Tuesday, August 26, 2025
Google search engine
HomeUncategorizedಈಶ್ವರಪ್ಪ ಮೇಲೆ ಯಾಕೆ ಕೇಸ್ ಹಾಕಿಲ್ಲ? : ಡಿಕೆಶಿ

ಈಶ್ವರಪ್ಪ ಮೇಲೆ ಯಾಕೆ ಕೇಸ್ ಹಾಕಿಲ್ಲ? : ಡಿಕೆಶಿ

ಬೆಂಗಳೂರು ; ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಕೇಸ್‌ನಲ್ಲಿ ಹಳೇ ವೈಷಮ್ಯ ಇರುವುದು ಗೊತ್ತಾಗಿದೆ. ಈ ವಿಚಾರ ಗೊತ್ತಾದಾಗ ಪೊಲೀಸರು ಎಚ್ಚರಿಕೆ ವಹಿಸಬೇಕಾಗಿತ್ತು ಹಾಗು ಸಚಿವ ಈಶ್ವರಪ್ಪ ಪ್ರತಿಯೊಬ್ಬ ನಾಗರೀಕರನ್ನು ಸಾಯಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ.

ಸೆಕ್ಷನ್ 144 ಜಾರಿ ಮಾಡಿದ ಮೇಲೆ ಒಂದು ನಿಯಮವಿರುತ್ತದೆ. ಆದರೂ ಸಚಿವರು ಮೃತದೇಹದ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಸಚಿವ ಈಶ್ವರಪ್ಪ ಮೇಲೆ ಏಕೆ ಕೇಸ್ ಹಾಕಿಲ್ಲ? ಮೆರವಣಿಗೆ ವೇಳೆ ಅಂಗಡಿಗಳ ಮೇಲೆ ಕಲ್ಲು ಹೊಡೆಸಿದ್ದಾರೆ. ಇದಕ್ಕೆ ಏಕೆ ಪ್ರಕರಣ ದಾಖಲಿಸಿಲ್ಲವೆಂದು ಡಿಜಿ ಹೇಳಬೇಕು. ಇದಕ್ಕೆ ಖಾಕಿ ಬಟ್ಟೆಯನ್ನು ಹಾಕಿಕೊಂಡವರು ಉತ್ತರ ನೀಡಬೇಕು. ಇಲ್ಲವೇ ಖಾಕಿ ತೆಗೆದುಬಿಟ್ಟು ನೀವು ಕೂಡ ಕೇಸರಿ ಬಟ್ಟೆ ಹಾಕಿಕೊಳ್ಳಿ ಎಂದು ಕಿಡಿಕಾರಿದ್ದಾರೆ.

ಕಳೆದ 5 ದಿನ ನಮ್ಮೆಲ್ಲ ಶಾಸಕರು ಅಹೋರಾತ್ತಿ ಧರಣಿ ಮಾಡ್ತಿದ್ದೇವೆ, 24 ಪರಿಷತ್ ಸದಸ್ಯರು,52 ಜನ ಶಾಸಕರು ಸದನದಲ್ಲಿ ಮಲಗಿದ್ದೇವೆ ಧರಣಿ ನಡೆಸಿದ್ದೇವೆ ಇಂದು ಕೂಡ ನಡೆಸುತ್ತೇವೆ. ಅಧಿವೇಶನ ಮೊಟಕು ಮಾಡಿದ್ರೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡ್ತೀವಿ. ಇಂತ ರಾಷ್ಟ್ರದ್ರೋಹಿಯನ್ನು ಸಚಿವರನ್ನಾಗಿ ಇಟ್ಟುಕೊಂಡಿರುವುದರಿಂದ ಯುವಕನ ಹತ್ಯೆಯಾಗಿದೆ

ಸರ್ಕಾರ 144 ಸೆಕ್ಷನ್ ಹಾಕಿದೆ ಆದರೂ ಮಂತ್ರಿ ಮೆರವಣಿಗೆ ಮಾಡಿ ಆಸ್ತಿ ಪಾಸ್ತಿ ಹಾನಿ ಮಾಡಿದ್ದಾರೆ. ನಾಲಿಗೆಗೂ ಮೆದುಳಿಗೂ ಸಂಬಂಧ ಇಲ್ಲ ಅಂತ ಸಿದ್ದರಾಮಯ್ಯನವರು ಹೇಳ್ತಾನೆ ಇದ್ದಾರೆ. ನನ್ನಿಂದ ಪ್ರಚೋದನೆಯಾಗಿದ್ದರೆ ಅಂತ ಹೇಳಿದ್ರು ಹಾಗಿದ್ರೆ ನನ್ನನ್ನು ಬಂಧಿಸಲಿ, ಹೊರಗಿನವರ ಸಂಚಿದೆ,ವಿದೇಶದಿಂದ ಬಂದಿದ್ದಾರೆ ಅಂತ ಈಶ್ವರಪ್ಪ ದೂರಿದ್ದಾರೆ.

NIA ತನಿಖೆಯಾಗಬೇಕೆಂದು ಹೇಳಿದ್ದಾರೆ ಪೋಲಿಸರ ಮೇಲೆ ಸಚಿವರಿಗೆ ನಂಬಿಕೆ ಇಲ್ಲ. ಗೃಹ ಸಚಿವ,ಜಿಲ್ಲಾ ಉಸ್ತುವಾರಿ ಸಚಿವರು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ ಶಿವಮೊಗ್ಗ ಸೇವೆ ಮಾಡಿದ್ದಾರೆ ಎಲ್ಲಾ ಒಪ್ಪುತ್ತೇನೆ ಆದರೆ ಈ ರೀತಿ ಆದ್ರೆ ಯಾರು ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಮಾಡ್ತಾರೆ ದಕ್ಷಿಣ ಕನ್ನಡ ಉಡುಪಿ ಎಷ್ಟು ಅಫೆಕ್ಟ್ ಆಗಿದೆ ಅನ್ನೊದು ಈಗಾಗಲೆ ಗೊತ್ತಿದೆ ಈಶ್ವರಪ್ಪ ಜಿಲ್ಲೆಯ ನಾಗರಿಕರನ್ನು ಬದುಕಿದ್ದಂಗೆ ಸಾಯಿಸುತ್ತಿದ್ದಾರೆ. ಹಾಗಾಗಿ ತನಿಖೆಯಾಗಬೇಕು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಡಿ ಕೆ ಶಿವಕುಮಾರ್​ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular

Recent Comments