ಹಾವೇರಿ : ಯೂರಿಯಾ ಗೊಬ್ಬರಕ್ಕಾಗಿ ಮುಗಿಬಿದ್ದ ಘಟನೆ ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದಲ್ಲಿ ನಡೆದಿದೆ. ಸಮರ್ಪಕವಾಗಿ ಗೋವಿನಜೋಳ ಬೆಳೆದು ನಿಂತಿದೆ. ಮಳೆಗಾಲ ಆದ್ದರಿಂದ ಮಳೆ ಬಂದು ಹೋದ ನಂತರ ಗೊವಿನಜೋಳಕ್ಕೆ ಯೂರಿಯಾ ಹಾಕದಿದ್ದಲ್ಲಿ ಬೆಳೆದಿರುವ ಬೆಳೆ ಕಮರಿ ಹೋಗುತ್ತದೆ. ಇದಕ್ಕಾಗಿ ದುಬಾರಿಯಾದರೂ ಸರಿ ಯೂರಿಯಾ ಗೊಬ್ಬರವನ್ನು ಖರೀದಿಸಲು ಅನ್ನದಾತರು ಮುಂದಾಗಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡ ಗೊಬ್ಬರ ವ್ಯಾಪಾರಸ್ಥರು ಮನಬಂದ ರೇಟ್ ಫಿಕ್ಸ್ ಮಾಡಿ ಮಾರಾಟ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಸಮಸ್ಯೆ ಇಲ್ಲ ಎಂದು ಹೇಳುವ ಕೃಷಿ ಸಚಿವ ಬಿ.ಸಿ ಪಾಟೀಲ್, ತಮ್ಮ ಕ್ಷೇತ್ರದಲ್ಲೆ ರೈತರು ಯೂರಿಯಾ ಗೊಬ್ಬರಕ್ಕಾಗಿ ಪರದಾಟ ನಡೆಸುತ್ತಿರುವುದು ಕಾಣುತ್ತಿಲ್ಲವೆಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಯೂರಿಯಾ ಗೊಬ್ಬರಕ್ಕಾಗಿ ಜನರ ಪರದಾಟ
RELATED ARTICLES