Sunday, September 14, 2025
HomeUncategorizedಡಬಲ್ ಸೆಂಚುರಿ ಸಿಡಿಸಿ ದಾಖಲೆ ಬರೆದ 22 ವರ್ಷದ ಜಾಕ್​ ಕ್ರಾಲಿ..!

ಡಬಲ್ ಸೆಂಚುರಿ ಸಿಡಿಸಿ ದಾಖಲೆ ಬರೆದ 22 ವರ್ಷದ ಜಾಕ್​ ಕ್ರಾಲಿ..!

ಸೌತಾಂಪ್ಟನ್ : ಪಾಕಿಸ್ತಾನ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್​ನಲ್ಲಿ ಇಂಗ್ಲೆಂಡ್​ನ ಉದಯೋನ್ಮುಖ  ಬ್ಯಾಟ್ಸ್​​ಮನ್, 22  ವರ್ಷದ ಜಾಕ್​​ ಕ್ರಾಲಿ ಡಬಲ್ ಸೆಂಚುರಿ (267) ಸಿಡಿಸಿದ್ದಾರೆ. ಈ ಮೂಲಕ ಅತಿ ಚಿಕ್ಕವಯಸ್ಸಲ್ಲಿ ದ್ವಿಶತಕ ಸಾಧನೆಗೈದ ಇಂಗ್ಲೆಂಡ್​​ನ 3ನೇ ಬ್ಯಾಟ್ಸ್​​ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಜಾಕ್ ಕ್ರಾಲಿ ದ್ವಿಶತಕ ಸಿಡಿಸಿ ಅಬ್ಬರಿಸಿದರು. ಇಂಗ್ಲೆಂಡ್ ಪರ ಎಲ್​. ಹಟ್ಮನ್ 22 ವರ್ಷ 58 ದಿನಕ್ಕೆ, ಡೇವಿಡ್ ಗೋವರ್ 22 ವರ್ಷ 102 ದಿನಕ್ಕೆ ಈ ಸಾಧನೆ ಮಾಡಿದ್ದರು. ಜಾಕ್ ಕ್ರಾಲಿ 22 ವರ್ಷ 201ನೇ ದಿನಕ್ಕೆ ಈ ದಾಖಲೆ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments