Wednesday, September 17, 2025
HomeUncategorizedಡ್ರಗ್ಸ್​ ಮಾಫಿಯಾದಲ್ಲಿ ಶಾಸಕ ಹ್ಯಾರಿಸ್​ ಪುತ್ರ : ಪ್ರಮೋದ್​ ಮುತಾಲಿಕ್ ಆರೋಪ

ಡ್ರಗ್ಸ್​ ಮಾಫಿಯಾದಲ್ಲಿ ಶಾಸಕ ಹ್ಯಾರಿಸ್​ ಪುತ್ರ : ಪ್ರಮೋದ್​ ಮುತಾಲಿಕ್ ಆರೋಪ

ಹಾವೇರಿ :  ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಹಾಗೂ ಸೆಕ್ಸ್ ಮಾಫಿಯಾ ಸಕ್ರಿಯವಾಗಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ಅಲ್ಲದೆ ಶಾಸಕ ಹ್ಯಾರಿಸ್ ಪುತ್ರ ಕೂಡ ಡ್ರಗ್ಸ್​ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾದ ಕುರಿತಂತೆ ನಾನು 2009ರಲ್ಲೆ ದನಿ ಎತ್ತಿದ್ದೆ. ಆದ್ರೆ ಆ ಸಮಯದಲ್ಲಿ ಎಲ್ಲರೂ ನನ್ನನ್ನೂ ಟಾರ್ಗೆಟ್ ಮಾಡಿದ್ರು. ರಾಜ್ಯದಲ್ಲಿ ಡ್ರಗ್ ಮಾಪಿಯಾ ಆ್ಯಕ್ಟೀವ್ ಇದೆ ಎಂದ್ರು.

 ಡ್ರಗ್ ವಿಚಾರದಲ್ಲಿ ಇಂದ್ರಜೀತ್ ಲಂಕೇಶ್ ಹೀರೊ ಆಗೋಕೆ ಹೊರಟಿದ್ದಾರೆ. ಆದ್ರೆ ಅವರ ಅಕ್ಕ ಗೌರಿ ಲಂಕೇಶ್ ಡ್ರಗ್ಸ್ ಅಡಿಕ್ಟ್ ಆಗಿದ್ದರು. ಅವರನ್ಯಾಕೆ ಸುಧಾರಿಸುವ ಪ್ರಯತ್ನ ಮಾಡಲಿಲ್ಲ ಎಂದು ಪ್ರಶ್ನಿಸಿದ್ರು.

ಇಂದು ಕನ್ನಡ ಚಲನಚಿತ್ರ ನಟರ ಬಗ್ಗೆ ಆರೋಪ ಮಾಡೋದು ಎಷ್ಟರ ಮಟ್ಟಿಗೆ ಸರಿ? ಅದು ಅಲ್ಲದೆ ಡ್ರಗ್ಸ್ ವಿಚಾರದಲ್ಲಿ ಚಿರಂಜೀವಿ ಸರ್ಜಾರ ಹೆಸರು ತೆಗೆದುಕೊಂಡಿರೋದು ಸರಿ ಅಲ್ಲ. ಸರ್ಜಾ ಫ್ಯಾಮಿಲಿ ಉತ್ತಮ ಸಂಸ್ಕಾರ ಹೊಂದಿರೋ ಕುಟುಂಬವಾಗಿದೆ ಎಂದು ಹೇಳಿದರು. 

ಇನ್ನು ಡ್ರಗ್ಸ್ ಮಾಫಿಯಾದಲ್ಲಿ ಮುಖ್ಯವಾಗಿ ಪೊಲೀಸರು ಹಾಗೂ ರಾಜಕಾರಣಿಗಳು ಭಾಗಿಯಾಗಿದ್ದಾರೆಂದು ಆರೋಪಿಸಿದ್ರು. ಪೊಲೀಸ್‌ರಿಗೆ ಡ್ರಗ್ಸ್ ಬಗ್ಗೆ ಎಲ್ಲ ಮಾಹಿತಿ ಗೊತ್ತಿರುತ್ತೆ. ಆದ್ರೂ ಸಹ ಅವರು ಯಾವುದೇ ಕ್ರಮಕೈಗೊಳ್ಳಲ್ಲ. ಅಷ್ಟೇ ಅಲ್ಲದೇ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಡ್ರಗ್ಸ್ ಮಾಫಿಯಾದಲ್ಲಿದ್ದಾನೆ. ಪೊಲೀಸರು ನಮ್ಮ ಕಡೆಯಿಂದ ಡ್ರಗ್ಸ್ ಹತೋಟೆಗೆ ತರೊದಿಕ್ಕೆ ಆಗೋದಿಲ್ಲ ಅನ್ನೋದನ್ನ ಹೇಳಲಿ ನೋಡೋಣ. ಅವರ ಕೈಯಿಂದ ಆಗದಿದ್ರೆ ನಾನು ಮಾಡಿ ತೋರಿಸುತ್ತೇನೆ. ಸಾವಿರಾರು ಕೋಟಿ ರೂಪಾಯಿಗಳ ಲೆಕ್ಕದಲ್ಲಿ ಡ್ರಗ್ಸ್ ದಂಧೆ ನಡಿಯುತ್ತೆ ಎಂದು ಗುಡುಗಿದರು. 

RELATED ARTICLES
- Advertisment -
Google search engine

Most Popular

Recent Comments