Wednesday, August 27, 2025
HomeUncategorizedಎಂ. ಲಕ್ಣ್ಮಣಗೆ ಬಿಜೆಪಿ ಶಾಸಕ ರೇಣುಕಾಚಾರ್ಯ ಖಡಕ್​​ ವಾರ್ನಿಂಗ್​​

ಎಂ. ಲಕ್ಣ್ಮಣಗೆ ಬಿಜೆಪಿ ಶಾಸಕ ರೇಣುಕಾಚಾರ್ಯ ಖಡಕ್​​ ವಾರ್ನಿಂಗ್​​

ದಾವಣಗೆರೆ: ನಾನೇ ನಕಲಿ ಪ್ರಮಾಣ ಪತ್ರ ಪಡೆದಿದ್ದರೇ ನನ್ನ ಮೇಲೆ ತನಿಖೆ ಮಾಡಲಿ ಎಂದು ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಎಸ್ ಸಿ ಸವಲತ್ತುಗಳನ್ನು ಬಿಜೆಪಿ ಮುಖಂಡರು ದುರುಪಯೋಗ ಪಡಿಸಿಕೊಂಡಿದ್ದಾರೆಂಬ ವಿಚಾರದ ಹಿನ್ನಲೆ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು ನಾನು ಯಾವುದೇ ನಕಲಿ ಪ್ರಮಾಣ ಪತ್ರ ‌ಪಡೆದಿಲ್ಲಾ, ಹಾಗೂ ಯಾವುದೇ ಸರ್ಕಾರಿ ಸೌಲಭ್ಯ ಪಡೆದಿಲ್ಲಾ ಎಂದರು

ಅಲ್ಲದೇ  ನಾನು ಸರ್ಕಾರಿ ಸೌಲಭ್ಯ ಪಡೆದಿದ್ದೇನೆಂದು ಕಾಂಗ್ರೆಸ್​​ ವಕ್ತಾರ ಲಕ್ಷ್ಮಣ ಸುಳ್ಳು ಆರೋಪ ಮಾಡಿದ್ದಾರೆ. ಮತ್ತು ನನ್ನ ಮಗಳನ್ನು ವಿನಾಃ ಕಾರಣ ಇದರಲ್ಲಿ ಎಳೆದು ತಂದಿದ್ದಾರೆ. ನಾನು ಇದನ್ನು ಸಹಿಸುವುದಿಲ್ಲಾ. ಇವರ ವಿರುದ್ದ ಮಾನನಷ್ಟ ಮೊಕದೊಮ್ಮೆ ಹಾಕುತ್ತೇನೆಂದು ರೇಣುಕಾಚಾರ್ಯ ಖಡಕ್​​​ ಎಚ್ಚರಿಕೆ ಕೊಟ್ಟಿದ್ದಾರೆ.

ಇನ್ನು ಸುಮ್ಮನೆ ಕಾಂಗ್ರೆಸ್​​ನವರು ಎಲ್ಲರ ಮೇಲೂ ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ. ಕಾಂಗ್ರೇಸ್ ಪಕ್ಷವು ರಾಜ್ಯದಲ್ಲಿ ಮುಳುಗಿದ ಹಡಗುಗಾಗಿದೆ. ಮತ್ತು ಸಿದ್ದರಾಮಯ್ಯನವರೇ ವಿನಾಃ ಕಾರಣ ಗೊಂದಲ ಸೃಷ್ಟಿ ಮಾಡಬೇಡಿ. ನಾನೇ ನಕಲಿ ಪ್ರಮಾಣ ಪತ್ರ ಪಡೆದಿದ್ದರೇ ತನಿಖೆ ಮಾಡಲಿ. ನಾವು ಯಾವುದೇ ಕಾರಣಕ್ಕೂ ಬೇಡ ಎನ್ನುವುದಿಲ್ಲ. ಮಾಜಿ ಶಾಸಕರು ಜಾತ್ಯಾತೀತರಲ್ಲಾ. ಇನ್ನು ನನ್ನ ವಿರುದ್ದ ಪ್ರತಿಭಟನೆ ಮಾಡಲಿ ನಾನು ಬೇಡ ಎನ್ನುವುದಿಲ್ಲಾ. ನಾನು ಯಾವುದೇ ಪ್ರಮಾಣ ಪತ್ರ ಪಡೆದಿಲ್ಲಾ. ಹಾಗೂ ಇದರ ಸಲುವಾಗಿ ಮೂವರಿಗೂ ಸೋಮವಾರ ಪತ್ರ ಬರೆಯುತ್ತೇನೆಂದು ಎಂ.ಪಿ.ರೇಣುಕಾಚಾರ್ಯ ಗುಡುಗಿದರು.

RELATED ARTICLES
- Advertisment -
Google search engine

Most Popular

Recent Comments