುಂದಾಗಿದೆ. ಇದರ ಭಾಗವಾಗಿ ಸಂಘಟನೆ ಬಲಪಡಿಸುವ ಕೆಲಸ ನಡೆಯುತ್ತಿದೆ. ಇತರ ಪಕ್ಷಗಳ ಮುಖಂಡರನ್ನೂ ಸೇರಿಸಿಕೊಳ್ಳಲಾಗುತ್ತಿದೆ. ರಾಜ್ಯಸಭೆಗೆ ಜಗ್ಗೇಶ್‌ ಅವರನ್ನು ಆಯ್ಕೆ ಮಾಡಿರುವುದು ಈ ಕಾರ್ಯತಂತ್ರದ ಭಾಗವೇ ಆಗಿದೆ.

ಅಷ್ಟೆಅಲ್ಲದೇ ಜಗ್ಗೇಶ್‌ ಅವರು ತಮ್ಮ ಮಾತಿನ ಶೈಲಿಯಿಂದಲೇ ಜನಾಕರ್ಷಣೆಯನ್ನು ಮಾಡಬಲ್ಲರು. ಹಾಗೂ ಇವರು ನಟರೂ ಆಗಿರುವುದರಿಂದ ಇದು ಅವರಿಗೆ ಪ್ಲಸ್‌ ಆಗಲಿದೆ. ಆಯ್ಕೆ ಪ್ರಕ್ರಿಯೆಯನ್ನು ನೇರವಾಗಿ ಹೈಕಮಾಂಡ್‌ ಕೈಗೊಂಡಿದೆ. ಸಂಘ ಪರಿವಾರದ ಸಲಹೆ ಪಡೆಯಲಾಗಿದ್ದು, ಹೈಕಮಾಂಡ್‌ ತನ್ನದೇ ಮೂಲಗಳಿಂದ ಇದರ ಪ್ರಯೋಜನದ ಬಗ್ಗೆ ಪರಾಮರ್ಶೆ ನಡೆಸಿದೆ.

ಎಂಎಲ್‌ಸಿ ಚುನಾವಣೆಯಲ್ಲಿ ಲಿಂಗಾಯತ, ಒಬಿಸಿ, ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿತ್ತು. ರಾಜ್ಯಸಭೆ ಚುನಾವಣೆಗೆ ಜಗ್ಗೇಶ್‌ ಅವರನ್ನು ಪರಿಗಣಿಸುವ ಮೂಲಕ ಹಳೆ ಮೈಸೂರು ಪ್ರಾಂತ್ಯದ ಒಕ್ಕಲಿಗ ಸಮಾಜಕ್ಕೆ ಪ್ರಾತಿನಿಧ್ಯ ಕಲ್ಪಿಸಿದಂತಾಗಿದೆ. ನಿರ್ಮಲಾ ಹೊರ ರಾಜ್ಯದವ­ರಾದರೂ ಜಾತಿ ಪ್ರಾತಿನಿಧ್ಯದ ದೃಷ್ಟಿಯಿಂದ ಬ್ರಾಹ್ಮಣರು. ಹಾಗಾಗಿ ಸಾಮಾಜಿಕ ನ್ಯಾಯದ ಪರಿಪಾಲ­­ನೆಯಾಗಿದೆ ಎಂದು ಬಿಜೆಪಿ ಮೂಲ­ಗಳು ತಿಳಿಸಿದೆ.

RELATED ARTICLES
- Advertisment -
Google search engine

Most Popular

Recent Comments