Sunday, August 24, 2025
Google search engine
HomeUncategorizedರಾಷ್ಟ್ರಧ್ವಜ ನನ್ನ ತಾಯಿ ಸಮಾನ : ಕೆಎಸ್ ಈಶ್ವರಪ್ಪ

ರಾಷ್ಟ್ರಧ್ವಜ ನನ್ನ ತಾಯಿ ಸಮಾನ : ಕೆಎಸ್ ಈಶ್ವರಪ್ಪ

ಶಿವಮೊಗ್ಗ : ರಾಷ್ಟ್ರಧ್ವಜದ ವಿಚಾರವಾಗಿ ಈಶ್ವರಪ್ಪ ಮೇಲಿರುವ ಆರೋಪದ ವಿಚಾರವಾಗಿ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ದೇಶದ ಹಿತದೃಷ್ಟಿಯಿಂದ ನಾನು ಆ ಹೇಳಿಕೆ ನೀಡಿದ್ದೆ, ರಾಷ್ಟ್ರಧ್ವಜ ನನ್ನ ತಾಯಿ ಸಮಾನ, ಇಂತಹ ಆರೋಪಗಳಿಗೆ ನಾನು ಯಾವುದೇ ಕಾರಣಕ್ಕೂ ಜಗ್ಗಲ್ಲ ಎಂದು ತಿಳಿಸಿದರು. ವಿಧಾನಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕಿದೆ. ಭಗವಾಧ್ವಜದ ವಿವಾದವನ್ನು ಇಲ್ಲಿಗೆ ಬಿಡಿ ಎಂದು ನಾನು ಹೇಳಲ್ಲ. ಎರಡು ಪಕ್ಷದವರು ಜನರ ಮಧ್ಯೆ ಹೋಗೋಣ, ಆಗ ಅವರೇ ರಾಷ್ಟ್ರಧ್ವಜದ ಬಗ್ಗೆ ತೀರ್ಮಾನ ಮಾಡಲಿದೆ. ವಿಧಾನಸಭೆ ಕಲಾಪದಲ್ಲಿ ಈ ವಿಷಯವನ್ನು ಕೈ ಬಿಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಈಶ್ವರಪ್ಪ ಹೇಳಿಕೆ ನೀಡಿದರು.

ನಾನು ದೇಶದ ಹಿತದೃಷ್ಟಿಯಿಂದ ಏನು ಹೇಳಬೇಕಿತ್ತೋ ಅದನ್ನು ತುಂಬಾ ಸ್ಪಷ್ಟವಾಗಿ ಹೇಳಿದ್ದೇನೆ.
ರಾಷ್ಟ್ರಧ್ವಜ ಅಂದ್ರೆ ನನಗೆ ತಾಯಿ ಸಮಾನ. ಅದರ ಬಗ್ಗೆ ಯಾರೇ ಟೀಕೆ ಮಾಡಿದರೂ, ಅಪಮಾನ ಮಾಡಿದರೆ ಅವನು ರಾಷ್ಟ್ರ ದ್ರೋಹಿ ಆಗ್ತಾನೆ ಇದನ್ನೆಲ್ಲಾ ಈಗಾಗಲೇ ನಾನು ಸ್ಪಷ್ಟಪಡಿಸಿದ್ದೇನೆ. ನಾನೊಂದು ಹೇಳೋದು, ಬಿ.ಕೆ. ಹರಿಪ್ರಸಾದ್ ಒಂದು ಹೇಳೋದು, ಅದಕ್ಕೆ ಡಿಕೆಶಿ ಒಂದು ಹೇಳೋದು. ನಮ್ಮ ನಾಯಕರುಗಳು ಒಂದು ಹೇಳೋದು ಇದನ್ನೇ ಮಾಡಿಕೊಂಡು ಹೋಗೋಣ.

ನನ್ನ ಕೆಲಸ ಮುಗಿತು. ಇನ್ನು ಇದರ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ನಾನು ಕಾಂಗ್ರೆಸ್​​ನವರ ಇಂತಹ ಹೋರಾಟಗಳಿಗೆ ಹಿಗ್ಗಲ್ಲ, ಬಗ್ಗಲ್ಲ, ಜಗ್ಗಲ್ಲ.ಈ ವಿಷಯವನ್ನು ಇಲ್ಲಿಗೆ ಬಿಟ್ಟು ಬಿಡಿ. ಮತ್ತೆ ಮತ್ತೆ ನನಗೆ ಏಕೆ ಕೇಳ್ತೀರಾ.ಅವನು ವಿಪಕ್ಷದ ನಾಯಕ ಆಗಿದ್ದಾನೆ. ಅವನ ಕೆಲಸ ಅವನು ಮಾಡಬೇಕು ಅಂತಾ ಹೊರಟ್ಟಿದ್ದಾನೆ.
ಅವನ ಕೆಲಸ ಅವನು ಮಾಡಿಕೊಂಡು ಹೋಗಲಿ‌ ನಮ್ಮ ಅಭ್ಯಂತರ ಇಲ್ಲ.ನಾವು ವಿಪಕ್ಷದಲ್ಲಿದ್ದಾಗ ನಮ್ಮ ರೈತರ ಪರವಾಗಿ, ಸಾಮಾನ್ಯ ಜನರ ಪರವಾಗಿ ಹಗಲು ರಾತ್ರಿ ನಾವು ಸಾಕಷ್ಟು ಧರಣಿ ಮಾಡಿದ್ದೇವೆ. ಆದರೆ, ಅವರು ಈ ವಿಷಯ ಇಟ್ಟುಕೊಂಡು ಧರಣಿ ಮಾಡ್ತಿದ್ದಾರೆ. ಸಂತೋಷ ಅವರು ಮಾಡಿಕೊಂಡು ಹೋಗಲಿ. ಕಾಂಗ್ರೆಸ್ ನವರ ಜೊತೆ ಸಿಎಂ, ಸ್ವೀಕರ್, ಸಭಾಪತಿ ಅವರು ಚರ್ಚೆ ನಡೆಸಿದ್ದಾರೆ. ಇವರು ಸರ್ಕಾರ ನಡೆಸಿರುವವರು. ಹಠ ಮಾಡಿಕೊಂಡು ಮುಂದುವರಿದರೆ ನಾನೇನು ಮಾಡಲು ಬರಲ್ಲ. ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ ಎಂದು ಹೇಳಿಕೆ ನೀಡಿದರು.

RELATED ARTICLES
- Advertisment -
Google search engine

Most Popular

Recent Comments