Tuesday, September 2, 2025
HomeUncategorizedರೌಡಿಶೀಟರ್ ಮೇಲೆ ಫೈರಿಂಗ್

ರೌಡಿಶೀಟರ್ ಮೇಲೆ ಫೈರಿಂಗ್

ಬೆಂಗಳೂರು: ಬೆಂಗಳೂರಿನಲ್ಲಿಂದು ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಮೇಲೆ ಫೈರಿಂಗ್ ನಡೆದಿದೆ. ಗಿರಿನಗರ ಪೊಲೀಸ್ ಠಾಣೆ ಪಿಎಸ್ಐ ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ರೌಡಿಶೀಟರ್ ನರಸಿಂಹ ರೆಡ್ಡಿ ಎಂಬಾತನನ್ನು ಬಂಧಿಸಲು ಹೋದಾಗ ಆರೋಪಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಓಡಿ ಹೋಗಲು ಪ್ರಯತ್ನಿಸಿದ್ದಾನೆ.

ರೌಡಿಶೀಟರ್ ಹಲ್ಲೆ ಮಾಡುತ್ತಿದ್ದಂತೆ ಗಿರಿನಗರ ಪೊಲೀಸ್ ಠಾಣೆ ಪಿಎಸ್​​ಐ ಸುನೀಲ್ ರೆಡ್ಡಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಕೊಲೆ, ದರೋಡೆ, ಕಿಡ್ನ್ಯಾಪ್, ಮನೆಗಳ್ಳತನ ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ನರಸಿಂಹ ರೆಡ್ಡಿ ಆರೋಪಿಯಾಗಿದ್ದ. ಇತ್ತೀಚೆಗೆ ತಲೆಮರೆಸಿಕೊಂಡಿದ್ದ ರೌಡಿಶೀಟರ್​ಗಾಗಿ ಸರ್ಚಿಂಗ್ ನಡೆದಿತ್ತು. ಆರೋಪಿ ಹೊಸಕೆರೆಹಳ್ಳಿ ಕೆರೆ ಕೋಡಿ ಬಳಿ‌ ಇರುವ ಬಗ್ಗೆ ಮಾಹಿತಿ ಪಡೆದಿದ್ದ ಗಿರಿನಗರ ಪೊಲೀಸರು ಬಂಧಿಸಲು ತೆರಳಿದ್ದರು.

RELATED ARTICLES
- Advertisment -
Google search engine

Most Popular

Recent Comments