Saturday, September 13, 2025
HomeUncategorizedಸಚಿವ ಶಾಸಕರುಗಳ ಗುಪ್ತ ಗುಪ್ತ ಸಭೆ

ಸಚಿವ ಶಾಸಕರುಗಳ ಗುಪ್ತ ಗುಪ್ತ ಸಭೆ

ಚಿಕ್ಕಮಗಳೂರು : ಸಂಪುಟ ವಿಸ್ತರಣೆ ಖಾತೆ ಹಂಚಿಕೆ ಅಸಮಾಧಾನದ ಬೇಗುದಿ ಮಧ್ಯೆ ಬಿಜೆಪಿಯೊಳಗೆ ಹೊಸ ಬಂಡಾಯ ಬೂದಿ ಮುಚ್ಚಿದಂತೆ ಇದೆ ಪಕ್ಷದೊಳಗೆ ಒಂದೆರಡಲ್ಲ, ಹಲವು ಬಣಗಳು ರೂಪುಗೊಂಡಂತೆ ತೋರುತ್ತಿವೆ. ಸಚಿವ ಸ್ಥಾನ ಸಿಗದವರದ್ದು ಒಂದೆಡೆಯಾದರೆ, ಸಚಿವ ಸ್ಥಾನ ಸಿಕ್ಕು ಖಾತೆ ಬಗ್ಗೆ ಬೇಸರ ಹೊಂದಿರುವರದ್ದು ಇನ್ನೊಂದೆಡೆ ಪ್ರಮುಖ ಗುಂಪುಗಳಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಲೆನೋವು ತಂದಿದೆ. ಕೆಲ ದಿನಗಳಲ್ಲಿ ಎಲ್ಲ ಅಸಮಾಧಾನ ಸ್ಥಿತಿ ಶಮನ ಆಗಬಹುದು ಎಂದು ಹೇಳಿದ್ದಾರಾದರೂ ಅಲ್ಲಲ್ಲಿ ನಡೆಯುತ್ತಿರುವ ಸಭೆಗಳು ಬೇರೇನನ್ನೋ ಸೂಚಿಸುತ್ತಿದೆ ಮೊನ್ನೆ ಖಾತೆ ಮರುಹಂಚಿಕೆ ದಿನ ಎಂಟಿಬಿ ನಾಗರಾಜ್ ಮುನಿರತ್ನ ಗೋಪಾಲಯ್ಯ ಅವರು ಸಚಿವ ಡಾ. ಕೆ ಸುಧಾಕರ್ ಮನೆಯಲ್ಲಿ ಸಭೆ ನಡೆಸಿದ್ದರು. ಇದೀಗ ಚಿಕ್ಕಮಗಳೂರಿನಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕೆಲ ಮುಖಂಡರ ಗೌಪ್ಯ ಸಭೆ ನಡೆಯುತ್ತಿದೆ  ನಗರದ ಹೊರವಲಯದಲ್ಲಿರುವ ಪ್ರತಿಷ್ಠಿತ ಸರಾಯ್ ರೆಸಾರ್ಟ್​​ನಲ್ಲಿ  ಸಾಹುಕಾರ ನಡೆಸುತ್ತಿರುವ ಈ ಸಭೆಯಲ್ಲಿ ಸಚಿವರಾದ ಸಿ.ಪಿ. ಯೋಗೇಶ್ವರ್, ಗೋಪಾಲಯ್ಯ, ಶಾಸಕ ಎಂ.ಪಿ. ಕುಮಾರಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿರುವುದು ವಿಶೇಷ. ಇವರೆಲ್ಲರೂ ನಿನ್ನೆ ರಾತ್ರಿಯೇ ಈ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿರುವುದು ತಿಳಿದುಬಂದಿದೆ. ರಮೇಶ್ ಜಾರಕಿಹೊಳಿ ನೇತೃತ್ವದ ಈ ಸಭೆಯಲ್ಲಿ ಮೂಲ ಬಿಜೆಪಿಗರೂ ಪಾಲ್ಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ

ಸಚಿನ್ ಶೆಟ್ಟಿ ಚಿಕ್ಕಮಗಳೂರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments