ಸೌತ್ ಆಫ್ರಿಕಾ ಮಾಜಿ ಆಲ್ ರೌಂಡರ್ ಜಾಕ್ ಕಾಲೀಸ್, ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ಲಿಸಾ ಸ್ಥಲೇಕರ್ ಹಾಗೂ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಜಹೀರ್ ಅಬ್ಬಾಸ್ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಜಾಕ್ ಕಾಲೀಸ್ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ ಹಾಗೂ 250ಕ್ಕೂ ಹೆಚ್ಚು ವಿಕೆಟ್ ಪಡೆದ ವಿಶ್ವದ ಏಕೈಕ ಕ್ರಿಕೆಟರ್..! 18 ವರ್ಷದ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಟೆಸ್ಟ್ ಮತ್ತು ಏಕದಿನ ಎರಡೂ ಮಾದರಿಯಿಂದ ಒಟ್ಟು 25 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 600ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಲಿಸಾ ಸ್ಥಲೇಕರ್ ಆಸ್ಟ್ರೇಲಿಯಾ ಪರ 2 ಒಡಿಐ ವರ್ಲ್ಡ್ಕಪ್ ( 2005 ಮತ್ತು 2013 ) ಮತ್ತು 2 ಟಿ20 ವರ್ಲ್ಡ್ಕಪ್ನಲ್ಲಿ (2010 ಮತ್ತು 2012) ಆಡಿದ್ದಾರೆ. 2001ರಲ್ಲಿ ಪದಾರ್ಪಣೆ ಮಾಡಿದ್ದ ಲಿಸಾ 2013ರಲ್ಲಿ ನಿವೃತ್ತಿ ಘೋಷಿಸಿದ್ದರು. 187 ಇಂಟರ್ನ್ಯಾಷನಲ್ ಮ್ಯಾಚ್ಗಳನ್ನು ಆಡಿ 4000ರನ್ ಬಾರಿಸಿದ್ದಾರೆ, 200ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಇನ್ನು ಪಾಕ್ ಕ್ರಿಕೆಟಿಗ ಜಹೀರ್ ಅಬ್ಬಾಸ್, ಏಷ್ಯಾದಲ್ಲಿ 100 ಪ್ರಥಮ ದರ್ಜೆ ಶತಕ ಸಿಡಿಸಿದ ವಿಶ್ವದಾಖಲೆ ನಿರ್ಮಿಸಿದ್ದಾರೆ. ಒಂದೇ ಮ್ಯಾಚ್ನ 2 ಇನ್ನಿಂಗ್ಸ್ಗಳಲ್ಲಿ 8 ಬಾರಿ ಶತಕ ಸಿಡಿಸಿದ ಹಾಗೂ ಒಂದ್ಯದ ಒಂದು ಇನ್ನಿಂಗ್ಸ್ನಲ್ಲಿ ದ್ವಿಶತಕ ಹಾಗೂ ಮತ್ತೊಂದು ಇನ್ನಿಂಗ್ಸ್ನಲ್ಲಿ ಶತಕವನ್ನು 4 ಬಾರಿ ದಾಖಲಿಸಿದ್ದಾರೆ. ಅಲ್ಲದೆ ಒಡಿಐನಲ್ಲಿ ಸತತ 3 ಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಖ್ಯಾತಿ ಹೊಂದಿದ್ದಾರೆ.