Wednesday, August 27, 2025
HomeUncategorizedಜನರಿಗೆಲ್ಲಾ ನಿಂಬೆ ಹಣ್ಣು ಕೊಟ್ಟ ಹೆಚ್​​ ಡಿ ರೇವಣ್ಣ..!

ಜನರಿಗೆಲ್ಲಾ ನಿಂಬೆ ಹಣ್ಣು ಕೊಟ್ಟ ಹೆಚ್​​ ಡಿ ರೇವಣ್ಣ..!

ಹಾಸನ : ಹೆಚ್​​ ಡಿ ರೇವಣ್ಣ ಮತ್ತು ನಿಂಬೆ ಹಣ್ಣು ಜೋಡಿ ನಿಮಗೆಲ್ಲಾ ಗೊತ್ತೇ ಇದೆ. ಹೆಚ್ಡಿ ರೇವಣ್ಣ ತಮ್ಮ ಜೀವನದಲ್ಲಿ ನಿಂಬೆಹಣ್ಣಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದಾರೆ. ಶುಭ ಸಂಭ್ರಮದ ಸಮಯ ಅಂತಲ್ಲ, ಕಷ್ಟದ ಸಮಯ ಅಂತಲ್ಲ – ಎಲ್ಲಾ ಸಮಯದಲ್ಲೂ ಅವರು ನಿಂಬೆ ಹಣ್ಣಿನ ಮೊರೆ ಹೋಗ್ತಾರೆ. ಸದ್ಯ ಈಗ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ರೇವಣ್ಣ ನಿಂಬೆಹಣ್ಣು ವಿತರಿಸಿದ್ದಾರೆ.

ವೇದಿಕೆ ಮೇಲೆ ಬುಟ್ಟಿಯಲ್ಲಿದ್ದ ನಿಂಬೆಹಣ್ಣುಗಳನ್ನ ಅಭಿಮಾನಿಗಳಿಗೆ ನೀಡಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ತಿರುಮಲ ದೇವಾಲಯದ ಉದ್ಘಾಟನಾ ಕಾರ್ಯಕ್ರಮ ನಡೀತು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಹಾಗೂ ಶಿವಲಿಂಗೇಗೌಡ ಭಾಗಿಯಾಗಿದ್ದರು. ಜೊತೆಗೆ ವೇದಿಕೆ ಮೇಲೆ ಕುಳಿತಿದ್ದರು.

ಈ ವೇಳೆ ಶಾಸಕ ಶಿವಲಿಂಗೇಗೌಡ ವೇದಿಕೆ ಮೇಲಿದ್ದ ನಿಂಬೆಹಣ್ಣು ನೋಡುತ್ತಲೆ ಕೈಗೆತ್ತಿಕೊಂಡು ಎಲ್ಲರಿಗೂ ಕೊಡುವಂತೆ ತಮಾಷೆ ಮಾಡಿದ್ರು. ಆಗ ರೇವಣ್ಣ ತಾವೇ ನಿಂಬೆಹಣ್ಣು ಎತ್ತಿಕೊಂಡು ತಮ್ಮ ಕಾರ್ಯಕರ್ತರ ಕಡೆಗೆ ಉರುಳಿಸಿದ್ರು. ಇದನ್ನು ನೋಡಿ ನಿಂಬೆಹಣ್ಣುಗಳನ್ನು ಜನರಿಗೆ ಕೊಡುವಂತೆ ಶಾಸಕ ಶಿವಲಿಂಗೇಗೌಡ ಮನವಿ ಮಾಡಿದ್ದಾರೆ. ಬಳಿಕ ಶಾಸಕರ ಮಾತಿನಂತೆ ರೇವಣ್ಣ ಒಂದೊಂದೇ ನಿಂಬೆಹಣ್ಣನ್ನು ತಮ್ಮ ಬೆಂಬಲಿಗರಿಗೆ ನೀಡಿದ್ರು. ರೇವಣ್ಣ ನಿಂಬೆಹಣ್ಣು ನೀಡುತ್ತಿರುವುದನ್ನು ನೋಡಿ ಶಾಸಕ ಶಿವಲಿಂಗೇಗೌಡ ನಗೆಬೀರಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments