Saturday, September 13, 2025
HomeUncategorizedಮೊಹರಂ ಭಾವೈಕ್ಯತೆ - ಈ ಆಂಜನೇಯ ದೇವರು ಹೂವನ್ನು ನೀಡುವವರೆಗೆ ಮೊಹರಂ ಹಬ್ಬವನ್ನು ಆಚರಿಸುವಂತಿಲ್ಲ..!

ಮೊಹರಂ ಭಾವೈಕ್ಯತೆ – ಈ ಆಂಜನೇಯ ದೇವರು ಹೂವನ್ನು ನೀಡುವವರೆಗೆ ಮೊಹರಂ ಹಬ್ಬವನ್ನು ಆಚರಿಸುವಂತಿಲ್ಲ..!

ಕೊಪ್ಪಳ : ನಮ್ಮದು ಭಾವೈಕ್ಯತೆಯ ನಾಡು.. ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕೆ ಕೋಮು ಗಲಭೆ ಸೃಷ್ಟಿಸಿ ಜಾತಿ ರಾಜಕಾರಣ ಮಾಡ್ತಿರೋದು ಎಲ್ಲರಿಗೂ ಗೋತ್ತಿರುವ ವಿಷಯ.. ಆದ್ರೆ ಕೊಪ್ಪಳದಲ್ಲಿ ಆಂಜನೇಯ ದೇವರು ಹೂವನ್ನು ನೀಡುವವರೆಗೆ ಮೊಹರಮ್ ಹಬ್ಬವನ್ನು ಆಚರಣೆ ಮಾಡಲಾಗುವುದಿಲ್ಲ ಹಾಗದ್ರೆ ಈ‌ ಕೊವಿಡ್ ವರ್ಷದಲ್ಲೂ ಆ ಗ್ರಾಮದಲ್ಲಿ ಮೊಹರಮ್ ಆಚರಣೆ ಆಯ್ತಾ..?? ಆಂಜನೇಯ ಹೂವನ್ನು ನೀಡಿದ್ನಾ ಅನ್ನೊದು ಮಾತ್ರ ಕೂತಹಲಕಾರಿ…

ಎಸ್.. ಹಿಂದೂ-ಮುಸ್ಲಿಂ ಬಾವೈಕೈತೆಗೆ ಹೆಸರಾದ ನಾಡು ಭಾರತ… ಅದಕ್ಕೆ ಸಾಕ್ಷಿನೇ ಕೊಪ್ಪಳದ ಕವಲೂರು ಗ್ರಾಮದಲ್ಲಿ ನೆಡೆಯುವ‌ ಮೊಹರಮ್ ಹಬ್ಬ.. ಆತ ಇಸ್ಲಾಂ ಧರ್ಮದವರಾದರೂ ಆಂಜನೇಯ ಭಕ್ತ. ಪ್ರತಿವರ್ಷ ಮೊಹರಂ ಹಬ್ಬದ ಕತ್ತಲ ರಾತ್ರಿ ದಿನ ಹಾಗೂ ದೇವರು ಹೊಳೆಗೆ ಹೋಗುವ ದಿನ ದೇವರ ಹೊರುವ ಆತನಿಗೆ ಆಂಜನೇಯ ಹೂ ನೀಡುತ್ತಾರೆ. ಆದರೆ ಈ ವರ್ಷ ಕತ್ತಲ ರಾತ್ರಿಯಂದು ಮಾತ್ರ ಹೂ ನೀಡಿದ್ದಾರೆ.. ಇಸ್ಲಾಂ ಮತ್ತು ಹಿಂದೂ ಧರ್ಮದ ವಿವಿಧ ಕೋಮಿನ ಅನೇಕ ಕುಟುಂಬಗಳು ಹಲವು ವರ್ಷಗಳಿಂದ ಈ ಗ್ರಾಮದಲ್ಲಿ ವಾಸವಾಗಿದ್ದು, ಯಾವುದೇ ಬೇದ ಭಾವ ಅನ್ನದೆ ಎಲ್ಲರು ಅನ್ಯೋನ್ಯವಾಗಿದ್ದಾರೆ.

ಗ್ರಾಮದ ಹಜಿಮ್‌ಸಾಬ್ ಇಸ್ಲಾಂ ಧರ್ಮದವನಾದರೂ ಹನುಮಂತನ ಪರಮಭಕ್ತ. ದಾವಲ್ ಮಲಿಕ್ ಮೊಹರಂ ದೇವರನ್ನೂ ಇಡುವ ಹಜಿಮ್‌ಸಾಬ್‌ಗೆ ಗ್ರಾಮದ ಆಂಜನೇಯ ಪ್ರತಿ ವರ್ಷ ಕತ್ತಲ ರಾತ್ರಿಯಂದು ಮತ್ತು ದೇವರು ಹೊಳೆಗೆ ಹೋಗುವ ದಿನ ಹೂ ನೀಡುತ್ತಿದ್ದ. ಈ ವರ್ಷ ಕೊರೋನಾ ಇರುವುದರಿಂದ ಕತ್ತಲ ರಾತ್ರಿಯಂದು ಮಾತ್ರ ಹೂ ನೀಡಿದ್ದಾರೆ. ಹಜಿಮ್‌ಸಾಬ್‌ಗೆ ಆಂಜನೇಯ ಹೂ ಕೊಡುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಇದು ಈಗ ಎಲ್ಲೆಡೆ ವೈರಲ್ ಆಗಿದೆ. ಮೊಹರಮ್ ಹಬ್ಬದ ದಿನ ಕೊಪ್ಪಳ ಬರಿ ನೆಗಟಿವ್ ವರದಿಗಳಿಗೆ ಮಾತ್ರ ಸುದ್ದಿಯಾಗ್ತಿದ್ದು ಈ ಬಾರಿ ಕೊವಿಡ್19 ನಡುವೆಯೂ ಯಾವುದೇ ಅಹಿತಕರ ಘಟನೆ ನೆಡೆಯದಂತೆ ಮುಸ್ಲಿಂ ಬಾಂಧವರು ಚಾಕಚಕ್ಯತೆಯಿಂದ ಹಬ್ಬವನ್ನು ಆಚರಿಸಿ ಯಶಸ್ವಿಗೊಳಿಸಿದ್ದಾರೆ… ಜಿಲ್ಲೆಯಲ್ಲಿ ಬಹುತೇಕ ಇವತ್ತೆ ಹಲೈ ದೇವರು ಹೊಳೆಗೆ ಹೊಗಿದ್ದು ಕೆಲವು ಕಡೆ ನಾಳೆಯ ದಿನದಂದು ಹೊಳೆಗೆ (ದಫನ್) ಹೊಗ್ತವೆ.. ಒಟ್ಟಾರೆ ಕೊರೋನಾ ಭೀತಿಯ ನಡುವೆ ಜಾಗೃತಿಯನ್ನು ಅಳವಡಿಸಿಕೊಂಡು ಸರ್ಕಾರದ ನಿಯಮದಂತೆ ಜಿಲ್ಲೆಯಲ್ಲಿ ಮೊಹರಮ್ ಹಬ್ಬವನ್ನು ಆಚರಿಸಿ ಯಶಸ್ವಿಯಾಗಿದ್ದಾರೆ ಅಂತಾನೇ ಹೇಳಬಹುದು..

-ಶುಕ್ರಾಜ ಕುಮಾರ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments