ಬೆಂಗಳೂರು: ನೂತನ ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಬುಗ್ಗಿಲೆದ್ದಿದೆ. ಸಿಎಂ ಕೊಟ್ಟ ಶಾಕ್ ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಡಿಸಿದ್ದಾರೆ. ತಮ್ಮಲ್ಲಿದ್ದ ಹಾಲಿ ಖಾತೆ ಕಿತ್ತುಕೊಂಡಿದ್ದಕ್ಕೆ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಧಾಕರ್ ಮನೆಗೆ ಆಗಮಿಸಿದ ಸಚಿವ ಗೋಪಾಲಯ್ಯ. ಗೋಪಾಲಯ್ಯ ಬಳಿ ಇದ್ದ ಆಹಾರ ಇಲಾಖೆ ಖಾತೆ ವಾಪಸ್. ಸುಧಾಕರ್ ಬಳಿಯಿದ್ಧ ವೈದ್ಯಕೀಯ ಶಿಕ್ಷಣ ಖಾತೆ ವಾಪಸ್. ನೂತನ ಎಂಟಿಬಿ ನಾಗರಾಜ್ ಜೊತೆ ಸಮಾಲೋಚನೆ. ಸಿಎಂ ನಿರ್ಧಾರದ ವಿರುದ್ಧ ಸಿಡಿದೇಳ್ತಾರ ವಲಸಿಗ ಸಚಿವರು?. ನೀರಿಕ್ಷೆ ಮಾಡಿದ ಖಾತೆಗಳನ್ನ ನೀಡದಿದ್ದಕ್ಕೆ ಅತೃಪ್ತಿ. ರಾಜೀನಾಮೆ ನೀಡಲು ಚಿಂತಿನೆ ನಡೆಸಿರುವ ಅಸಮಾಧಾನಿತರು. ಅಸಮಾಧಾನಿತ ಸಚಿವರ ನಡೆ ತೀವ್ರ ಕುತೂಹಲ ಮೂಡಿಸಿದೆ. ಸಚಿವ ಸುಧಾಕರ್ ಮನೆಯಲ್ಲಿ ಅಸಮಾಧಾನ ಸಚಿವ ಸಿಕ್ರೇಟ್ ಸಭೆಯನ್ನು ನಡೆಸುತ್ತಿದ್ದಾರೆ.