Friday, August 29, 2025
HomeUncategorizedಫಾತಿಮಾ ಶೇಖ್​​ಗೆ ಗೂಗಲ್ ಗೌರವ

ಫಾತಿಮಾ ಶೇಖ್​​ಗೆ ಗೂಗಲ್ ಗೌರವ

ದೇಶ : ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಎಂದು ಪರಿಗಣಿಸಲ್ಪಟ್ಟಿರುವ ಶಿಕ್ಷಣ ತಜ್ಞೆ ಮತ್ತು ಸ್ತ್ರೀವಾದಿ ಐಕಾನ್ ಫಾತಿಮಾ ಶೇಖ್​​ಗೆ ಗೂಗಲ್ ಡೂಡಲ್‌ ಮೂಲಕ ಗೌರವ ಸಲ್ಲಿಸಲಾಗಿದೆ.

ಸಮಾಜ ಸುಧಾರಕರಾದ ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸಹ ಪ್ರವರ್ತಕರಾದ ಫಾತಿಮಾ ಶೇಖ್, 1848 ರಲ್ಲಿ ಲೆಯೊಂದನ್ನು ಸ್ಥಾಪಿಸಿದ್ದು, ಇದು ಭಾರತದಲ್ಲಿ ಬಾಲಕಿಯರಿಗಾಗಿ ಆರಂಭಿಸಿದ ಮೊದಲ ಶಾಲೆಯಾಗಿದೆ. ಫಾತಿಮಾ ಶೇಖ್ ಅವರು 1831 ಜನವರಿ 9 ರಂದು ಪುಣೆಯಲ್ಲಿ ಜನಿಸಿದರು.

ಕೆಳಜಾತಿಗಳ ಜನರಿಗೆ ಶಿಕ್ಷಣ ನೀಡಲು ಪ್ರಯತ್ನಿಸಿದ್ದಕ್ಕಾಗಿ ಫುಲೆ ದಂಪತಿಗಳನ್ನು ಮನೆಯಿಂದ ಹೊರಹಾಕಿದ್ದಾಗ ಫಾತಿಮಾ ಕುಟುಂಬ ಫುಲೆ ದಂಪತಿಗೆ ಆಶ್ರಯ ನೀಡಿತ್ತು. ಶೇಖ್‌ ಮನೆಯ ಛಾವಣಿಯ ಅಡಿಯಲ್ಲಿಯೇ ಫುಲೆ ದಂಪತಿ ಶಾಲೆ ಆರಂಭಿಸಿದ್ದರು. ಇಲ್ಲಿ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ವರ್ಗ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ಶಿಕ್ಷಣವನ್ನು ನಿರಾಕರಿಸಿದ ದಲಿತ ಮತ್ತು ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣ ಕಲಿಸಿದರು.

RELATED ARTICLES
- Advertisment -
Google search engine

Most Popular

Recent Comments