Monday, September 15, 2025
HomeUncategorizedಕೋಲಾರದಲ್ಲಿ ಗಣೇಶ ಹಬ್ಬಕ್ಕೆ ಭರ್ಜರಿ ಸಿದ್ಧತೆ

ಕೋಲಾರದಲ್ಲಿ ಗಣೇಶ ಹಬ್ಬಕ್ಕೆ ಭರ್ಜರಿ ಸಿದ್ಧತೆ

ಕೋಲಾರ : ಗಣೇಶ ಹಬ್ಬಕ್ಕೆ ಕೋಲಾರ ಜಿಲ್ಲೆಯಲ್ಲಿ ಭರ್ಜರಿ ಸಿದ್ದತೆ ನಡೆದಿದೆ. ವರ್ಷಕ್ಕೊಮ್ಮೆ ಬರುವ ಈ ಹಬ್ಬದ ಆಚರಣೆಗೆ ಕೊರೋನಾ ನಡುವೆಯೂ ಜನತೆ ಉತ್ಸುಕತೆ ತೋರಿದ್ದಾರೆ. 

ಕೋಲಾರ ಜಿಲ್ಲೆಯಲ್ಲಿ ಗೌರಿ ಹಬ್ಬಕ್ಕಿಂತ ವಿನಾಯಕ ಚೌತಿಯ ಆಚರಣೆಗೆ ಹೆಚ್ಚಿನ ತಯಾರಿ ನಡೆದಿದೆ. ಜಿಲ್ಲೆಯ ಮಾರುಕಟ್ಟೆಗಳಲ್ಲಿ ಹೂವು-ಹಣ್ಣುಗಳ ಬೆಲೆ ಏರಿಕೆಯಾಗಿದ್ರೂ ಖರೀದಿಗೆ ಮುಗಿಬಿದ್ದಿರುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಕೋಲಾರ ನಗರದ ಹಳೆ ಬಸ್​ ನಿಲ್ದಾಣ, ಮಹಾತ್ಮಗಾಂಧಿ ರಸ್ತೆ, ದೊಡ್ಡಪೇಟೆ ಏರಿಯಾಗಳ ಮಾರುಕಟ್ಟೆಗಳಲ್ಲಿ ಜನರು ತುಂಬಿ-ತುಳುಕುತ್ತಿದ್ದಾರೆ.
ಕೊರೋನಾ ವೈರಸ್ ಬಗ್ಗೆ ಮೊದಲಿದ್ದಷ್ಟು ಆತಂಕ ಇಲ್ಲ ಅನ್ನೋದಿಕ್ಕೆ ಮಾರ್ಕೆಟ್ ಪ್ರದೇಶದಲ್ಲಿದ್ದ ಜನಜಂಗುಳಿಯೇ ಸಾಕ್ಷಿಯಾಗಿದೆ.

ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿರುವ ಬಗ್ಗೆ ಬಹುತೇಕರು ತಲೆ ಕೆಡಿಸಿಕೊಂಡಿಲ್ಲ ಅನ್ನೋದಕ್ಕೆ ಇಂದು ಮಾರ್ಕೆಟ್​ನಲ್ಲಿದ್ದ ಜನಸಾಗರವೇ ಸಾಕ್ಷಿಯಾಗಿತ್ತು. ಕ್ರಮ ಜರುಗಿಸಬೇಕಾದ ಸ್ಥಳೀಯ ಸಂಸ್ಥೆಗಳು, ಪೊಲೀಸ್ರು ನಿರ್ಲಕ್ಷ್ಯ ವಹಿಸಿದ್ದು, ಜನ್ರು ಖರೀದಿಯಲ್ಲಿ ಮಗ್ನರಾಗಿದ್ದಾರೆ.

-ಆರ್.ಶ್ರೀನಿವಾಸಮೂರ್ತಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments