ಕಾಂಗ್ರೆಸ್​ನವರಿಗೆ ವಿದೇಶಾಂಗ ನೀತಿಯೇ ಗೊತ್ತಿಲ್ಲ : ಪ್ರತಾಪ್ ಸಿಂಹ

ಮೈಸೂರು: ನೆಹರು ಕಾಂಗ್ರೆಸ್ ನವರು ನಮಗೆ ವಿದೇಶಾಂಗ ನೀತಿ ಬಗ್ಗೆ ಪಾಠ ಹೇಳುತ್ತಿದ್ದಾರೆ,ಅವರ ಆಡಳಿತದ ವಿದೇಶಾಂಗ ನೀತಿ ಹೇಗಿತ್ತು,ದೇಶಕ್ಕೆ ಆದ ನಷ್ಟ ಎಷ್ಟು ಇತಿಹಾಸದಲ್ಲಿ ದಾಖಲಾಗಿದೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್​ನವರಿಗೆ ವಿದೇಶಾಂಗ ನೀತಿಯೇ ಗೊತ್ತಿಲ್ಲ. ಚೀನಾ ಟಿಬೆಟ್ ಕಬಳಿಸಿದ್ದಾಗ ಸುಮ್ಮೆ ಇದ್ದ ಕಾಂಗ್ರೆಸ್ ಈಗ ವಿದೇಶಾಂಗ ನೀತಿಯ ನಮಗೆ ಪಾಠ ಮಾಡುತ್ತಿದೆ. ತನ್ನ ಭದ್ರತೆ, ಸುರಕ್ಷತೆ ದೃಷ್ಟಿಕೋನದಲ್ಲಿ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದೆ. ರಷ್ಯಾದ ಮೇಲೆ ಭಾರತ ಅತಿ ಹೆಚ್ಚು ಅವಲಂಬಿತವಾಗಿದೆ. ಈ ಅವಲಂಬನೆಗೆ ಸೃಷ್ಟಿಸಿದ್ದೇ ಕಾಂಗ್ರೆಸ್. ರಷ್ಯಾವನ್ನು ಹೆದರಿ ಹಾಕಿಕೊಂಡರೆ ಮುಂದೆ ನಮಗೆ ಯುದ್ಧದಂತಾ ಸಂದರ್ಭ ಸೃಷ್ಟಿಯಾದರೆ ನಮ್ಮ ನೆರವಿಗೆ ರಷ್ಯಾ ಬರುತ್ತಾ.? ಹೀಗಾಗಿ ಪ್ರಧಾನಿಗಳು ಈಗ ತಟಸ್ಥ ನಿಲುವಿಗೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

RELATED ARTICLES

Related Articles

TRENDING ARTICLES