Thursday, September 11, 2025
HomeUncategorizedಜಮೀರ್​​ಗೆ ಬಿಜೆಪಿಯ ನಾಯಕನ ಬೆಂಬಲ ಇದೆ: ಯತ್ನಾಳ ಹೊಸ ಬಾಂಬ್​

ಜಮೀರ್​​ಗೆ ಬಿಜೆಪಿಯ ನಾಯಕನ ಬೆಂಬಲ ಇದೆ: ಯತ್ನಾಳ ಹೊಸ ಬಾಂಬ್​

ವಿಜಯಪುರ : ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್​​ನಂಥವರಿಗೆ ಬಿಜೆಪಿಯ ಒಬ್ಬ ಮಹಾನ್ ನಾಯಕರ ಬೆಂಬಲವೂ ಇದೆ ಎಂದು ವಿಜಯಪುರನಗರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೊಸ ಬಾಂಬ್ ಹಾಕಿದ್ದಾರೆ.

ಹುಬ್ಬಳ್ಳಿ ಗಲಾಟೆಗೆ ಕಾರಣವಾದ ಕುಟುಂಬದವರಿಗೆ ಫುಡ್ ಕಿಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪೊಲೀಸ್ ಠಾಣೆ ಹಾಗೂ ದೇವಸ್ಥಾನದ ಮೇಲೆ ಕಲ್ಲು ಹೊಡಿಯೋರು ಹೀಗೆ ಯಾವಾಗಲೂ ಹಿಂದೂ ವಿರೋಧಿ ಸರ್ಕಾರದ ವಿರುದ್ದವೇ ಇರುತ್ತಾನೆ. ಅಂಥವರ ಬಂಧನವಾದ ಬಳಿಕ ಜೈಲಿಗೆ ಹೋಗಿ ಸನ್ಮಾನ ಮಾಡುವುದು ಮಾಡುತ್ತಾನೆ. ಹಾಗಾದರೆ ಗೃಹ ಸಚಿವರು ಏನು ಮಾಡುತ್ತಿದ್ದಾರೆ ಎಂದು ಸ್ವಪಕ್ಷದ ಸಚಿವರಿಗೆ ಪ್ರಶ್ನೆ ಮಾಡಿದ್ದಾರೆ.

ಅದುವಲ್ಲದೇ ನಮ್ಮವರದ್ದೇ ಸಲುಗೆಯಿದೆ, ಎಲ್ಲಾ ಆಡ್ಜೆಸ್ಟಮೆಂಟ್ ಇರೋ ಕಾರಣ ಹೀಗಾಗುತ್ತಿದೆ. ಇಂಥವರನ್ನು ಗೃಹ ಸಚಿವರು ಒದ್ದು ಒಳಗೆ ಹಾಕಬೇಕು. ಎಲ್ಲ ತನಿಖೆ ಮಾಡಿ ಜಮೀರ್ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಇನ್ನು ಯುಪಿಯಲ್ಲಿ ಅಜಂಖಾನ್​​ನನ್ನು ಒಳಗೆ ಹಾಕಿದಂತೆ, ಇಲ್ಲಿ ಗಲಾಟೆ ಮಾಡಿದವರನ್ನು ಹೇಗೆ ಒಳಗೆ ಹಾಕಿದಂತೆ, ಜಮೀರ್​​ನನ್ನು ಒಳಗೆ ಹಾಕಬೇಕು. ಈ ವಿಚಾರಕ್ಕೆ ಸಿದ್ದರಾಮಯ್ಯನವರೇ ಉತ್ತರ ನೀಡದೇ ಅವರನ್ನ ಕೈಬಿಟ್ಟಿದ್ದಾರೆ. ಇವರೆಲ್ಲಾ ದೇಶ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಲ್ಲದೇ ಇವರನ್ನು ಹೀಗೆ ಬಿಟ್ಟರೆ ಇಂಥವರಿಗೆ ನಾವೇ ಸ್ಕೋಫ್ ಕೊಟ್ಟಂತಾಗುತ್ತದೆ.  ಜಮೀರ್​​ನಂಥವರಿಗೆ ಬಿಜೆಪಿಯ ಒಬ್ಬ ಮಹಾನ್ ನಾಯಕರ ಬೆಂಬಲವೂ ಇದೆ ಹಾಗೂ ಅವರ ಹಾಗೂ ಇವರ ನಡುವೆ ಬಿಸಿನೆಸ್ ಇದ್ದಾವೆ ಶಾಸಕ ಯತ್ನಾಳ ಎಂದು ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular

Recent Comments