Wednesday, September 3, 2025
HomeUncategorizedಕಿರಾತಕರ ಕೃತ್ಯಕ್ಕೆ ಬೆಚ್ಚಿಬಿದ್ದ ಗುಮ್ಮಟ ನಗರಿ

ಕಿರಾತಕರ ಕೃತ್ಯಕ್ಕೆ ಬೆಚ್ಚಿಬಿದ್ದ ಗುಮ್ಮಟ ನಗರಿ

ವಿಜಯಪುರ : ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಾಮಕೇರಿ ಗ್ರಾಮದ ಬಳಿ ದ್ರಾಕ್ಷಿ ತೋಟದಲ್ಲಿ ಬರ್ಬರ ಕೊಲೆಯಾಗಿದೆ.ಅಶೋಕ ಕುಂಬಾರ ಮೃತಪಟ್ಟ ದುರ್ದೈವಿ.ಸಂಬಂಧಿಗಳಾದ ಮಹಾದೇವಪ್ಪ ಕುಂಬಾರ ಹಾಗೂ ಸಹಚರರು ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮೃತ ಅಶೋಕ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಸಂಬಂಧಿ ಮಹಾದೇವಪ್ಪ ಎಂಬಾತನ ಮೇಲೆ ಹಲ್ಲೆ ಮಾಡಿ ಅವರ ಮಕ್ಕಳಿಗೆ ಕರೆ ಮಾಡಿ ನಿಮ್ಮ ತಂದೆಗೆ ಹೊಡೆದು ಕಾಲು ಮುರಿದಿದ್ದೇನೆ ಎಂದು ಹೇಳಿದ್ದನಂತೆ. ಬಳಿಕ ಅವರು ಬಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಅಶೋಕ ಕಳೆದ ತಿಂಗಳಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದರು.ಬೆಳಗ್ಗೆ ಹೊಲಕ್ಕೆ ಹೊರಟಿದ್ದಾಗ ಕೊಲೆಗೈಯ್ಯಲಾಗಿದೆ.

ಇನ್ನು ಜಮೀನಿಗೆ ಹೋಗುವ ದಾರಿ ವಿಚಾರವಾಗಿ ಕಳೆದ ಹಲವು ವರ್ಷಗಳಿಂದ ಗಲಾಟೆಗಳು ಆಗುತ್ತಿದ್ದು.ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮಗನ ಸಾವಿಗೆ ನ್ಯಾಯ ಬೇಕು ಎಂದು ಕಣ್ಣೀರು ಹಾಕಿದ್ದಾರೆ.ಇನ್ನೊಂದೆಡೆ ಇಂಥಾ ವಿವಾದಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ಒಟ್ಟಾರೆ ಜಮೀನಿನ ದಾರಿ ವಿವಾದ ಕೊಲೆಯಲ್ಲಿ ಅಂತ್ಯವಾಗಿದ್ದು ದುರಂತ. ಹಳ್ಳಿಗಳಲ್ಲಿ ಇರುವಂತಹ ಇಂಥಾ ದಾರಿಯ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಪ್ರಜ್ಞಾವಂತರ ಒತ್ತಾಯ.

RELATED ARTICLES
- Advertisment -
Google search engine

Most Popular

Recent Comments