Friday, September 12, 2025
HomeUncategorizedರಾಮನಗರದವರೆಲ್ಲಾ ಹೆಂಗಸರು : ಡಿ ಕೆ ಶಿವಕುಮಾರ್​​

ರಾಮನಗರದವರೆಲ್ಲಾ ಹೆಂಗಸರು : ಡಿ ಕೆ ಶಿವಕುಮಾರ್​​

ಬೆಂಗಳೂರು : ನಾವು ಗಂಡಸರಲ್ಲಪ್ಪ. ರಾಮನಗರದವರೆಲ್ಲಾ ಹೆಂಗಸರು ನಮಗೆ ಅವರನ್ನ ನೋಡಿದರೆ ಭಯ ಆಗುತ್ತದೆ ಎಂದು ಪರೋಕ್ಷವಾಗಿ ಅಶ್ವಥ್ ನಾರಾಯಣ ವಿರುದ್ಧ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಕೆಮ್ಮು ಎಲ್ಲಾ ಜಾಸ್ತಿ ದಿನ ಮುಚ್ಚಿಡೋಕೆ ಸಾಧ್ಯವಾಗುವುದಿಲ್ಲ. ಕೆಲವರು ಸಾಲ ಸೋಲ ಮಾಡಿ ತಂದು ಕೊಟ್ಟಿದ್ದಾರೆ. ಬೇಕಿದ್ದರೆ ಆಯಾಯಾ ಊರುಗಳಲ್ಲಿ ಹೋಗಿ ಅಲ್ಲಿ ವಿಚಾರಿಸಿ ನಿಮಗೆ ತಿಳಿಯುತ್ತದೆ. ಕೆಲವರನ್ನ ರಕ್ಷಿಸಲು ಪರೀಕ್ಷೆ ರದ್ದು ಮಾಡಿದ್ದಾರೆ. ಸಿಎಂ ಅವರೇ ಯಾರನ್ನೂ ರಕ್ಷಣೆ ಮಾಡಬೇಡಿ. ನಿಮ್ಮ ಆಡಳಿತದಲ್ಲಿ ಇಂತದ್ದು ಆಗಿಲ್ಲ. ಆದರೆ, ನಿಮ್ಮ‌ ಹೆಸರು ದುರಪಯೋಗ ಆಗ್ತಾ ಇದೆ. ಆದ್ದರಿಂದ ದಯವಿಟ್ಟು ಈ ಪ್ರಕರಣದಲ್ಲಿ ಯಾರಿಗೂ ಸಹಾಯ ಮಾಡಬೇಡಿ ಎಂದರು.

ಇನ್ನು ಪ್ರಕರಣದಲ್ಲಿ ಭಾಗಿಯಾದ ಮಂತ್ರಿ ಯಾರು? ಆ ಸಚಿವರ ಹೆಸರು ಹೇಳಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಗಂಡಸರಲ್ಲಪ್ಪ. ಪಾಪ ಉಸ್ತುವಾರಿ ಸಚಿವರು ಗಂಡಸು ಯಾರಿದ್ದಾರೆ ಅಂತ ಕೇಳಿದ್ದಾರೆ ಅವರೊಬ್ಬರೆ ಗಂಡಸರು. ರಾಮನಗರದಲ್ಲಿ ಗಂಡಸರಿಲ್ಲ, ನಾವೆಲ್ಲಾ ಹೆಂಗಸರು. ನಾನು ನನ್ನ ತಮ್ಮ ಮತ್ತು ಅನಿತ ಕುಮಾರಸ್ಚಾಮಿ ಎಲ್ಲರು ಅವರ ಗಂಡಸ್ಥನ ನೋಡಿ ಗಢ ಗಢ ನಡುಗುತ್ತಿದ್ದೇವೆ ಎಂದು ವ್ಯಂಗವಾಡಿದರು.

ಅಲ್ಲದೇ ಪಿಎಸ್ ಐ ಅಕ್ರಮದಲ್ಲಿ ಹೆಸರು ಕೇಳಿ ಬಂದಿದೆ. ಅವರ ತಮ್ಮ ಅನ್ನಲ್ಲ ಅವರ ಕುಟುಂಬದ ಸಂಬಂಧಿಕರು ಭಾಗಿಯಾಗಿದ್ದಾರೆ ಅನ್ನೋ‌ ಮಾಹಿತಿ ಇದೆ ಹೀಗಾಗಿ ಸಿಎಂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕೆಂದು ಡಿ ಕೆ ಶಿವಕುಮಾರ್​​ ಕಿಡಿಕಾರಿದರು.

RELATED ARTICLES
- Advertisment -
Google search engine

Most Popular

Recent Comments