Tuesday, August 26, 2025
Google search engine
HomeUncategorizedಅಖಿಲೇಶ್​ಗೆ ಶ್ರೀಕೃಷ್ಣನ ಶಾಪ-ಯೋಗಿ ತಿರುಗೇಟು

ಅಖಿಲೇಶ್​ಗೆ ಶ್ರೀಕೃಷ್ಣನ ಶಾಪ-ಯೋಗಿ ತಿರುಗೇಟು

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ನೀವು ಅಧಿಕಾರಕ್ಕೆ ಬರುತ್ತೀರಿ ಎಂದು ಶ್ರೀಕೃಷ್ಣ ನನ್ನ ಕನಸಿನಲ್ಲಿ ಹೇಳಿದ್ದಾನೆ ಎಂದು ಅಖಿಲೇಶ್ ಯಾದವ್ ಹೇಳಿದ್ದಕ್ಕೆ, ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಲಿಘರ್​ನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ತಿರುಗೇಟು ನೀಡಿದ್ದಾರೆ.  ನಿನ್ನೆ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಶ್ರೀಕೃಷ್ಣ ದೇವರು ನನ್ನ ಕನಸಿನಲ್ಲಿ ಬಂದಿದ್ದರು. ನೀನು ಚುನಾವಣೆಯಲ್ಲಿ ಹೋರಾಡು, ನಿನ್ನ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾನೆ ಎಂದು ಹೇಳಿದ್ದರು.

ಅದಕ್ಕೆ ಇಂದು ತಿರುಗೇಟು ನೀಡಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೆಲವರ ಕನಸಿನಲ್ಲಿ ಶ್ರೀಕೃಷ್ಣ ಬರುತ್ತಾನೆ. ಆದರೆ ಅವನು ಈಗ ಅವರಿಗೆ ಶಾಪ ಕೊಡುತ್ತಾನೆ. ಏಕೆಂದರೆ ಆ ಜನ ತಾವು ಅಧಿಕಾರದಲ್ಲಿರುವಾಗ ಶ್ರೀಕೃಷ್ಣನ ಮಥುರಾಗಾಗಲಿ, ಬೃಂದಾವನಕ್ಕಾಗಲಿ ಏನೂ ಮಾಡಲಿಲ್ಲ. ಆದರೆ ನಾವು ಬಿಜೆಪಿಯವರು ಅಧಿಕಾರಕ್ಕೆ ಬಂದ ನಂತರ ಶ್ರೀಕೃಷ್ಣನ ಈ ಜಾಗಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಇನ್ನು ಶ್ರೀಕೃಷ್ಣನ ಶಾಪವೇ ಕನಸಿನಲ್ಲಿ ಬಂದವರಿಗೆ ಗತಿಯಾಗುತ್ತದೆ ಎಂದು ಹೆಸರನ್ನು ಉಲ್ಲೇಖಿಸದೆ ಲೇವಡಿ ಮಾಡಿದ್ದಾರೆ.

20 ಕೋಟಿ ಜನಸಂಖ್ಯೆಯ ರಾಜ್ಯವಾದ ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರ ಯಾವುದೇ ಸಮಸ್ಯೆಗಳಿಗೆ ಸಂಬಂದಿಸಿದಂತೆ ನಡೆಯುತ್ತಿಲ್ಲ. ಬದಲಾಗಿ ಅಲ್ಲಿ ಚುನಾವಣೆಯಲ್ಲಿ ಗೆಲ್ಲಲು ಶ್ರೀಕೃಷ್ಣನೊಬ್ಬನೇ ಸಾಕು ಎಂಬಂತೆ ಅಲ್ಲಿನ ನಾಯಕರು ವರ್ತಿಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments