Wednesday, September 17, 2025
HomeUncategorized'ಸಿದ್ಧರಾಮಯ್ಯರವನ್ನು ಸೋಲಿಸಿದವರ ಹೆಸರು ಬಹಿರಂಗಪಡಿಸಲಿ' : ಸಚಿವ ಕೆ ಎಸ್. ಈಶ್ವರಪ್ಪ

‘ಸಿದ್ಧರಾಮಯ್ಯರವನ್ನು ಸೋಲಿಸಿದವರ ಹೆಸರು ಬಹಿರಂಗಪಡಿಸಲಿ’ : ಸಚಿವ ಕೆ ಎಸ್. ಈಶ್ವರಪ್ಪ

ಶಿವಮೊಗ್ಗ: ಬಿಜೆಪಿ ಮತ್ತು ಜೆಡಿಎಸ್ ಜೊತೆಗೆ ನಮ್ಮ ಪಕ್ಷದ ಕೆಲವರು ಸೇರಿಕೊಂಡು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿ ಬೆನ್ನಿಗೆ ಚೂರಿ ಹಾಕಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದು, ತಾಕತ್ತಿದ್ದರೆ ಬೆನ್ನಿಗೆ ಚೂರಿ ಹಾಕಿದವರು ಯಾರು ಎಂದು ಬಹಿರಂಗಪಡಿಸಲಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ.

 ಶಿವಮೊಗ್ಗದಲ್ಲಿ ಮಾದ್ಯಮಗೋಷ್ಟಿ ನಡೆಸಿ ಸಿದ್ದರಾಮಯ್ಯ ವಿರುದ್ಧ ಆಪಾದಿಸಿದ ಈಶ್ವರಪ್ಪ, ಪತ್ರಿಕಾಗೋಷ್ಟಿ ಯುದ್ದಕ್ಕೂ ಸಿದ್ಧರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದರೆ, ಬಾದಾಮಿ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಸೋಲಬೇಕಿತ್ತು ಎಂದು ಕುಟುಕಿದರು.

ಸಿದ್ದರಾಮಯ್ಯ ಅವರು ಎರಡುವರೆ ವರ್ಷದ ಬಳಿಕ ತಮ್ಮ ಸೋಲಿನ ಕಾರಣ ಹುಡುಕುತ್ತಿದ್ದಾರೆ.  ಅವರು ಮುಖ್ಯಮಂತ್ರಿಯಾಗಿದ್ದಾಗ ಜನಪರ ಕೆಲಸಗಳನ್ನು ಮಾಡಿದ್ದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಕಾಣುತ್ತಿರಲಿಲ್ಲ.  ತಮ್ಮ ಸೋಲಿಗೆ ಈಗ ಚಿಂತೆ ಮಾಡುತ್ತಿರುವ ಅವರು, ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಾ. ಪರಮೇಶ್ವರ್ ಹಾಗೂ ಶಾಸಕರುಗಳು ಸೋಲು ಕಂಡಾಗ ಏಕೆ ಚಿಂತಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. 

ಕಾಂಗ್ರೆಸ್ ಪಕ್ಷ ನನ್ನ ತಾಯಿ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಅವರು, ಖರ್ಗೆ ಮತ್ತು ಪರಮೇಶ್ವರ ಮತ್ತು ಇತರೆ ನಾಯಕರು ಸೋತಾಗ  ನೆನಪಿಸಿಕೊಳ್ಳದೇ ನನ್ನ ಸೋಲಿಗೆ ಕಾರಣರಾದ ನಾಯಕರು ಬೇಕಾದರೆ ಪಕ್ಷದಲ್ಲಿ ಇರಬಹುದು, ಇಲ್ಲ ಪಕ್ಷ ಬಿಟ್ಟು ಹೋಗಬಹುದು ಎಂದು ಹೇಳಿದ್ದಾರೆ.  ನೀವು ಸೋತಾಗ ಪಕ್ಷ ನೆನಪಾಗುತ್ತದೆಯೇ ಎಂದು ಲೇವಡಿ ಮಾಡಿದರು.

ಇನ್ನು ಸಿದ್ದರಾಮಯ್ಯ ಅವರ ಹೇಳಿಕೆಯಲ್ಲಿ ಪ್ರಬುದ್ದ ನಾಯಕತ್ವದ ಲಕ್ಷಣ ಅಲ್ಲ. ನಾವೇನು ಜಾತಿವಾದೀನಾ..? ಜೈಲಿಗೆ ಹೋಗಿ ಬಿದ್ದಿದ್ದೇನಾ..? ಎಂದು ವೇದಿಕೆ ಮೇಲೆ ಭಾಷಣ ಮಾಡಿದ್ದಾರೆ. ಹಲವು ರಾಜಕಾರಣಿಗಳು ಜೈಲಿಗೆ ಹೋಗಿ ಬಂದಿಲ್ಲ.  ಹಾಗಂತ ಅವರೆಲ್ಲ ಕಳ್ಳರಲ್ಲವಾ ಎಂದು ಪರೋಕ್ಷವಾಗಿ ಟಾಂಗ್ ನೀಡಿದ ಅವರು, ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ. ನನ್ನ ಸೋಲಿಗೆ ಪಕ್ಷದ ನಾಯಕರೇ ಎಂದು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.  ಕಾಂಗ್ರೆಸ್ ಎಲ್ಲ ಅಧಿಕಾರವನ್ನು ನೀಡಿದ್ದರೂ ಸಹ ಸಿದ್ದರಾಮಯ್ಯ ಅವರಿಗೆ ಆ ಪಕ್ಷದ ನಾಯಕರ ಮೇಲೆ ನಂಬಿಕೆ ಇಲ್ಲ.  ಅವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಂತೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಿತ್ತು. ಬಳಿಕ ಮುಖ್ಯಮಂತ್ರಿಯನ್ನಾಗಿ, ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಈಗ ವಿರೋಧ ಪಕ್ಷದ ನಾಯಕರನ್ನಾಗಿ ಕಾಂಗ್ರೆಸ್ ಮಾಡಿದೆ. ಇಷ್ಟಿದ್ದರೂ ಕೂಡ ಕಾಂಗ್ರೆಸ್ ನಾಯಕರ ಮೇಲೆ ವಿಶ್ವಾಸವಿಲ್ಲ ಎನ್ನುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಅವರು ದುರಂಹಕಾರದ ಮಾತನಾಡುತ್ತಾ, ಇಡೀ ಕಾಂಗ್ರೆಸ್ ಪಕ್ಷ ನಿರ್ನಾಮ ಮಾಡಲು ಹೊರಟಿದ್ದಾರೆ.  ತಾವು ಸೋತಿರುವುದು ಜನರ ತೀರ್ಪಿನಿಂದ ಎಂದು ಎಲ್ಲಿಯೂ ಹೇಳುತ್ತಿಲ್ಲ ಎಂದ ಅವರು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಏಕವಚನದಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು, ಇಲ್ಲ ತಮ್ಮ ಸಂಸ್ಕೃತಿ ಇದೇ ಎಂದು ಒಪ್ಪಿಕೊಳ್ಳಬೇಕು ಎಂದರು.  ಹಿಂದುಳಿದ ವರ್ಗಗಳ ಆಯೋಗ  ಸಿದ್ದಪಡಿಸಿರುವ ಜಾತಿವಾರು ಸಮೀಕ್ಷೆ ವರದಿಯನ್ನು ಈಗ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಏಕೆ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ವರದಿ ಬಿಡುಗಡೆಗೆ ಆಗ್ರಹಿಸುತ್ತಿರುವ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ, ದಲಿತರ, ಹಿಂದುಳಿದವರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments