Thursday, September 11, 2025
HomeUncategorizedಬಿಜೆಪಿ ಮೇಲೆ ಸಿದ್ದು ಆರೋಪಗಳ ಸುರಿಮಳೆ

ಬಿಜೆಪಿ ಮೇಲೆ ಸಿದ್ದು ಆರೋಪಗಳ ಸುರಿಮಳೆ

ಬೆಂಗಳೂರು: ಸಿದ್ದರಾಮಯ್ಯ ಅಂದ್ರೆ ಹಾಗೆನೆ. ಇದ್ದುದನ್ನ ಇದ್ದ ಹಾಗೆ ಹೇಳೋದಕ್ಕೆ ಒಂಚೂರು ತಲೆಕೆಡಿಸಿಕೊಳ್ಳೋದಿಲ್ಲ. ಈಗ ಸಿದ್ದರಾಮಯ್ಯ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮೇಲೆ ಆರೋಪಗಳ ಸುರಿಮಳೆಗೈದಿದ್ದಾರೆ.

ನಮ್ಮ ಸರ್ಕಾರ ಬಂದರೆ ಒಂದೇ ವಾರದಲ್ಲಿ ಮತಾಂತರ ನಿಷೇಧ ಕಾಯ್ದೆ ಕಿತ್ತೆಸೆಯುತ್ತೇವೆ ಎಂದಿರುವ ಸಿದ್ದರಾಮಯ್ಯ ಮೊದಲ ಅಧಿವೇಶನದಲ್ಲೇ ಕಾಯ್ದೆ ಹಿಂಪಡೆದು ಅದನ್ನು ತಿಪ್ಪೆಗೆ ಎಸೆಯುತ್ತೇವೆ ಎಂದಿದ್ದಾರೆ. ವಿಧೆಯಕದ ಡ್ರಾಫ್ಟ್​ಗೆ ನಾನು ಸಹಿ ಮಾಡಿದ್ದನ್ನೇ ಬಿಜೆಪಿ ಅಜೆಂಡಾ ಮಾಡಿಕೊಂಡಿದೆ. ಇದು ಹುಟ್ಟಿದ್ದು 2009ರಲ್ಲಿ ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ. ಜಯಚಂದ್ರ ಸಹಿ ಹಾಕಿ, ನಾನು ಕ್ಯಾಬಿನೆಟ್ ಮುಂದೆ ತನ್ನಿ ಅಂದಿದ್ದು ನಿಜ. ಆದರೆ ಬಳಿಕ ನಾನು ಆಗಿನ ಸಮಾಜಕಲ್ಯಾಣ ಸಚಿವ ಆಂಜನೇಯಗೆ ಹೇಳಿ ಅದನ್ನು ಸ್ಟಾಪ್ ಮಾಡುವಂತೆ ಹೇಳಿದ್ದೆ. ಆದರೆ ಆಂಜನೇಯ ಅದೆಲ್ಲ ಅಗತ್ಯವಿಲ್ಲ ಎಂದು ಫೈಲ್​ನಲ್ಲಿ ಬರೆದು ಕ್ಯಾಬಿನೆಟ್​ಗೆ ತಂದಿಲ್ಲ. ಅಲ್ಲಿಗೆ ಅದು ಸತ್ತುಹೋಗಿತ್ತು. ಬಿಜೆಪಿಯವರು ವಾಸ್ತವ ಹೇಳುತ್ತಿಲ್ಲ ಎಂದು ಸಿದ್ದರಾಮಯ್ಯ ಮತಾಂತರ ನಿಷೇಧ ಕಾಯ್ದೆಯ ಬಿಲ್ ತಮ್ಮ ಅವಧಿಯಲ್ಲಿ ಬಂದಿದ್ದೆ ಎಂಬುದರ ಬಗ್ಗೆ ಸಮಜಾಯಿಷಿ ಕೊಟ್ಟಿದ್ದಾರೆ.

ಇನ್ನು ಸಿದ್ದು ನೈಟ್ ಕರ್ಫ್ಯೂ  ಬಗ್ಗೆ ಮಾತನಾಡುತ್ತ ನೈಟ್ ಕರ್ಫ್ಯೂ ಜಾರಿ ಮಾಡಿದ್ದರಿಂದ ಕಾಂಗ್ರೆಸ್ ಪಾದಯಾತ್ರೆಗೆ ಯಾವುದೇ ಸಮಸ್ಯೆಯಾಗಲ್ಲ. ಮೇಕೆದಾಟು ಯೋಜನೆಗೆ ಆಗ್ರಹಿಸಿ ನಾವು ಮಾಡುವ ಪಾದಯಾತ್ರೆ ತಡೆಯಲು ಸಾಧ್ಯವಿಲ್ಲ. ಒಮೈಕ್ರಾನ್ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುಂಜಾಗೃತ ಕ್ರಮಗಳನ್ನ ಕೈಗೊಂಡೆ ನಾವು ಪಾದಯಾತ್ರೆ ನಡೆಸ್ತೇವೆ. ಕೊರೊನಾ ಇದ್ದಾಗಲೇ ಬಿಜೆಪಿಯವರು ಜನಾಶೀರ್ವಾದ ಯಾತ್ರೆ ಮಾಡಲಿಲ್ವಾ..? ನಿನ್ನೆ ಅಮಿತ್ ಶಾ ರ್ಯಾಲಿ ಮಾಡಿದ್ದಾರೆ.. ಅಲ್ಲಿ ಏಲ್ರೂ ಮಾಸ್ಕ್ ಹಾಕಿಕೊಂಡಿದ್ದರೆ? ಇವರು ರಾಜಕೀಯ ಕಾರ್ಯಕ್ರಮ ಮಾಡಬಹುದು, ನಾವು ಮಾಡಬಾರದಾ..? ಅವರಿಗೊಂದು ಕಾನೂನು, ವಿಪಕ್ಷಗಳಿಗೊಂದು ಕಾನೂನು ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಒಂದು ಹುಡುಗ ಹುಡುಗಿ ಮದುವೆ ಆಗೋದ್ ಮತಾಂತರನಾ?  ಲವ್ ಮಾಡಿ ಮದುವೆ ಆಗೋದ್ ನಮ್ಮ ಹಕ್ಕು.  ಇವರು ತಂದಿರೋ ಕಾನೂನು  ಸಂವಿಧಾನದ ಬಾಹಿರವಾದದ್ದು. ಇವರ ಉದ್ದೇಶ ವೋಟ್ ಪಡೆಯೋದಷ್ಟೆ.  ಭಾವನಾತ್ಮಾಕ ವಿಷಯಗಳನ್ನ ಇಟ್ಕೊಂಡು ದಾರಿ ತಪ್ಪಿಸುತ್ತಾರೆ.  ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡೋದೆ ಬಿಜೆಪಿ ಕೆಲಸ.  ನಿರುದ್ಯೋಗ, ನೆರೆ, ಪರಿಹಾರ, ಮಹಿಳೆಯರ ಸಮಸ್ಯೆ ಇವೆಲ್ಲಾ ಬಿಟ್ಟು ಡೈವರ್ಟ್ ಮಾಡ್ತಾಯಿದ್ದಾರೆ. ಈ ಕಾಯಿದೆ ಹಿಂದೆ ದುರುದ್ದೇಶ ಇದೆ ಎಂದು ಸಿದ್ದರಾಮಯ್ಯ ನೇರವಾಗಿ ಆರೋಪಿಸಿದರು.

RELATED ARTICLES
- Advertisment -
Google search engine

Most Popular

Recent Comments