Wednesday, September 17, 2025
HomeUncategorizedನೈಟ್ ಕರ್ಫ್ಯೂಯಿಂದ ಪಾರ್ಟಿ, ಪಬ್ ಗಳಲ್ಲಿ ವೈರಸ್ ತಪ್ಪಿಸಬಹುದು : ಸುಧಾಕರ್

ನೈಟ್ ಕರ್ಫ್ಯೂಯಿಂದ ಪಾರ್ಟಿ, ಪಬ್ ಗಳಲ್ಲಿ ವೈರಸ್ ತಪ್ಪಿಸಬಹುದು : ಸುಧಾಕರ್

ಬೆಂಗಳೂರು:  ತಾಂತ್ರಿಕ ಸಲಹಾ ಸಮಿತಿಯಿಂದ ಇಂದಿನಿಂದ ರಾತ್ರಿ 8 ಗಂಟೆಯಿಂದ ಜಾರಿ ಮಾಡಿ ಎಂಬ ಸಲಹೆ ಬಂದಿತ್ತು. ಆದರೆ ನಾವು 11 ಗಂಟೆಯಿಂದ ಮಾಡುತ್ತಿದ್ದೇವೆ. ನೈಟ್ ಕರ್ಫ್ಯೂ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿಲ್ಲ ಆರೋಗ್ಯ ಇಲಾಖೆ ಸಚಿವ ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೂ ಯಾವುದೇ ಚಟುವಟಿಕೆಗಳು ಇರುವುದಿಲ್ಲ.

ಆರ್ಥಿಕ ಹಿತ ದೃಷ್ಠಯಿಂದ 11 ಗಂಟೆಯಿಂದ ಕರ್ಫ್ಯೂಜಾರಿಮಾಡಲಾಗುತ್ತದೆ. ರಾತ್ರಿ ಕರ್ಫ್ಯೂ ಕೊರೋನಾ ನಿಯಂತ್ರಣಕ್ಕೆ ಸಹಕಾರಿ. ಪಾರ್ಟಿ, ಪಬ್ ಗಳಲ್ಲಿ ವೈರಸ್ ಹರಡುವುದನ್ನು ತಪ್ಪಿಸಬಹುದು. ಹಲವು ವ್ಯಾಪಾರಿಗಳು ಕರ್ಫ್ಯೂಗೆ ತಯಾರಿ ಮಾಡಿಕೊಳ್ಳಲು ಒಂದು ದಿನ ಅವಕಾಶ ಕೇಳಿದರು. ಆದ್ದರಿಂದ ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ ಕರ್ಫ್ಯೂ ಇದ್ದರೂ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ಸುಧಾಕರ್ ಹೇಳಿದರು.

ಡಿ.ಕೆ. ಸುರೇಶ್​ ಹೇಳಿಕೆಗೆ ಸಚಿವ ಸುಧಾಕರ್​ ಪ್ರತಿಕ್ರಿಯೆ ನೀಡಿ, ಡಿ.ಕೆ. ಸುರೇಶ್ ಅವರ ಸರ್ಟಿಫಿಕೇಟ್ ನನಗೆ ಬೇಕಿಲ್ಲ. ಸುರೇಶ್ ಹಿನ್ನಲೆ ಏನು ಅಂತ ನನಗೆ ಗೋತ್ತಿದೆ. ಅವರ ಹಾಗೆ ನಾಣು ವೈಯಕ್ತಿಕವಾದ ಟೀಕೆ ಮಾಡಲ್ಲ. ಸಂಸದರ ಬಗ್ಗೆ ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಕೊರೋನಾ ಭೀತಿ ಇಲ್ಲ. ನಾವು ಆ ಕಡೆ ಗಮನಹರಿಸಬೇಕಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಗ್ರಾಮೀಣ ಭಾಗದಲ್ಲಿ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕವನ್ನು ತಪ್ಪಿಸಬೇಕಾಗಿದೆ ಎಂದರು. ಈ ಹಿಂದೆ ಹೆಚ್ ವಿಶ್ವನಾಥ್ ಅವರು ಶಿಕ್ಷಣ ಇಲಾಖೆಯ ಸಚಿವರು ಆಗಿದ್ದರೂ, ಅವರ ಅಭಿಪ್ರಾಯಕ್ಕೆ ಗೌರವ ನೀಡುತ್ತೇನೆ ಮತ್ತು ಅವರ ಸಲಹೆಗೆ ನಾನು ಬದ್ಧನಾಗಿದ್ದೇನೆ. ಶಿಫಾರಸ್ಸಿನಂತೆ ಶಾಲೆ ಆರಂಭಿಸಲು ನಿರ್ಧರಿಸಿದ್ದೇವೆ. ಈ ಬಗ್ಗೆ ವಿಶ್ವನಾಥ್ ಜೊತೆ ವೈಯಕ್ತಿಕವಾಗಿ ಚರ್ಚಿಸುತ್ತೇನೆ ಎಂದು ಹೇಳಿದರು.

ಶಾಲೆ ಪ್ರಾರಂಭ ಮಾಡುವುದು ಸರ್ಕಾರದ ಪ್ರತಿಷ್ಠೆ ಅಲ್ಲ. ಅದು ಮಕ್ಕಳ ಬದ್ಧತೆ. ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಮಾಜಕ್ಕೆ ಅತ್ಯಗತ್ಯ. ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದೆ ಎಂದರು.  ಶಾಲೆ ಆರಂಭಿಸುವುದಕ್ಕೆ ನಾನು ಹಠ ಹಿಡಿದಿಲ್ಲ. ಸುಧಾಕರ್ ಜೊತೆ ಸಮನ್ವಯತೆ ಇಲ್ಲ ಅನ್ನೊದು ಸುಳ್ಳು. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗೆ ಹೊಂದಾಣಿಕೆ ಇದೆ. ನಾವು ವೈಯಕ್ತಿಕ ಪ್ರತಿಷ್ಠಿಕೆಗೆ ಕೆಲಸ ಮಾಡುತ್ತಿಲ್ಲ ಎಂದು ಸುರೆಶ್ ಕುಮಾರ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments