Friday, August 29, 2025
HomeUncategorizedರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ

ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಿನ್ನಲೆಯಲ್ಲಿ ಲಾಕ್​ಡೌನ್ ಸೇರಿದಂತೆ ಕಠಿಣ ಕ್ರಮಗಳ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ,ಆರೋಗ್ಯ ಸಚಿವ ಕೆ.ಸುಧಾಕರ್ ನೇತೃತ್ವದಲ್ಲಿ ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿದರು. ಸಭೆ ಬಳಿಕ ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ , ಓಮಿಕ್ರಾನ್ ಕೋವಿಡ್​ಗಿಂತ  5ಪಟ್ಟು ಹೆಚ್ಚಾಗುತ್ತದೆ. ಎಂದು ತಜ್ಞರು ಹೇಳಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಕಠಿಣ ನಿಯಮಗಳನ್ನು ತರಬೇಕಾದ ಪರಿಸ್ಧಿತಿ ನಿರ್ಮಾಣವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಶೇ 85 ರಷ್ಟು ಪ್ರಕರಣಗಳಿವೆ.ನಮ್ಮ ದೇಶದಲ್ಲಿ ಪಾಸಿಟಿವಿಟಿ ರೇಟ್ ಶೇ 3ಕ್ಕಿಂತ ಹೆಚ್ಚಾಗುತ್ತದೆ ಎಂದರು.

ನೈಟ್ ಕರ್ಫ್ಯೂ ರಾತ್ರಿ 10- ಬೆಳಗ್ಗೆ 5ರ ವರೆಗೆ ,ಎಲ್ಲಾ ಕಛೇರಿಗಳು 5 ದಿನಗಳ ಕಾಲ ಕಾರ್ಯನಿರ್ವಾಹಣೆ , ಸರ್ಕಾರಿ ಕಛೇರಿಗಳಲ್ಲಿ ಶೇ 50 ಸಿಬ್ಬಂದಿಗಳಿಗೆ ಮಾತ್ರ ಅವಕಾಶ , ವೀಕೆಂಡ್ ಕರ್ಫ್ಯೂ ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ , ವೀಕೆಂಡ್ ಕರ್ಫ್ಯೂ ವೇಳೆ ಅಗತ್ಯಕ್ಕೆ ಅನುಸಾರ ಸಮೂಹ ಸಾರಿಗೆಗಳು ಕಾರ್ಯ ನಿರ್ವಹಿಸಲಿವೆ, ಬೆಂಗಳೂರಿನಲ್ಲಿ ನರ್ಸಿಂಗ್ , ವೈದಕೀಯ , ಪ್ಐರಾಮೆಡಿಕಲ್ 10,11,12ನೇ ತರಗತಿಗಳು ಮಾತ್ರ ನಡೆಯಲು ಅನುಮತಿ ಹಾಗೆನೇ ಉಳಿದ ತರಗತಿಗಳು ಜನವರಿ 6ರಿಂದಲೇ ಆನ್ಲೈನ್ ನಡೆಸಲು ಅನುಮತಿ ನೀಡಿದ್ದಾರೆ. ಪಬ್,ಕ್ಲಬ್ ಹೊಟೇಲ್​ಗಳು, ಚಿತ್ರಮಂದಿರ , ರಂಗಮಂದಿರ , ಆಡಿಟೋರಿರಂಗಳಿಗೆ ಶೇ 50 ಮಾತ್ರ ಅವಕಾಶ ಹಾಗೆನೇ ಡಬಲ್ ಡೋಸ್ ಪಡೆದುಕೊಂಡವರಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ. ಮದುವೆಗಳಿಗೆ ಹೊರಾಂಗಣ 200 ಜನ, ಒಳಾಂಗಣ 100 ಜನರಿಗೆ ಮಾತ್ರ ಅವಕಾಶ, ಧಾರ್ಮಿಕ ಕೇಂದ್ರಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ, ಸ್ವಿಮ್ಮಿಂಗ್ ಫೂಲ್, ಜಿಮ್​ಗಳಲ್ಲಿ 50% ಗ್ರಾಹಕರಿಗೆ ಅನುಮತಿ ನೀಡಲಾಗುತ್ತದೆ. ರ‍್ಯಾಲಿ ಧರಣಿಗಳಿಗೆ ಅವಕಾಶ ಇಲ್ಲ. ಸಭೆ ಸಮಾರಂಭಗಳಿಗೆ 50 ಜನರಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ.

RELATED ARTICLES
- Advertisment -
Google search engine

Most Popular

Recent Comments