Sunday, September 14, 2025
HomeUncategorizedಸಿ.ಎಂ. ನಿವಾಸದಲ್ಲಿ ರಾರಾಜಿಸಿದ ಗಣಪ!

ಸಿ.ಎಂ. ನಿವಾಸದಲ್ಲಿ ರಾರಾಜಿಸಿದ ಗಣಪ!

ಶಿವಮೊಗ್ಗ: ನಾಡಿನಾದ್ಯಂತ ಕೊರೋನಾಂತಕದ ನಡುವೆ ಹಬ್ಬ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ. ಲೋಕಕ್ಕೆ ಕಂಟಕವಾಗಿರುವ ಕಿಲ್ಲರ್ ಕೊರೋನಾ ನಡುವೆ ಹಲವಾರು ಮಾರ್ಗಸೂಚಿ ನಡುವೆ ಗಣಪನ ಹಬ್ಬ ಆಚರಿಸಲಾಗುತ್ತಿದೆ. ಅದರಂತೆ, ನಾಡ ದೊರೆ ಸಿ.ಎಂ. ಯಡಿಯೂರಪ್ಪ ನಿವಾಸದಲ್ಲೂ ಈ ಬಾರಿ ಸರಳವಾಗಿ ಹಬ್ಬ ಆಚರಿಸಲಾಗುತ್ತಿದ್ದು, ತಮ್ಮ ಪುತ್ರ ಭಗತ್ ನೊಂದಿಗೆ ಸಂಸದ ರಾಘವೇಂದ್ರ ಅವರು ಮಾರುಕಟ್ಟೆಗೆ ತೆರಳಿ ಗೌರಿ-ಗಣೇಶನನ್ನು ತಂದು ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಿದ್ರು.

ಪ್ರತಿ ಗಣಪತಿ ಹಬ್ಬದ ಸಂದರ್ಭದಲ್ಲಿ ಶಿಕಾರಿಪುರದ ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದ ಸಿ.ಎಂ. ಯಡಿಯೂರಪ್ಪ ಈ ಬಾರಿ ಕೊರೋನಾ ಕಾಟದಿಂದಾಗಿ, ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದು, ಇಂದು ಸಂಜೆಯೇ, ಗೌರಿ ಮತ್ತು ಗಣೇಶನ ವಿಸರ್ಜನೆ ನೆರವೇರಲಿದೆ.

-ಗೋ.ವ. ಮೋಹನಕೃಷ್ಣ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments