Wednesday, September 3, 2025
HomeUncategorizedಮಹಿಳೆಯರ ಓಡಾಟಕ್ಕೆ ಸೇಫ್ ಅಲ್ವಂತೆ ದೆಹಲಿ ಸಿಟಿ !

ಮಹಿಳೆಯರ ಓಡಾಟಕ್ಕೆ ಸೇಫ್ ಅಲ್ವಂತೆ ದೆಹಲಿ ಸಿಟಿ !

ದೆಹಲಿ : ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿ ಒಂದಲ್ಲ ಒಂದು ವಿಚಾರದಿಂದ ಸುದ್ಧಿ ಮಾಡ್ತಾನೇ ಇದೆ. ಇಷ್ಟು ದಿನ ಕೊರೋನಾ ಹಾವಳಿ ದೆಹಲಿಯಲ್ಲಿ ಹೆಚ್ಚಾಗಿತ್ತು. ಕೊರೋನಾ ಕಡಿಮೆಯಾದ ನಂತರ ಏರ್​ ಪೊಲ್ಯೂಶನ್​ ಸಮಸ್ಯೆ ಶುರುವಾಗಿದೆ. ಈಗ ಇದರ ಜೊತೆಗೆ ದೆಹಲಿಗೆ ಕುಖ್ಯಾತಿ ತರುವ ಮತ್ತೊಂದು ಡೇಟಾ ಬಿಡುಗಡೆಯಾಗಿದ್ದು, ದೆಹಲಿಗೆ ಹೋಗೋದಕ್ಕೆ ಜನ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಏನ್ರಿ ಇದು ಹೊಸ ಸುದ್ಧಿ ಅಂತ ಅಚ್ಚರಿಯಾಗ್ತಾ ಇದ್ಯಾ?

​ರಾಷ್ಟ್ರ ರಾಜಧಾನಿ ದೆಹಲಿ ಇಷ್ಟು ದಿನಗಳ ಕಾಲ ಕೊರೋನಾ ಹಾವಳಿಯಿಂದ ತತ್ತರಿಸಿ ನಲುಗಿ ಹೋಗಿತ್ತು. ಇದಾದ ಬಳಿಕ ಪ್ರಾರಂಭವಾದ ಏರ್​​ ಪೊಲ್ಯೂಷನ್​ ಇಂದಿನವರೆಗೂ ಮುಂದುವರಿತಾನೇ ಇದ್ದು, ಜಾಗತಿಕವಾಗಿ ದೆಹಲಿ ಕುಖ್ಯಾತಿ ಪಡೀತಿದೆ. ಇದ್ರ ಮಧ್ಯೆನೇ ರಾಷ್ಟ್ರ ರಾಜಧಾನಿ ಮಹಿಳೆಯರಿಗೆ ಸೇಫ್​ ಅಲ್ಲ ಅನ್ನೋ ವರದಿ ಪ್ರಕಟವಾಗಿದೆ. ಈ ಅಂಕಿಅಂಶಗಳ ಪ್ರಕಾರ ಮಹಿಳೆಯರ ಕಿಡ್ನ್ಯಾಪ್​ ಕೇಸ್​​ ಹಾಗು ಅತ್ಯಾಚಾರದ ಪ್ರಕರಣಗಳು ಹೆಚ್ಚಾಗಿದ್ದು, ವಿಶ್ವದಲ್ಲೇ ಅತ್ಯಧಿಕ ಪ್ರಕರಣಗಳು ಅಂತಾ ಹೇಳಲಾಗ್ತಾ ಇದೆ. ಇನ್ನು ಈ ವಿಚಾರದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದೆಹಲಿ ಪೊಲೀಸರ ವಿರುದ್ಧ ಆಕ್ರೋಶ ಹೆಚ್ಚಾಗ್ತಾ ಇದೆ.

ಇದೀಗ ರಾಷ್ಟ್ರ ರಾಜಧಾನಿ ದೆಹಲಿ ಮಹಿಳೆಯರಿಗೆ ಅಕ್ಷರಶಃ ಆತಂಕಕಾರಿ ಸ್ಥಳವಾಗಿದ್ದು, ಈ ಬಗ್ಗೆ ಜನ ಸಾಮಾನ್ಯರು ಆತಂಕದಿಂದ ದಿನದೂಡುವಂತಾಗಿದೆ. ಈ ಪ್ರಕರಣಗಳ ಬಗ್ಗೆ ಗಂಭೀರತೆಯಿಂದ ತನಿಖೆ ನಡೆಸಬೇಕಾದ ಪೊಲೀಸ್​ ಇಲಾಖೆ ಕೂಡ ಬಾಯಿ ಮುಚ್ಚಿಕೊಂಡು ಕೂತಿದೆ. ಈ ವರದಿ ಬಹಿರಂಗವಾದ್ರೂ ಈ ಬಗ್ಗೆ ಯಾರೂ ಕೂಡ ಸರಿಯಾದ ಪ್ರತಿಕ್ರಿಯೆ ಕೊಡದೆ ಇರೋದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಇನ್ನು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ವಿಶ್ವದ ಇತರ ನಗರಗಳಿಗೆ ಹೋಲಿಸಿದ್ರೆ ಇಲ್ಲಿ ಹೆಚ್ಚಾಗಿವೆ. ಇಲ್ಲಿ ಗಮನಿಸಬೇಕಾಗಿರುವ ಅಂಶ ಅಂದ್ರೆ ಈ ಬಗ್ಗೆ ಸ್ವತಃ ದೆಹಲಿ ಪೊಲೀಸರೇ ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿಯೂ ದೆಹಲಿ ಗರಿಷ್ಠ ಮಟ್ಟದ ಮಹಿಳಾ ದೌರ್ಜನ್ಯ ಪ್ರಕರಣ ಎದುರಿಸ್ತಿದೆ. ಇದು ಹೊಸ ವರದಿಗೆ ಸರಿಸಮವಾಗಿಯೇ ಇದೆ.

ಇದೇ ವರ್ಷದ ಅಕ್ಟೋಬರ್ 31ರವರೆಗಿನ ದಾಖಲೆಯ ಪ್ರಕಾರ ಈ ವರ್ಷ 3,117 ಮಹಿಳೆಯರ ಕಿಡ್ನಾಪ್ ಕೇಸ್ ದಾಖಲಾಗಿರೋದು ಬೆಳಕಿಗೆ ಬಂದಿದೆ. ಅದರಲ್ಲಿ 1,725 ಅತ್ಯಾಚಾರ ಪ್ರಕರಣಗಳನ್ನ ದಾಖಲು ಮಾಡಲಾಗಿದೆ. ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ದೆಹಲಿಯಲ್ಲಿ ಈ ವರ್ಷ ಕೌಟುಂಬಿಕವಾಗಿ ಮಹಿಳೆಯರ ಮೇಲಿನ ಕ್ರೌರ್ಯ ಪ್ರಕರಣ ಸೇರಿದಂತೆ ಇನ್ನಿತರ ಕಲಹ ಪ್ರಕರಣಗಳು ಹೆಚ್ಚಾಗಿವೆ. 2020ರಲ್ಲಿ ಕೌಟುಂಬಿಕ ಕ್ರೌರ್ಯದ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 1,931 ಇದೆ. ಈ ವರ್ಷ ಅಕ್ಟೋಬರ್ 31ರವರೆಗಿನ ದಾಖಲೆಗಳ ಪ್ರಕಾರ ಕೌಟುಂಬಿಕ ಕೌರ್ಯದ ವಿರುದ್ಧ ದಾಖಲಾಗಿರುವ ಪ್ರಕರಣ ಸಂಖ್ಯೆ 3,742 ಆಗಿದೆ. ಅಂದ್ರೆ ಈ ವರ್ಷ ಒಟ್ಟಾರೆಯಾಗಿ 1811 ಪ್ರಕರಣಗಳು ಹೆಚ್ಚಾಗಿವೆ ಅನ್ನೋದು ಆತಂಕಕಾರಿ ವಿಚಾರವಾಗಿದೆ.

ಇನ್ನು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ, ಅತ್ಯಾಚಾರ, ಕಿಡ್ನಾಪ್ ಪ್ರಕರಣಗಳಲ್ಲಿ ದೆಹಲಿ ಮುಂಚೂಣಿಯಲ್ಲಿದ್ದು. 2019ಕ್ಕೆ ಹೋಲಿಕೆ ಮಾಡಿದ್ರೆ 2020ರಲ್ಲಿ ದೆಹಲಿಯಲ್ಲಿನ ಕ್ರೈಂ ರೇಟ್​ ಇಳಿದಿತ್ತು. ದೆಹಲಿಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಶೇಕಡಾ 24.65ರಷ್ಟು ಇಳಿಕೆ ಕಂಡಿತ್ತು. ಅಂದ್ರೆ 2020ರಲ್ಲಿ ದೆಹಲಿಯ ಮಹಿಳೆಯರ ವಿರುದ್ಧ ದಾಖಲಾದ ಪ್ರಕರಣ 10,093 ಇತ್ತು. ಆದ್ರೆ ಇದೇ ಪ್ರಕರಣ 2019ರಲ್ಲಿ 13,395.ರಷ್ಟಿತ್ತು. ಅಂದ್ರೆ 3,302 ಕಡಿಮೆ ಪ್ರಕರಣಗಳು 2020ರಲ್ಲಿ ದಾಖಲಾಗಿದ್ವು.. ಇನ್ನು ಈ ಪ್ರಕರಣಗಳು ಸದ್ಯದ ಮಟ್ಟಿಗೆ ಅಧಿಕ ಅಂತ ಹೇಳಲಾಗ್ತಾ ಇದ್ದು, ಉತ್ತರ ಪ್ರದೇಶದಲ್ಲಿ ಮಹಿಳಾ ದೌರ್ಜನ್ಯ ಅಧಿಕವಾಗುವ ಸಾಧ್ಯತೆ ಇದೆ ಅಂತ ಹೇಳಲಾಗ್ತಾ ಇದೆ.

ಒಟ್ಟಾರೆಯಾಗಿ ಹಲವು ಐತಿಹಾಸಿಕ ಕಾರಣಗಳಿಂದ ರಾಷ್ಟ್ರಕ್ಕೆ ಮಾದರಿಯಾಗಬೇಕಾದ ರಾಷ್ಟ್ರ ರಾಜಧಾನಿ ಇಂದು ಅಪರಾಧ ಪ್ರಕರಣಗಳ ತಾಣವಾಗಿರೋದು ನಿಜಕ್ಕೂ ದುರಂತದ ಸಂಗತಿ. ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಮುಂದಿನ ದಿನಗಳಲ್ಲಾದ್ರೂ ಎಚ್ಚೆತ್ತುಕೊಂಡು ಮಹಿಳೆಯರ ಆತಂಕ ಕಡಿಮೆ ಮಾಡಲಿ ಅನ್ನೋದೇ ಎಲ್ಲರ ಆಶಯ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments