Thursday, August 28, 2025
HomeUncategorizedಬಿಡಿಎ ದುಡ್ಡಿನಲ್ಲಿ ಸಹಕಾರ ಸಚಿವರ ದರ್ಬಾರ್..!

ಬಿಡಿಎ ದುಡ್ಡಿನಲ್ಲಿ ಸಹಕಾರ ಸಚಿವರ ದರ್ಬಾರ್..!

ಬೆಂಗಳೂರು: ಜನರ ದುಡ್ಡು ಅಂದ್ರೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮಜಾ ಉಡಾಯಿಸೋಕೆ ಇರೋದು ಅನಿಸುತ್ತೆ. ಜನ ಹೆಂಗ್ ಸಾಯ್ತಿದ್ರು ಪರವಾಗಿಲ್ಲ, ಆದ್ರೆ ನಮ್ ರಾಜಕಾರಣಿಗಳಿಗೆ, ಆಫೀಸರ್​ ಮಾತ್ರ ಎಲ್ಲಾ ಓಸೀನೇ ಬೇಕು. ಕಾರು ಬಂಗ್ಲೆ ಕೈಗೊಂದು ಕಾಲ್ಗೊಂದು ಆಳು ಇರ್ಲೇಬೇಕು. ಹೀಗಾಗಿ ಬಿಡಿಎ ದುಡ್ಡನ್ನ ಬೇಕಾಬಿಟ್ಟಿ ದುರಪಯೋಗ ಮಾಡಿಕೊಳ್ತಿರೋದು. ಈಗಾಗಲೇ ಬಿಡಿಎನಲ್ಲಿ ದುಡ್ಡಿಲ್ಲ ಅಂತಾ ಅಧಿಕಾರಿಗಳು ಬೊಬ್ಬೆ ಬಡಿದುಕೊಳ್ತಿದ್ದಾರೆ ಇದರ ಮಧ್ಯೆ ಇದೀಗ ಜನಪ್ರತಿನಿಧಿಗಳಿಗೂ ಕೂಡ ಪುಕ್ಕಟ್ಟೆಯಾಗಿ ಬಿಡಿಎ ದುಡ್ಡು ಖರ್ಚು ಮಾಡಬೇಕಾದ ಸ್ಥಿತಿ ಎದುರಾಗಿದೆ. ಹೌದು ಅಧಿಕಾರದಲ್ಲಿದ್ದಾಗ ಬಿಡಿಎ ಬಂಗಲೆ ತೆಗೆದುಕೊಂಡವರು ಇನ್ನೂ ವಾಪಸ್ ನೀಡದೇ ಇರೋದು ಬಿಡಿಎ ಕೆಂಗಣ್ಣಿಗೆ ಕಾರಣವಾಗಿದೆ.

ಬಿಡಿಎನಾ ಈ ಹಿಂದಿನ ಚೇರಮನ್ ಆಗಿದ್ದ ಎಸ್ ಟಿ ಸೋಮಶೇಖರ್ ಬಿಡಿಎಯಿಂದ ಅತಿಥಿ ಗೃಹವನ್ನ ಪಡೆದುಕೊಂಡಿದ್ರು, ಆದ್ರೆ ಹಿಂದಿನ ಮೈತ್ರಿ ಸರ್ಕಾರ ಪತನಗೊಂಡಿದೆ. ಅವರ ಚೇರಮನ್ ಪಟ್ಟ ಹೋದ್ರು ಅವರು ಅತಿಥಿ ಗೃಹ ಮಾತ್ರ ಬಿಟ್ಟುಕೊಡ್ತಿಲ್ಲ.ಹೀಗಾಗಿ ಬಿಡಿಎಗೆ ಎಸ್ ಟಿ ಸೋಮಶೇಖರ್ ಹೊರೆ ಮಾಡ್ತಿದ್ದಾರೆ.ಇದು ಸಾಮಾಜಿಕ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ನಿಯಮದ ಪ್ರಕಾರ ಬಿಡಿಎ ಅತಿಥಿ ಗೃಹ ಚೇರ್ಮನ್ ಗೆ ಮಾತ್ರ ಸೀಮಿತವಾಗಿದ್ದು‌.ಯಾರೇ ಬಿಡಿಎ ಅಧ್ಯಕ್ಷ ಆದ್ರೂ ಅತಿಥಿ ವಾಸ ಮಾಡ್ತಾರೆ.ಈ ಹಿಂದೆ ಪರಮೇಶ್ವರ್, ವೆಂಕಟೇಶ್ ಚೇರ್ಮನ್ ಆಗಿದ್ದ ವೇಳೆ ಇದೇ ಅತಿಥಿ ಗೃಹದಲ್ಲಿ ಇದ್ರು.ಬಳಿಕ ಎಸ್ ಟಿ ಸೋಮಶೇಖರ್ ಕೂಡ ಇಲ್ಲೇ ಇದ್ರೂ ಆದ್ರೆ ಇದೀಗ ಅಧ್ಯಕ್ಷ ಸ್ಥಾನ ಹೋದರು ಇನ್ನೂ ಖಾಲಿ ಮಾಡಿಲ್ಲ.

ಒಟ್ನಲ್ಲಿ ಬಿಡಿಎ ಈಗಾಗಲೇ ದಿವಾಳಿಅಂಚಿನಲ್ಲಿದೆ.ಹೀಗಿರುವಾಗ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಗೆ ಬರದಿದ್ರು ಅವರಿಗಾಗಿ ಹಣ ಖರ್ಚು ಮಾಡಬೇಕಾದ ಸ್ಥಿತಿ ಎದುರಾಗಿದೆ. ಇನ್ನಾದ್ರು ನಮ್ಮನ್ನಾಳುವ ರಾಜಕಾರಣಿಗಳು ಜನರು ದುಡ್ಡು ಪೋಲ್ ಮಾಡೋದನ್ನ ನಿಲ್ಲಿಸಬೇಕಿದೆ.ಜೊತೆಗೆ ಬಿಡಿಎಗೆ ಸೇರಬೇಕಾದ ಮನೆಯನ್ನ ಬಿಡಿಎಗೆ ಹಸ್ತಾಂತರ ಮಾಡಿ ಬಿಡಿಎ ಆಗ್ತಿರೋ ಹೊರೆಯನ್ನ ಉಳಿಸಿಬೇಕಿದೆ.

RELATED ARTICLES
- Advertisment -
Google search engine

Most Popular

Recent Comments