Thursday, September 18, 2025
HomeUncategorized‘ಅಭಿವೃದ್ಧಿ ಕಾರ್ಯಗಳಿಗೆ ಒತ್ತು: ಬಿಎಸ್ ಯಡಿಯೂರಪ್ಪ'

‘ಅಭಿವೃದ್ಧಿ ಕಾರ್ಯಗಳಿಗೆ ಒತ್ತು: ಬಿಎಸ್ ಯಡಿಯೂರಪ್ಪ’

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಸುದ್ದಿ ಹರಿದಾಡುತ್ತಿರುವ ಸಂದರ್ಭದಲ್ಲಿಯೇ, ಸಿಎಂ ಯಡಿಯೂರಪ್ಪ ‌ಶಾಸಕರ ಮನವೊಲಿಕೆಗೆ ಮುಂದಾಗಿದ್ದಾರೆ. ವಿಭಾಗವಾರು ಶಾಸಕರ ಸಭೆ ನಡೆಸುವ ಮೂಲಕ ಅಸಮಧಾನಗೊಂಡಿದ್ದ ಎಂ‌ಎಲ್‌ಎಗಳನ್ನು‌ ಸಂತೈಸುವ ಕಾರ್ಯ ಮಾಡಿದರು.

ಸದ್ಯ ರಾಜ್ಯ ಬಿಜೆಪಿಯಲ್ಲಿ ‌ನಾಯಕತ್ವ ಬದಲಾವಣೆ ಮತ್ತು ಸಂಪುಟ ‌ಪುನರ್ ರಚನೆಯ ‌ಮಾತುಗಳು ಸಾಕಷ್ಟು ಸಂಚಲನಕ್ಕೆ ಕಾರಣವಾಗಿವೆ. ಹೀಗಾಗಿ ಶಾಸಕರ ವಿಶ್ವಾಸಗಳಿಸಲು ಸಿಎಂ ಯಡಿಯೂರಪ್ಪ ‌ಮುಂದಾಗಿದ್ದು, ವಿಭಾಗವಾರು ಶಾಸಕರ ಸಭೆ‌ ನಡೆಸಿದರು. ಮೊದಲಿಗೆ ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ಸಚಿವರು ಮತ್ತು ಶಾಸಕರ ಜೊತೆ ಸಭೆ ನಡೆಸಿದ ಸಿಎಂ, ಈ ಭಾಗದಲ್ಲಿ ಬಾಕಿ‌ ಉಳಿದಿರುವ ಕೆಲಸಗಳು ಹಾಗೂ ಶಾಸಕರ‌ ಬೇಡಿಕೆಗಳ ಕುರಿತು ಸುಧೀರ್ಘ ಸಭೆ‌ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಹುತೇಕ ಶಾಸಕರು‌ ಸಚಿವರು ಮತ್ತು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಕಲ್ಯಾಣ ಕರ್ನಾಟಕದಲ್ಲಿ ಈ ಬಾರಿ ನೆರೆಯಿಂದಾಗಿ‌ ಜನರು ಮನೆ ಕಳೆದುಕೊಂಡಿದ್ದಾರೆ. ಬೆಳೆದ ಬೆಳೆ‌ ಕೈಗೆ ಸಿಕ್ಕಿಲ್ಲ. ಇದಕ್ಕೆ ಸ್ಪಂದಿಸಬೇಕಾದ್ದು, ಸರ್ಕಾರ ಮತ್ತು ಅಧಿಕಾರಿಗಳ ಕೆಲಸ, ಆದರೆ ನಮ್ಮದೇ ಸರ್ಕಾರ ಇದ್ದರೂ ಯಾವುದೇ ‌ಕೆಲಸಗಳು‌ ಆಗುತ್ತಿಲ್ಲ ಅಂತ ನಳಿನ್ ಕುಮಾರ್ ಕಟೀಲ್ ಅಸಮಾಧಾನ ಹೊರ ಹಾಕಿದರು.

ಕಲ್ಯಾಣ ಕರ್ನಾಟಕ ವಿಭಾಗದ ಸಭೆ ಬಳಿಕ ಮುಂಬೈ ಕರ್ನಾಟಕ ಹಾಗೂ ಕರವಳಿ ವಿಭಾಗದ ಶಾಸಕರ ಜೊತೆ ಸಿಎಂ ಯಡಿಯೂರಪ್ಪ ಹಾಗೂ ಮಂತ್ರಿಗಳು ಸೇರಿ ಸಮಸ್ಯೆಗಳನ್ನ ಆಲಿಸಿದರು. ಈ ಸಂದರ್ಭದಲ್ಲಿ ಬಹುತೇಕ ಶಾಸಕರು ಅನುದಾನದ ಕೊರತೆ ಮತ್ತು ಕುಂಠಿತವಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಸೆಳೆದರು. ಅಲ್ಲದೇ ಕಳೆದ ವರ್ಷ ಆದ ನೆರೆ ಹಾನಿಯ ಮನೆಗಳನ್ನು ಇನ್ನೂ ಕಟ್ಟಿಕೊಟ್ಟಿಲ್ಲ. ಹೀಗೆ ಮುಂದುವರೆದರೆ ಕ್ಷೇತ್ರದ ಜನರಿಗೆ ಮುಖ ತೋರಿಸಲಾಗುತಿಲ್ಲ ಎಂದರು.

ಪ್ರತಿಯೊಬ್ಬ ಶಾಸಕರ ಮನವಿ ಆಲಿಸಿದ ಬಳಿಕ ವಿಶ್ವಾಸ ಗಳಿಸಲು ಮುಂದಾದ ಸಿಎಂ, ಈ ಬಾರಿ ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟ ಉಂಟಾಗಿದೆ. ಅಲ್ಲದೇ ಮೂರು ಬಾರಿ ನೆರೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಕೇಂದ್ರದಿಂದ ನಿರೀಕ್ಷೆ ‌ಮಾಡಿದಷ್ಟು ಪರಿಹಾರ ಬರಲಿಲ್ಲ. ಹೀಗಾಗಿ ಸ್ವಲ್ಪ ‌ಕಷ್ಟವಾಗಿದೆ. ಈಗ ಆರ್ಥಿಕ ಪರಿಸ್ಥಿತಿ ಸುಧಾರಿಸುತಿದ್ದು, ಮುಂದೆ ನಿಮ್ಮ ಎಲ್ಲಾ ಕೆಲಸ ಮಾಡಿಕೊಡುತ್ತೇನೆ. ಹಾಗೇ ಮೂರು ತಿಂಗಳಿಗೊಮ್ಮೆ ‌ನಿಮ್ಮೊಂದಿಗೆ ಸಭೆ ಮಾಡಿ ಸಮಸ್ಯೆ ಆಲಿಸುತ್ತೇನೆ ಅಂತ  ಭರವಸೆ ‌ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments