Thursday, August 28, 2025
HomeUncategorizedಇಂದು ರಾಷ್ಟ್ರೀಯ ಯುವ ದಿನ

ಇಂದು ರಾಷ್ಟ್ರೀಯ ಯುವ ದಿನ

ಸ್ವಾಮಿ ವಿವೇಕಾನಂದ ಜನ್ಮದಿನದ ಹಿನ್ನೆಲೆ ಅವರ ಸಾಧನೆ ಮತ್ತು ರಾಷ್ಟ್ರ ನಿರ್ಮಾಣದ ಹಾದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಸ್ವಾಮಿ ವಿವೇಕಾನಂದರು ತಮ್ಮ ಇಡೀ ಜೀವನವನ್ನೇ ರಾಷ್ಟ್ರೀಯ ಪುನರುತ್ಥಾನಕ್ಕಾಗಿ ಮುಡಿಪಾಗಿಟ್ಟಿದ್ದರು.

ಅಲ್ಲದೇ ರಾಷ್ಟ್ರ ನಿರ್ಮಾಣಕ್ಕಾಗಿ ಅನೇಕ ಯುವಕರನ್ನು ಪ್ರೇರೇಪಿಸಿದ್ದರು ಎಂದು ಪ್ರಧಾನಿ ಮೋದಿ ನೆನೆದಿದ್ದಾರೆ. ಸ್ವಾಮಿ ವಿವೇಕಾನಂದರು ದೇಶಕ್ಕಾಗಿ ಕಂಡ ಕನಸುಗಳನ್ನು ನನಸು ಮಾಡಲು ರಾಷ್ಟ್ರವು ಒಟ್ಟಾಗಿ ಕೆಲಸ ಮಾಡಬೇಕೆಂದು ಕೋರಿದ್ದಾರೆ. ಇನ್ನು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ದೇಶಾದ್ಯಂತ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.

ಇಂದು ಯುವಕರು ವಿವೇಕಾನಂದರು ತೋರಿಸಿದ ಮಾರ್ಗಗಳನ್ನು ಅನುಸರಿಸುವುದು ಬಹಳ ಮುಖ್ಯ, ಏಕೆಂದರೆ ಇಂದಿನ ಯುವಕರು ದೇಶದ ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತಾರೆ. ಆದ್ದರಿಂದ ಅವರ ದೇಹ ಮತ್ತು ಮನಸ್ಸು ಎರಡರಲ್ಲೂ ದೃಢವಾಗಿ ಮತ್ತು ಪ್ರಬುದ್ಧರಾಗಬೇಕು. ಆದ್ದರಿಂದ ಈ ಬಾರಿ ‘ರಾಷ್ಟ್ರೀಯ ಯುವ ದಿನದಂದು’ ಈ ಪ್ರಭಾವಶಾಲಿ ಸಂದೇಶ ಕಳುಹಿಸಿ ಮತ್ತು ಜನರ ಆಲೋಚನೆಯನ್ನು ಬದಲಿಸಿ.

RELATED ARTICLES
- Advertisment -
Google search engine

Most Popular

Recent Comments