Thursday, September 11, 2025
HomeUncategorizedಬಿಎಂಟಿಸಿ ಬಸ್ ಮಾಸಿಕ ಪಾಸ್​ನಲ್ಲಿ ಮಹತ್ವದ ಬದಲಾವಣೆ

ಬಿಎಂಟಿಸಿ ಬಸ್ ಮಾಸಿಕ ಪಾಸ್​ನಲ್ಲಿ ಮಹತ್ವದ ಬದಲಾವಣೆ

ಬೆಂಗಳೂರು: ಹೊಸ ನಿಯಮದ ಪ್ರಕಾರ ಯಾವ ದಿನಾಂಕದಂದು ಪಾಸ್ ಕೊಂಡರೂ ಮುಂದಿನ ತಿಂಗಳ ಅದೇ ದಿನಾಂಕದ ವರೆಗೂ ಬಸ್​ ಪಾಸ್ ಚಾಲ್ತಿಯಲ್ಲಿರಲಿದೆ.

ಈ ಹಿಂದೆ ಮಾಸಿಕ ಪಾಸ್ ಕ್ಯಾಲೆಂಡರ್ ಆಧಾರದಲ್ಲಿ ವಿತರಣೆ ಮಾಡಲಾಗ್ತಿತ್ತು. ಇದೀಗ ದಿನಾಂಕವಾರು ಮಾಸಿಕ ಪಾಸ್ ವಿತರಿಸಲು ಮುಂದಾದ ಬಿಎಂಟಿಸಿ ಹಿಂದಿನ ನಿಯಮದ ಪ್ರಕಾರ ತಿಂಗಳ ಯಾವುದೇ ದಿನಾಂಕದಲ್ಲಿ ಪಾಸ್ ಕೊಂಡಿದ್ದರೂ ಪಾಸ್ ಅವಧಿ 30 ಕ್ಕೆ ಮುಕ್ತಾಯವಾಗುತ್ತಿತ್ತು.

ಅದಲ್ಲದೇ, ಹೊಸ ನಿಯಮದ ಪ್ರಕಾರ ಯಾವ ದಿನಾಂಕದಂದು ಪಾಸ್ ಕೊಂಡರೂ ಮುಂದಿನ ತಿಂಗಳ ಅದೇ ದಿನಾಂಕದ ವರೆಗೂ ಪಾಸ್ ಚಾಲ್ತಿಯಲ್ಲಿರಲಿದೆ. ಬಿಎಂಟಿಸಿಯ ಸಾಮಾನ್ಯ ಸಾರಿಗೆ, ವಜ್ರ ಮತ್ತು ವಾಯುವಜ್ರ ಬಸ್ ಮಾಸಿಕ ಪಾಸ್​ಗೆ ಹೊಸ ನಿಯಮ ಅನ್ವಯವಾಗಲಿದ್ದು, ಜುಲೈ 1 ರಿಂದ ಬಿಎಂಟಿಸಿಯ ಹೊಸ ನಿಯಮ ಜಾರಿಯಾಗಲಿದೆ.

ಇನ್ನು, ಹೊಸ ಪಾಸ್ ನಿಯಮದಂತೆ ಬಿಎಂಟಿಸಿ ವಿತರಿಸೋ ಗುರುತಿನ ಚೀಟಿ ಅಗತ್ಯವಿಲ್ಲ. ಬದಲಾಗಿ ವೈಯಕ್ತಿಕ ಗುರುತಿನ ಚೀಟಿ ಬಳಸಿ ಪಾಸ್ ತೋರಿಸಿ ಅಥವಾ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಇತರೆ ಐಡಿ ಕಾರ್ಡ್ ಇದ್ದರೆ ಪ್ರಯಾಣಿಸಲು ಅವಕಾಶವನ್ನು ನೀಡಲಾಗುತ್ತದೆ.

RELATED ARTICLES
- Advertisment -
Google search engine

Most Popular

Recent Comments